ಶಿವಮೊಗ್ಗಕ್ಕೆ ಬಂದು ಗಡಿಬಿಡಿಯಲ್ಲಿ ವಾಪಸ್​ ತೆರಳಿದ ಅಣ್ಣಾಮಲೈ : ಕಾರಣವೇನು

prathapa thirthahalli
Prathapa thirthahalli - content producer

Annamalai ಶಿವಮೊಗ್ಗ: ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಶಿವಮೊಗ್ಗದ ವಿಮಾನಯಾನ ಸಮಸ್ಯೆಯಿಂದಾಗಿ ಮದುವೆ ಸಮಾರಂಭದಲ್ಲಿ ತರಾತುರಿಯಲ್ಲಿ ಪಾಲ್ಗೊಂಡು ಮರಳಿದರು. ವಿಮಾನ ರದ್ದಾದ ಕಾರಣಕ್ಕೆ ಅವರು ತಮ್ಮ ಕಾರ್ಯಕ್ರಮವನ್ನು ಬೇಗನೆ ಮುಗಿಸಬೇಕಾಯಿತು.

ಸೋಮವಾರ ಅಣ್ಣಾಮಲೈ ಅವರು ಚೆನ್ನೈನಿಂದ ನೇರವಾಗಿ ಶಿವಮೊಗ್ಗಕ್ಕೆ ವಿಮಾನದಲ್ಲಿ ಆಗಮಿಸಲು ನಿರ್ಧರಿಸಿದ್ದರು. ಆದರೆ, ಅವರು ಪ್ರಯಾಣಿಸಬೇಕಿದ್ದ ಸ್ಪೈಸ್‌ ಜೆಟ್ ವಿಮಾನವು ರದ್ದಾದ ಕಾರಣ, ಮೊದಲು ಬೆಂಗಳೂರಿಗೆ ಆಗಮಿಸಿ, ಅಲ್ಲಿಂದ ಮತ್ತೊಂದು ವಿಮಾನದ ಮೂಲಕ ಶಿವಮೊಗ್ಗಕ್ಕೆ ಬರಬೇಕಾಯಿತು.

- Advertisement -

ಇದೇ ವಿಮಾನದಲ್ಲಿ ಅವರು ಬೆಂಗಳೂರಿಗೆ ಮರಳಬೇಕಿದ್ದ ಹಿನ್ನೆಲೆಯಲ್ಲಿ, ಶಿವಮೊಗ್ಗ ವಿಮಾನ ನಿಲ್ದಾಣದಿಂದ ನೇರವಾಗಿ ಒಡ್ಡಿನಕೊಪ್ಪದಲ್ಲಿರುವ ಮಲ್ಲೇಶ್ ಕನ್ವೆನ್ಷನ್ ಹಾಲ್‌ಗೆ ಆಗಮಿಸಿದರು. ಕುಮಾರೇಶ್ ಮೊದಲಿಯರ್ ಅವರ ಪುತ್ರಿ ಚೈತ್ರ ಮತ್ತು ಸಾಯಿ ಪ್ರವೀಣ್ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ ಅಣ್ಣಾಮಲೈ ಅವರು ವಧು-ವರರನ್ನು ಹಾರೈಸಿ, ತಕ್ಷಣವೇ ಮರಳಿ ವಿಮಾನ ನಿಲ್ದಾಣಕ್ಕೆ ತೆರಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಅವರು ಕೂಡ ಮದುವೆ ಸಮಾರಂಭದಲ್ಲಿ ಉಪಸ್ಥಿತರಿದ್ದು, ನವದಂಪತಿಗಳನ್ನು ಆಶೀರ್ವದಿಸಿದರು.

https://malenadutoday.com/sharavathi-pumped-storage-project-protest/

Annamalai

Annamalai

 

Share This Article