ಟ್ರಕ್ಕಿಂಗ್​ಗೆ ಬಂದಿದ್ದ ಯುವಕ ಸಾವು! ನೇತ್ರಾವತಿ ಪೀಕ್​ ಸ್ಪಾಟ್​ನಲ್ಲಿ ನಡೆದಿದ್ದೇನು?

KARNATAKA NEWS/ ONLINE / Malenadu today/ Jul 1, 2023 SHIVAMOGGA NEWS

ಚಿಕ್ಕಮಗಳೂರು  ಜಿಲ್ಲೆಯಲ್ಲಿ ಟ್ರಕ್ಕಿಂಗ್​ಗೆ ಎಂದು ಬಂದಿದ್ದ ಪ್ರವಾಸಿಗನೊಬ್ಬ ಹೃದಯಘಾತದಿಂದಾಗಿ ಸಾವನ್ನಪ್ಪಿದ್ಧಾನೆ. 27 ವರ್ಷದ ರಕ್ಷಿತ್ ಮೃತ ಯುವಕ. ಮೂಲತಃ ಮೈಸೂರು ಕಡೆಯವರು. 

ಮೈಸೂರಿನಿಂದ ಒಟ್ಟಾರೆ ಏಳು ಮಂದಿ ಟ್ರಕ್ಕಿಂಗ್​ಗೆ ಅಂತಾ ಚಿಕ್ಕಮಗಳೂರಿಗೆ ಆಗಮನಿಸಿದ್ದರು, ಕುದುರೆ ಮುಖದಿಂದ ನೇತ್ರಾವತಿ ಪೀಕ್ ಸ್ಪಾಟ್​ಗೆ ತೆರಳುತ್ತಿದ್ದರು. ಈ ನಡುವೆ ದಾರಿಯಲ್ಲಿಯೇ ರಕ್ಷಿತ್​ಗೆ ಎದೆನೋವು ಕಾಣಿಸಿದೆ. ತಕ್ಷಣಕ್ಕೆ ಅವರಿಗೆ ಚಿಕಿತ್ಸೆ ನೀಡಲು ಸಹ ಅಲ್ಲಿ ಸಾಧ್ಯವಿರಲಿಲ್ಲ. ಇನ್ನೂ ಸ್ಥಳದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಕಳಸಕ್ಕೆ ರವಾನೆ ಮಾಡಿದ್ದು, ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ. 

Leave a Comment