MALENADUTODAY.COM |SHIVAMOGGA| #KANNADANEWSWEB
ಚೀಲೂರಿನ ಗೋವಿನ ಕೋವಿಯ ಬಳಿಯಲ್ಲಿ ನಡೆದಿದ್ದ ಡಬ್ಬಲ್ ಅಟ್ಯಾಕ್ ಸಂಬಂಧ ದಾವಣಗೆರೆ ಪೊಲೀಸರು ಆಂಧ್ರದ ಗುಂಟೂರಿನ ರೈಲ್ವೆ ಸ್ಟೇಷನ್ನಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ ಎಂಬ ಸುದ್ದಿ ಬೆಂಗಳೂರಿನ ಮೂಲಗಳಿಂದಲೇ ಲಭ್ಯವಾಗಿತ್ತು. ಆದರೆ , ಈ ಪ್ರಕರಣ ಇದೀಗ ರೋಚಕ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಿದೆ. ಪೊಲೀಸ್ ಹಾಗೂ ಭೂಗತ ಲೋಕದ ನಡುವಿನ ಮೈಂಡ್ ಗೇಮ್ ಆಗಿ ಬದಲಾಗುತ್ತಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಮಲೆನಾಡು ಟುಡೆಗೆ ದಾವಣೆಗೆರೆ ಪೊಲೀಸ್ ಮೂಲಗಳಿಂದ ಮಾಹಿತಿಯೊಂದು ಲಭ್ಯವಾಗಿದ್ದು, ಡಬ್ಬಲ್ ಅಟ್ಯಾಕ್ನ ಮಾಸ್ಟರ್ ಮೈಂಡ್ ತಮಿಳ್ ರಮೇಶ್ ಅರೆಸ್ಟ್ ಆಗಿಲ್ಲ ಎನ್ನಲಾಗುತ್ತಿದೆ. ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಲು ತೆರಳಿದ್ದು ನಿಜ ಆದರೆ, ಆ ಸಂದರ್ಭದಲ್ಲಿ ಇಬ್ಬರು ಎಸ್ಕೇಪ್ ಆಗಿದ್ದಾರೆ. ಅಷ್ಟರಲ್ಲಿ ಭೂಗತ ಲೋಕದ ಕಾಣದ ಕೈಗಳು ಮಾಧ್ಯಮಗಳಿಗೆ ಫೋಟೋ ಹಾಗೂ ಹೆಸರು ಸಮೇತ ಸುದ್ದಿಯೊಂದನ್ನ ರವಾನೆ ಮಾಡಿದೆ.
ಸೀನ್ ಕ್ರಿಯೇಟ್ ಮಾಡ್ತಿರೋರು ಯಾರು?
ಚೀಲೂರಿನ ಕೇಸ್ನಲ್ಲಿ ದಾವಣಗೆರೆ ಪೊಲೀಸರು ಭೂಗತ ಲೋಕದ ಕ್ರೈಂ ಸಿನಿಮಾ ಸೀನ್ಗಳಿಗೆ ತಲೆಬಗ್ಗಿಸುತ್ತಿಲ್ಲ. ಈ ಮೊದಲು ಶಿಗ್ಗಾವಿ ಪೊಲೀಸರಿಗೆ ನಾಲ್ವರು ಸರೆಂಡರ್ ಆಗಿದ್ದರು. ಆ ಸೀನ್ನಲ್ಲಿ ನ್ಯಾಮತಿ ಪೊಲೀಸರು, ಪತ್ರಕರ್ತನೊಬ್ಬನನ್ನ ಲಿಫ್ಟ್ ಮಾಡಿ ಆರೋಪಿಗಳಿಗೆ ಶಾಕ್ ಕೊಟ್ಟಿದ್ದರು.
ಇದರ ಬೆನ್ನಲ್ಲೆ ತಮಿಳ್ ರಮೇಶ್ ಹಾಗೂ ದೀಪು ಎಂಬಿಬ್ಬರು ಆರೆಸ್ಟ್ ಆಗಿದ್ದಾರೆ ಎಂಬ ಸುದ್ದಿಯನ್ನ ನಿನ್ನೆ ರಾತ್ರಿ ಡಬ್ಬಲ್ ಅಟ್ಯಾಕ್ ಕೃತ್ಯದ ಹಿಮ್ಮೇಳದಲ್ಲಿರುವವರು ಹರಿಬಿಟ್ಟಿದ್ದರು. ರಾಜಧಾನಿಯ ಸುದ್ದಿಮೂಲಗಳಲ್ಲಿಯೇ ಈ ಸುದ್ದಿ ಬಿತ್ತರವಾದ್ದರಿಂದ ಅದರ ಅಸಲಿಯತ್ತಿನ ಬಗ್ಗೆ ಅನುಮಾನ ಉಳಿದಿರಲಿಲ್ಲ. ಇದೀಗ ಮಲೆನಾಡು ಟುಡೆ ತಂಡ ವರದಿ ಸಂಬಂಧ ಕೆಲವೊಂದು ಮಾಹಿತಿ ಹೆಕ್ಕಲು ಮುಂದಾದ ಹೊತ್ತಿನಲ್ಲಿ ದಾವಣಗೆರೆ ಪೊಲೀಸ್ ಮೂಲಗಳು ಆರೋಪಿಗಳು ಅರೆಸ್ಟ್ ಆಗಿಲ್ಲ. ಇದೊಂದು ಸುಳ್ಳು ಮಾಹಿತಿ ಎನ್ನುತ್ತಿದ್ದಾರೆ.
ಹೆಸರು ಫೋಟೋ ಕೊಟ್ಟವರು ಯಾರು? ಯಾಕೆ?
ಆಂಧ್ರದ ಗುಂಟೂರು ಸ್ಟೇಷನ್ನಲ್ಲಿ ಇಬ್ಬರು ಅರೆಸ್ಟ್ ಆಗಿದ್ದಾರೆ ಅಂತಾ ಇಬ್ಬರ ಫೋಟೋಗಳನ್ನ ಮಾಧ್ಯಮಗಳಿಗೆ ಕಳುಹಿಸಿಕೊಟ್ಟವರು ಯಾರು ಎಂಬುದನ್ನ ತಿಳಿದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಆದರೆ ಪೊಲೀಸರ ಪಿಸ್ತೂಲ್ ಭಯಕ್ಕೆ ಈ ರೀತಿ ಆಟ ಕಟ್ಟುತ್ತಿದ್ಧಾರೆ ಎಂಬ ವಿಚಾರ ಗೊತ್ತಾಗುತ್ತಿದೆ. ಒಟ್ಟಾರೆ, ರಮೇಶ್ ಹಾಗೂ ದೀಪು ಬಂಧನದ ಕೇಸ್ ಕುತೂಹಲ ಮೂಡಿಸಿದ್ದು, ಕ್ಷಣಕ್ಷಣಕ್ಕೂ ದಾವಣಗೆರೆ ಪೊಲೀಸರು ಆರೋಪಿಗಳ ಗೇಮ್ಪ್ಲ್ಯಾನ್ಗಳನ್ನ ಫೇಲ್ ಮಾಡುತ್ತಿದ್ದಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilur
