Abbi Falls Permanently Barricaded ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರ ತಾಲೂಕಿನ ಯಡೂರು ಬಳಿಯಿರುವ ಅಬ್ಬಿ ಫಾಲ್ಸ್ (Ginikal Abbi Falls) ನಲ್ಲಿ ಪ್ರವಾಸಿಗರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಬೆನ್ನಲ್ಲೆ ಅರಣ್ಯ ಇಲಾಖೆ ಫಾಲ್ಸ್ ಪ್ರವೇಶ ದಾರಿಗೆ ಬೇಲಿ ಹಾಕಿದೆ.ಅಲ್ಲದೆ ಜಲಪಾತಕ್ಕೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ (Prohibited).
Abbi Falls Permanently Barricaded

ಈ ಹಿಂದೆ ಅರಣ್ಯ ಇಲಾಖೆ ಇಲ್ಲಿ ಪ್ರವೇಶ ನಿಷೇಧಿಸಿ, ಟ್ರೆಂಚ್‌ಗಳನ್ನು ನಿರ್ಮಿಸಿತ್ತು ಮತ್ತು ಎಚ್ಚರಿಕೆ ಫಲಕಗಳನ್ನು ಅಳವಡಿಸಿತ್ತು. ಹಾಗಿದ್ದರೂ ಪ್ರವಾಸಿಗರು ಇಲ್ಲಿಗೆ ತೆರಳುತ್ತಿದ್ದರು. ಈ ನಡುವೆ ಬೆಂಗಳೂರು ಮೂಲದ ರಮೇಶ್ (35) ಎಂಬ ಯುವಕ ನೀರಿನಲ್ಲಿ ಆಡುತ್ತಿದ್ದ ವೇಳೆ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೆ ಜಲಪಾತಕ್ಕೆ ಹೋಗುವ ದಾರಿಗೆ ಬೇಲಿಯನ್ನು ಅಳವಡಿಸಿ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಅಕ್ರಮವಾಗಿ ಅಬ್ಬಿ ಫಾಲ್ಸ್ ಪ್ರವೇಶಿಸಲು ಪ್ರಯತ್ನಿಸಿದರೆ, ಅಂತಹವರ ವಿರುದ್ಧ ಕಾನೂನು ಕ್ರಮ (Legal Action) ಜರುಗಿಸಲಾಗುವುದು ಎಂದು ಬ್ಯಾನರ್ ಕಟ್ಟಿ ಎಚ್ಚರಿಕೆ ನೀಡಿದೆ.
ಅರಣ್ಯ ಇಲಾಖೆಯ ಬ್ಯಾನರ್ನಲ್ಲಿ ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ತಲಾಸಿ ಅಬ್ಬಿ ಜಲಪಾತವು ಸುಳುಗೋಡು ಗ್ರಾಮದ ಮಾಣಿಬೈಲು ಅರಣ್ಯದ ವ್ಯಾಪ್ತಿಯಲ್ಲಿದ್ದು ಸಾರ್ವಜನಿಕರು ತಲಾಸಿ ಅಬ್ಬಿ ಜಲಪಾತಕ್ಕೆ ಭೇಟಿ ನೀಡುವುದು ಇಜುವುದು/ ಛಾಯಾಚಿತ್ರ ತೆಗೆಯುವುದು ಕರ್ನಾಟಕ ಅರಣ್ಯ ಕಾಯ್ದೆ 1963 ರ ಸೆಕ್ಷನ್ 24 ರಂತೆ ಶಿಕ್ಷಾರ್ಹ ಅಪರಾಧವಾಗಿರುತ್ತದೆ, ಆದ್ದರಿಂದ ಸಾರ್ವಜನಿಕರು ಹಾಗೂ ಪ್ರವಾಸಿಗರು ತಲಾಸಿ ಅಬ್ಬಿ ಜಲಪಾತಕ್ಕೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ.



Abbi Falls Permanently Barricaded Abbi Falls in Shivamogga’s Hosanagara is now permanently barricaded by the Forest Department. Entry is strictly prohibited, and legal action will be taken against trespassers.

ಅಬ್ಬಿ ಫಾಲ್ಸ್, ಪ್ರವಾಸಿಗ ಸಾವು, ಅರಣ್ಯ ಇಲಾಖೆ, ಹೊಸನಗರ, ಯಡೂರು, ನಿಷೇಧ, ಬೇಲಿ, ಮುನ್ನೆಚ್ಚರಿಕೆ, ಸುರಕ್ಷತೆ, Abbi Falls, Tourist Drowning, Forest Department, Hosanagara, Yedoor, Prohibited Entry, Barricade, Safety Measures, Waterfall Incident. #Shivamogga #GinikalAbbiFalls #WaterfallSafety #ForestDepartment #Hosanagara #TouristSafety #DrowningIncident #KarnatakaNews #TravelSafety #StrictAction