amjad Shivamogga police ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 5 2025: ಪೊಲೀಸ್ ಇಲಾಖೆಯ ಎಜೆಂಟ್ ಎಂದೇ ಬಿಂಬಿತವಾಗಿದ್ದ ಅಮ್ಜದ್ ಇನ್ನಿಲ್ಲ ಅಮ್ಜದ್..ಶಿವಮೊಗ್ಗ ನಗರದಲ್ಲಿ ಒಸಿ ಇಸ್ಪೀಟು ದಂಧೆಗಳ ರುವಾರಿ ಎಂದೇ ಬಿಂಬಿತವಾಗಿದ್ದ ಹೆಸರು…ಆದರೆ ಅಸಲಿಗೆ ಅಮ್ಜದ್ ಒಂದು ರೀತಿಯಲ್ಲಿ ಪೊಲೀಸ್ ಇಲಾಖೆಗೆ ಎಜೆಂಟ್ ರೀತಿಯಾಗಿ ಗುರುತಿಸಿಕೊಂಡಿದ್ದ. ಈತ ಪೊಲೀಸ್ ಇಲಾಖೆಗೆ ಸವಾಲಾಗಿದ್ದ ಹಲವು ಪ್ರಕರಣಗಳಲ್ಲಿ ಆರೋಪಿಗಳ ಬಂಧನಕ್ಕೆ ಕಾರಣವಾಗಿದ್ದ. ಅಮ್ಜದ್ ಎಂದರೆ ಜೀವ ಬಿಡುವ ಫ್ಯಾನ್ ಗಳ ಸಂಖ್ಯೆ ಬಹುದೊಡ್ಡದಿದೆ. ತಾನು ಪೊಲೀಸ್ ಇಲಾಖೆಗೆ ಮಾಡುವ ಉಪಕಾರ ಮುಂದೊಂದು ದಿನ ನನ್ನ ಜೀವಕ್ಕೆ ಕುತ್ತಾಗುತ್ತದೆ ಎಂದು ಅಮ್ಜದ್ ಎಂದಿಗೂ ಭಾವಿಸರಲಿಲ್ಲ. ನಾನು ಮಾಡುವ ಕೆಲಸಗಳಿಗೆ ಸಾವು ಕಟ್ಟಿಟ್ಡ ಬುತ್ತಿ ಎಂದು ಅಮ್ಜದ್ ತಿಳಿದಿದ್ದ. ಹೀಗಿದ್ದರೂ ಕತ್ತಿಯ ಅಲಗಿನಲ್ಲಿ ತಾನು ಮಾಡಬೇಕಾದ ಕೆಲಸಗಳನ್ನು ಮಾಡಿ ಪೂರೈಸುತ್ತಿದ್ದ.
ಪೊಲೀಸ್ ಇಲಾಖೆಯ ಸುಮಾರು 500 ಪ್ರಕರಣಗಳಲ್ಲಿ ವಿಟ್ ನೆಸ್
ರಾಜ್ಯದ ಇತಿಹಾಸದಲ್ಲಿ ಇಷ್ಟೊಂದು ಕ್ರೈಂ ಪ್ರಕರಣಗಳಿಗೆ ಒಬ್ಬನೇ ವ್ಯಕ್ತಿ ವಿಟ್ ನೆಸ್ ಆಗಲು ಸಾಧ್ಯವೆ…ನಿಜಕ್ಕು ಇಲ್ಲ…ಆದರೆ ಅಮ್ಜದ್ ಪ್ರಾಣದ ಹಂಗು ತೊರೆದು ಪೊಲೀಸ್ ಪರವಾಗಿ ಸಾಕ್ಷಿದಾರನಾಗಿ ಗುರುತಿಸಿಕೊಂಡಿದ್ದ…ಬಹುಷ ಅಮ್ಜದ್ ಬದುಕಿದ್ದರೆ..ಆತನ ಬಗೆಗಿನ ಈ ವರದಿ ಹೊರಬರುತ್ತಿರಲಿಲ್ಲ..ಈಗ ಆತನ ಸಾವಾಗಿದೆ..ಅಮ್ಜದ್ ಬದುಕಿದ್ದಾಗ ಮಾಡಿದ ಒಳ್ಳೆಯ ಕೆಲಸ ಸಾರ್ವಜನಿಕ ರಿಗೆ ತಿಳಿಸದೆ ಹೊದರೆ, ಆತನ ಮೇಲಿರುವ ಕಪ್ಪು ಚುಕ್ಕೆ ಹಾಗೆಯೇ ಉಳಿದು ಬಿಡುತ್ತದೆ.
ಶಿವಮೊಗ್ಗದ ಕೋಮು ಸೌಹಾರ್ದತೆಯಲ್ಲಿ ಅಮ್ಜದ್ ಪಾತ್ರ
ಶಿವಮೊಗ್ಗ ಮತೀಯವಾಗಿ ಅತ್ಯಂತ ಸೂಕ್ಷ್ಮ ಪ್ರದೇಶ. ಪೊಲೀಸರಿಗೆ ಮುಸ್ಲಿಂ ಬಳಗದಲ್ಲಿ ಶಾಂತಿ ಕದಡುವ ನಿಟ್ಟಿನಲ್ಲಿ ಏನೆಲ್ಲಾ ಬೆಳವಣಿಗೆ ಆಗುತ್ತಿವೆ ಎಂಬ ಮಾಹಿತಿಯನ್ಮ ಪೊಲೀಸರಿಗೆ ಅಮ್ಜದ್ ಗೌಪ್ಯವಾಗಿ ನೀಡುತ್ತಿದ್ದ. ಆತನ ಮಾಹಿತಿ ಪಕ್ಕಾ ನಿಖರವಾಗಿರುತಿತ್ತು. ಇದರಿಂದ ಆಗುವ ಘಟನೆಗಳನ್ನು ಪೊಲೀಸರು ತಡೆಯೊಡ್ಡಲು ಸಹಕಾರವಾಗುತ್ತಿತ್ತು.ಮೊದಲೇ ಹೇಳಿದಂತೆ ಕೆಲವೊಂದು ಸತ್ಯಗಳನ್ನ ಅಮ್ಜದ್ ಬದುಕಿದ್ದರೆ ಹೇಳಲು ಸಾಧ್ಯವೇ ಇರುತ್ತಿರಲಿಲ್ಲ..ಈಗ ಹೇಳಬೇಕಾದ ಸಂದರ್ಭ ಬಂದಿದೆ. ಅದು ಮಲೆನಾಡು ಟುಡೆ ಜನತೆ ಮುಂದೆ ತರೆದಿಟ್ಟಿದೆ..
ಅಮ್ಜದ್ಗಿದೆ ದೊಡ್ಡ ಫ್ಯಾನ್ ಬೇಸ್
ಅಮ್ಜದ್ ಗೆ ಇಷ್ಟೆಲ್ಲಾ ಅಭಿಮಾನಿಗಳು ಹುಟ್ಟಿಕೊಳ್ಳೊದಕ್ಕೇ ಹೇಗೆ ಸಾಧ್ಯ ಎನ್ನುವ ಅನುಮಾನ ಹುಟ್ಟೋದು ಸಹಜ…ಆತ ಮಾಡುತ್ತಿದ್ದ ಒಳ್ಳೆಯ ಸಮಾಜ ಮುಖಿ ಕೆಲಸಗಳು ಕೈ ಹಿಡಿದಿವೆ. ಆತನಿಗೆ ಮುಸ್ಲಿಂ ರಲ್ಲದೆ ಹಿಂದುಗಳ ಪ್ರೀತಿಸುವ ವರ್ಗವೇ ಇದೆ. ಗಣಪತಿ ಹಬ್ಬ ಮಾರಿಹಬ್ಬ, ಕನ್ನಡ ರಾಜ್ಯೋತ್ಸವ ಹಬ್ಬಗಳಿಗೆ ಅಮ್ಜದ್ ಹಣಕಾಸಿನ ನೆರವು ನೀಡುತ್ತಿದ್ದ.ಅಯ್ಯಪ್ಪ ಮಾಲಧಾರಿಗಳು ಶಬರಿಮಲೈಗೆ ಹೋಗಲು ನೆರವು ನೀಡುತ್ತಿದ್ದ. ಮತೀಯವಾಗಿ ಏನೇ ಗಲಾಟೆಗಳಾದರೂ ಅದನ್ನು ತಡೆಯುವಲ್ಲಿ ಮುಂದೆ ಇರುತ್ತಿದ್ದ.

ಪೌಝಾನ್ ಬರ್ತಡೆ
ಕೆಲ ತಿಂಗಳ ಹಿಂದೆ ರೌಡಿ ಫೌಝಾನ್ ನ್ಯೂ ಮಂಡಲಿ ಪೇಪರ್ ಫ್ಯಾಕ್ಟರಿ ಬಳಿ ಬರ್ತ್ ಡೇ ಸೆಲೆ ಬ್ರೇಷನ್ ಗೆ ನೂರಾರು ರೌಡಿಗಳನ್ನ ಸೇರಿಸಿದ್ದ. ಅಲ್ಲಿ ಮುಂದಿನ ಕ್ರೈಂ ನೆಟ್ ವರ್ಕ್ ಬಗ್ಗೆ ಪ್ಲಾನ್ ಮಾಡುವ ಸಂಚು ನಡೆದಿತ್ತು..ಈ ಮಾಹಿತಿಯನ್ನ ಪೊಲೀಸರಿಗೆ ನೀಡಿ ಪ್ಲಾನ್ ಪ್ಲಾಪ್ ಮಾಡಿದ್ದೆ ಅಮ್ಜದ್ ಎನ್ನುವುದು ಪೌಝಾನ್ ಅಕ್ರೋಶಕ್ಕೆ ಕಾರಣವಾಗಿತ್ತು. ಅಂದಿನ ಪೊಲೀಸ್ ದಾಳಿಯಲ್ಲಿ ಗಾಂಜ ಪಿಸ್ತೂಲ್ ಅನ್ನ ಪೊಲೀಸರು ಸೀಜ್ ಮಾಡಿ ಪೌಝಾನ್ ಅಂಡ್ ಟೀಮನ್ನ ಜೈಲಿಗಟ್ಟಿದ್ದರು….ಅಲ್ಲಿಂದ ಶುರುವಾದ ದ್ವೇಷ ಇಂದು ಕೊಲೆಯಲ್ಲಿ ಅಂತ್ಯಕಂಡಿದೆ. ಇದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಬೇಕಿದೆ. ಅಮ್ಜದ್ ಸಾವಿಗೆ ಬಹುತೇಕ ಮಂದಿ ಕಂಬನಿ ಮಿಡಿದಿದ್ದಾರೆ . ಪೊಲೀಸ್ ಇಲಾಖೆ ಒಬ್ಬ ಪಕ್ಕ ಇನ್ ಫಾರ್ಮರ್ ಅನನ್ನ ಕಳೆದುಕೊಂಡು ಬಡವಾಗಿದೆ.

amjad Shivamogga police Informer Passes Away
Amjad Shivamogga Police Informer, Harsha Murder Case Informer, Amjad death reason, Fouzan Birthday Case Shivamogga, Communal Harmony Shivamogga, Karnataka Police Informers, ಅಮ್ಜದ್ ಶಿವಮೊಗ್ಗ, ರಾ ಏಜೆಂಟ್, ಹರ್ಷ ಕೊಲೆ ಪ್ರಕರಣ, ಪೊಲೀಸ್ ಇನ್‌ಫಾರ್ಮರ್, 500 ಪ್ರಕರಣಗಳ ಸಾಕ್ಷಿದಾರ, ಕೋಮು ಸೌಹಾರ್ದತೆ, ಫೌಝಾನ್ ದ್ವೇಷ, ಶಿವಮೊಗ್ಗ ಅಪರಾಧ ಸುದ್ದಿ, amjad Shivamogga police
ಇದನ್ನು ಸಹ ಓದಿ : ಸಿನಿಮಾ ಟಿಕೆಟ್ ಎಸೆಯದಿರಿ ದುಡ್ಡು ವಾಪಸ್ ಬರಬಹುದು, ಇ-ಪೇಪರ್ ಓದಿ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
