ತೀರ್ಥಹಳ್ಳಿ: ತಾಲೂಕಿನ ತಲ್ಲೂಕು ಗ್ರಾಮದ ಕೌರಿಹಣ್ಣುವಿನಲ್ಲಿ ನಡೆದಿದ್ದ ಕಳವು ಪ್ರಕರಣವನ್ನು ಭೇದಿಸುವಲ್ಲಿ ಆಗುಂಬೆ ಪೊಲೀಸರು ಕೇವಲ 24 ಗಂಟೆಗಳಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ
ಡಿಸೆಂಬರ್ 27ರಂದು ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ತಲ್ಲೂಕು ಗ್ರಾಮದ ನಿವಾಸಿ ಜೀವನ್ ಕೆ.ಆರ್. ಎಂಬುವವರ ಮನೆಗೆ ನುಗ್ಗಿದ್ದ ಕಳ್ಳರು, ಮನೆಯಲ್ಲಿದ್ದ ಸುಮಾರು 2,40,000 ರೂ. ಮೌಲ್ಯದ 20 ಗ್ರಾಂ ಬಂಗಾರದ ಒಡವೆಗಳನ್ನು ದೋಚಿ ಪರಾರಿಯಾಗಿದ್ದರು. ಈ ಕುರಿತು ಆಗುಂಬೆ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮಾಳೂರು ವೃತ್ತದ ಸಿಪಿಐ ರಾಜಶೇಖರ್ ಎಲ್. ಹಾಗೂ ಆಗುಂಬೆ ಪಿಎಸ್ಐ ಶಿವನಗೌಡ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡದಲ್ಲಿ ಸಿಬ್ಬಂದಿಗಳಾದ ದಿವಾಕರ್, ಸುರೇಶ್ ನಾಯ್ಕ, ಸುರಕ್ಷಿತ್, ವಿನಯ್ ಕುಮಾರ್, ಸುಭಾಷ್ ಹಾಗೂ ಚಾಲಕ ಅವಿನಾಶ್ ಇದ್ದರು.
ತನಿಖೆಯ ವೇಳೆ ಲಭ್ಯವಾದ ಖಚಿತ ಮಾಹಿತಿಯ ಮೇರೆಗೆ ಹೊಸನಗರ ತಾಲೂಕಿನ ಬಸವಾಪುರ ನಿವಾಸಿ ಅಶೋಕನನ್ನು ಬಂಧಿಸಲಾಗಿದೆ. ಬಂಧಿತನಿಂದ ಕಳವು ಮಾಡಲಾಗಿದ್ದ 20 ಗ್ರಾಂ ಬಂಗಾರದ ಆಭರಣಗಳು ಸೇರಿದಂತೆ ಕೃತ್ಯಕ್ಕೆ ಬಳಸಲಾಗಿದ್ದ ಬೈಕ್ನ್ನ ವಶಪಡಿಸಿಕೊಂಡಿದ್ದಾರೆ.
Agumbe Police Crack Thirthahalli Burglary Case
