Agumbe Someshwara Rain Trek : ಶಿವಮೊಗ್ಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಆಗುಂಬೆ-ಸೋಮೇಶ್ವರ ಪ್ರದೇಶದಲ್ಲಿ “ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಶನ್” ವತಿಯಿಂದ 10ನೇ ವರ್ಷದ “ಮಳೆ ನಡಿಗೆ” ಪ್ರವಾಸವನ್ನು ಆಯೋಜಿಸಲಾಗಿದೆ. ಮಳೆಗಾಲದ ವಿಶೇಷ ಅನುಭವವನ್ನು ನೀಡುವ ಈ ಪ್ರವಾಸವು, ಅಪ್ಪಟ ಮಲೆನಾಡಿನ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಸುವರ್ಣಾವಕಾಶ ಕಲ್ಪಿಸುತ್ತದೆ.
ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಅಗ್ರಗಣ್ಯವಾಗಿರುವ ಆಗುಂಬೆಯು, ಮಲೆನಾಡಿನ ಸ್ವರ್ಗ ಎಂದೇ ಖ್ಯಾತಿ ಪಡೆದಿದೆ. ಪ್ರತಿ ವರ್ಷವೂ ಮಳೆಗಾಲದಲ್ಲಿ ಫೌಂಡೇಶನ್‌ನಿಂದ ಜಿಲ್ಲೆಯ ವಿವಿಧ ಮಳೆ ಬೀಳುವ ಸ್ಥಳಗಳಲ್ಲಿ ಒಂದು ದಿನದ ಮಳೆ ನಡಿಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಬಾರಿ, ಜುಲೈ 20ರ ಭಾನುವಾರದಂದು ಮತ್ತೆ “ಆಗುಂಬೆ-ಸೋಮೇಶ್ವರ” ನಡುವೆ ಈ ವಿಶೇಷ ಮಳೆ ನಡಿಗೆಯನ್ನು ಏರ್ಪಡಿಸಲಾಗಿದೆ.
Agumbe Someshwara Rain Trek ಪ್ರವಾಸದ ವಿವರಗಳು ಮತ್ತು ವಿಶೇಷತೆ
ಜುಲೈ 20ರ ಭಾನುವಾರದಂದು ಬೆಳಿಗ್ಗೆ 6 ಗಂಟೆಗೆ ಶಿವಮೊಗ್ಗದಿಂದ ಮಿನಿ ಬಸ್‌ಗಳಲ್ಲಿ ಆಗುಂಬೆಗೆ ಹೊರಟು, ಅಲ್ಲಿನ ಸೂರ್ಯಾಸ್ತಮಾನ ಗೋಪುರದಿಂದ ಸೋಮೇಶ್ವರ ದೇವಾಲಯದವರೆಗೂ 14 ತಿರುವುಗಳಲ್ಲಿ ಮಳೆಯಲ್ಲಿ ನೆನೆಯುತ್ತಾ ಹೆಜ್ಜೆ ಹಾಕುವುದು ಒಂದು ರೋಮಾಂಚನಕಾರಿ ಅನುಭವವನ್ನು ನೀಡುತ್ತದೆ. ದಾರಿಯುದ್ದಕ್ಕೂ ಸಣ್ಣಪುಟ್ಟ ಜಲಪಾತಗಳನ್ನು ವೀಕ್ಷಿಸುತ್ತಾ ಸಾಗುವ ಈ ನಡಿಗೆಯು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಲು ಉತ್ತಮ ಅವಕಾಶ.
Agumbe Someshwara Rain Trek ಸೋಮೇಶ್ವರದಿಂದ ಮತ್ತೆ ಬಸ್‌ಗಳಲ್ಲಿ ಆಗುಂಬೆಗೆ ಮರಳಿದ ನಂತರ, ಹತ್ತಿರದ ಜಲಪಾತಗಳು ಮತ್ತು ಅಪರೂಪದ ಸ್ಥಳಗಳಿಗೆ ಭೇಟಿ ನೀಡಲಾಗುತ್ತದೆ. ರಾತ್ರಿ 9:30ರ ಸುಮಾರಿಗೆ ಶಿವಮೊಗ್ಗಕ್ಕೆ ಹಿಂದಿರುಗುವ ಮೂಲಕ ಪ್ರವಾಸ ಮುಕ್ತಾಯಗೊಳ್ಳಲಿದೆ. ಈ ಪ್ರವಾಸದಲ್ಲಿ ಪರಿಸರ ಸ್ವಚ್ಛತೆ, ಪರಿಸರ ಅಧ್ಯಯನ ಮತ್ತು ಪ್ರವಾಸಿ ಸ್ಥಳಗಳ ಇತಿಹಾಸವನ್ನು ಅರಿಯಬಹುದಾಗಿದೆ. “ವಸುದೈವ ಕುಟುಂಬಕಂ” ಸಂದೇಶದಂತೆ, ಈ ಮಳೆ ನಡಿಗೆಯು ಅಪರಿಚಿತರನ್ನು ಆತ್ಮೀಯರನ್ನಾಗಿ ಪರಿವರ್ತಿಸುತ್ತದೆ.
ಒಂದು ದಿನದ ಈ ಪ್ರವಾಸದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರೂ ಭಾಗವಹಿಸಬಹುದಾಗಿದೆ. ಪ್ರವಾಸದ ಶುಲ್ಕವನ್ನು 1250 ಎಂದು ನಿಗದಿಪಡಿಸಲಾಗಿದೆ. ಇದರಲ್ಲಿ ಬೆಳಗಿನ ಕಾಫಿ, ಉಪಹಾರ, ಮಧ್ಯಾಹ್ನದ ಊಟ, ಸ್ನ್ಯಾಕ್ಸ್, ರಾತ್ರಿ ಊಟ ಮತ್ತು ಉಚಿತ ಯೋಗಾ ಟಿ-ಷರ್ಟ್ ಸೇರಿವೆ. ಜುಲೈ 17ರ ಗುರುವಾರದೊಳಗಾಗಿ ನೋಂದಾಯಿಸುವ ಕೇವಲ 45 ಜನರಿಗೆ ಮಾತ್ರವೇ ಈ ಅವಕಾಶ ಲಭ್ಯವಿರುತ್ತದೆ.
ಹೆಚ್ಚಿನ ವಿವರಗಳಿಗಾಗಿ ಯೋಗಾಚಾರ್ಯ ಅನಿಲ್ ಕುಮಾರ್ ಹೆಚ್. ಶೆಟ್ಟರ್ (9886674375), ಮಂಜು ಕಾರ್ನಳ್ಳಿ (9916138314), ಮತ್ತು ಶ್ರೀಧರ್ ಅಯ್ಯರ್ (9480354389) ಅವರನ್ನು ಸಂಪರ್ಕಿಸಲು ಕೋರಿದೆ.


