Anchor anushree marriage : ಆ್ಯಂಕರ್ ಅನುಶ್ರೀ ಮದುವೆ ದಿನಾಂಕ ನಿಗದಿ : ಮದುವೆ ಯಾವಾಗ
ಬೆಂಗಳೂರು : ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿಯರಲ್ಲಿ ಒಬ್ಬರಾದ ಆ್ಯಂಕರ್ ಅನುಶ್ರೀ ಅವರ ಮದುವೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಕಳೆದ ಕೆಲವು ದಿನಗಳಿಂದ ಅವರ ವಿವಾಹದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಿದೆ.
ನಿರೂಪಕಿ ಅನುಶ್ರೀ ಅವರು ಇದೇ ಬರುವ ಆಗಸ್ಟ್ 28 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ. ಕೊಡಗು ಮೂಲದ ಕಾರ್ಪೊರೇಟ್ ಉದ್ಯಮಿ ರೋಷನ್ ಎನ್ನುವವರ ಜೊತೆ ಅವರು ಸಪ್ತಪದಿ ತುಳಿಯಲಿದ್ದಾರೆ ಎಂದು ವರದಿಯಾಗಿದ್ದಾರೆ.
ಈ ಹಿಂದೆ, ಅನುಶ್ರೀ ಅವರು ಹಲವು ನಟರೊಂದಿಗೆ ಮದುವೆಯಾಗುತ್ತಾರೆ ಎಂಬಂತಹ ಗಾಳಿಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಆದರೆ, ಈ ಎಲ್ಲಾ ಸುದ್ದಿಗಳು ಸುಳ್ಳು ಎಂಬುದನ್ನು ಈಗಿನ ಅಧಿಕೃತ ಮಾಹಿತಿಯು ಸ್ಪಷ್ಟಪಡಿಸಿದೆ.

TAGGED:Anchor anushree marriage

