ಆನವಟ್ಟಿ : ತಡರಾತ್ರಿ ಭೀಕರ ದುರಂತ, ಕೆರೆಗೆ ಬಿದ್ದ ಕಾರು! ಒಬ್ಬರು ಸಾವು! ಇನ್ನೊಬ್ಬರು ನಾಪತ್ತೆ

anavatti Car Accident ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ಶಿವಮೊಗ್ಗ ಜಿಲ್ಲೆ, ಸೊರಬ ತಾಲೂಕು, ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಕನೆಕೊಪ್ಪ ಹೊಸೂರು ತಿರುವಿನ ಬಳಿ ತಡರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದು, ಇನ್ನೊಬ್ಬರು ನಾಪತ್ತೆಯಾಗಿದ್ದಾರೆ. 

ಶಿಕಾರಿಪುರ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಇಕೋ ಕಾರು; ಪುನೇದಹಳ್ಳಿಯ ಇಬ್ಬರು ಸಾವು anavatti Car Accident
anavatti Car Accident

ಪುನೇದಹಳ್ಳಿ ನಿವಾಸಿಗಳಾದ ನವೀನ್ ಮೃತಪಟ್ಟಿದ್ದು ರಾಮಚಂದ್ರ ಎಂಬವರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಕೆರೆಯಲ್ಲಿ ಹುಡುಕಾಟ ನಡೆದಿದೆ. ಬುಧವಾರ ಬೆಳಗಿನ ಜಾವ ಸುಮಾರು 3.20 ಗಂಟೆಯ ಸಮಯದಲ್ಲಿ  ಶಿಕಾರಿಪುರದಿಂದ ಆನವಟ್ಟಿ ಕಡೆಗೆ ಮಾರುತಿ ಇಕೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೇ ದುರಂತ ಸಂಭವಿಸಿದೆ. 

ಶಿವಮೊಗ್ಗದಲ್ಲಿ ಚುರುಕಾದ ಅಡಿಕೆ ವ್ಯಾಪಾರ! ಯಾವ ತಳಿಗೆ ಎಷ್ಟಿದೆ ರೇಟು! ದಾವಣಗೆರೆ, ಚಿತ್ರದುರ್ಗ, ಶಿರಸಿ?

ಕನೆಕೊಪ್ಪ ಹೊಸೂರು ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಆಕಸ್ಮಿಕವಾಗಿ ರಸ್ತೆ ಪಕ್ಕದ ಕೆರೆಗೆ ಉರುಳಿ ಬಿದ್ದಿದೆ. ಈ ವೇಳೆ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರಲ್ಲಿ ನವೀನ್ ಮತ್ತು ರಾಮಚಂದ್ರರವರು ನೀರಲ್ಲಿ ಮುಳಗಿದ್ದರು, ರುದ್ರೇಶ್​ ಹಾಗೂ ಮಂಜುನಾಥ್ ಎಂಬಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶಿಕಾರಿಪುರ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಇಕೋ ಕಾರು; ಪುನೇದಹಳ್ಳಿಯ ಇಬ್ಬರು ಸಾವು anavatti Car Accident
ಶಿಕಾರಿಪುರ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಇಕೋ ಕಾರು; ಪುನೇದಹಳ್ಳಿಯ ಇಬ್ಬರು ಸಾವು anavatti Car Accident

 ವಿಷಯ ತಿಳಿಯುತ್ತಿದ್ದಂತೆಯೇ ಆನವಟ್ಟಿ ಪೊಲೀಸ್ ಉಪನಿರೀಕ್ಷಕರು ಮತ್ತು ಇಆರ್‌ವಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕೆರೆಯಿಂದ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಶಿವಮೊಗ್ಗ ಪೊಲೀಸರ ಭರ್ಜರಿ ಕಾರ್ಯಾಚರಣೆ, 6.43 ಕೋಟಿ ಮೌಲ್ಯದ ಕಳವು ಮಾಲು ವಾರಸುದಾರರಿಗೆ ವಾಪಸ್!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಶಿಕಾರಿಪುರ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಇಕೋ ಕಾರು; ಪುನೇದಹಳ್ಳಿಯ ಇಬ್ಬರು ಸಾವು anavatti Car Accident: Two Dead as Vehicle Falls into Lake near Anavatti

ಶಿಕಾರಿಪುರ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಇಕೋ ಕಾರು; ಪುನೇದಹಳ್ಳಿಯ ಇಬ್ಬರು ಸಾವು anavatti Car Accident