ಸಾಗರ ಸುದ್ದಿ : ತಾಲ್ಲೂಕಿನ ಆನಂದಪುರದಲ್ಲಿ ಬೈಕ್ ಅಪಘಾತ ಸಂಭವಿಸಿದ್ದು ಓರ್ವರು ಸಾವನ್ನಪ್ಪಿದ್ದಾರೆ. ಆನಂದಪುರ- ಶಿಕಾರಿಪುರ ನಡುವಿನ ಹೆದ್ದಾರಿಯಲ್ಲಿ ಬೈರಾಪುರ ಬಳಿ ಈ ಘಟನೆ ಸಂಭವಿಸಿದೆ. ಬೈಕ್ ಅಪಘಾತದಲ್ಲಿ ಸ್ಥಳದಲ್ಲೇ ಓರ್ವ ಮೃತಪಟ್ಟಿದ್ದಾರೆ. ರಸ್ತೆಯ ಪಕ್ಕದಲ್ಲಿರುವ ಕಿಲೋಮೀಟರ್ ತೋರಿಸುವ ಮೈಲಿಗಲ್ಲಿಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ರಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಮೇಶ್ ತ್ಯಾಗರ್ತಿ ಗ್ರಾಪಂ ವ್ಯಾಪ್ತಿಯ ಕೋಟೆಕೊಪ ಗ್ರಾಮದ ನಿವಾಸಿ. ಶಿಕಾರಿಪುರದಿಂದ ಸ್ವಗ್ರಾಮ ಕೋಟೆಕೊಪ್ಪ ಗ್ರಾಮಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಬೈಕು ಹೆದ್ದಾರಿಯ ಪಕ್ಕದಲ್ಲಿರುವ ಮೀಟರ್ ಬೋರ್ಡ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ರಮೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಈ ಸಂಬಂಧ ಆನಂದಪುರ ಪೊಲೀಸ್ ಪಿಎಸ್ಐ ಪ್ರವೀಣ್ ಹಾಗೂ ಸಿಬ್ಬಂದಿ ಸ್ಥಳಮಹಜರ್ ನಡೆಸಿ ಕೇಸ್ ದಾಖಲಿಸಿದ್ದಾರೆ.

ಸಾಗರ: ಆನಂದಪುರ ಸಮೀಪ ಭೀಕರ ಬೈಕ್ ಅಪಘಾತ; ಕೋಟೆಕೊಪ್ಪದ ವ್ಯಕ್ತಿ ಸಾವು, Sagar: Fatal Bike Accident Near Anandapura, Kotekoppa Man Dies on the Spot
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
ಸಾಗರ: ಆನಂದಪುರ ಸಮೀಪ ಭೀಕರ ಬೈಕ್ ಅಪಘಾತ; ಕೋಟೆಕೊಪ್ಪದ ವ್ಯಕ್ತಿ ಸಾವು, Sagar: Fatal Bike Accident Near Anandapura, Kotekoppa Man Dies on the Spot
