KARNATAKA NEWS/ ONLINE / Malenadu today/ Jun 23, 2023 SHIVAMOGGA NEWS
ಶಿವಮೊಗ್ಗ/ ಗ್ರಾಮಾಂತರ ಪೊಲೀಸ್ ಸ್ಟೇಷನ್ನಲ್ಲಿ ಬ್ಯಾಂಕ್ಗೆ ಕಟ್ಟಬೇಕಿದ್ದ ಧರ್ಮಸ್ಥಳ ಸಂಘದ ಹಣವನ್ನು ಕದ್ದು ಪರಾರಿಯಾದ ಬಗ್ಗೆ ಕಂಪ್ಲೆಂಟ್ ದಾಖಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಡುತ್ತಿದ್ದಾರೆ.
ಏನಿದು ಪ್ರಕರಣ?
ದಿನಾಂಕ 20-06-2023 ರಂದು ನಡೆ ಪ್ರಕರಣ ಇದಾಗಿದೆ. ಈ ಸಂಬಂಧ ತಾಲ್ಲೂಕು ಯೋಜನಾಧಿಕಾರಿ ದೂರು ನೀಡಿದ್ಧಾರೆ. ಕರಾವಳಿಯಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇತರೆ ಜಿಲ್ಲೆಗಳಿಗೂ ವಿಸ್ತರಿಸಿಕೊಂಡಿದೆ. ಶಿವಮೊಗ್ಗದಲ್ಲಿಯು ಸುಮಾರು 2750 ಸಂಘಗಳನ್ನು ರಚಿಸಲಾಗಿದೆ. ಪ್ರತಿವಾರದ ಸಭೆಯ ನಂತರ ಸಂಘದ ಸದಸ್ಯರು ಉಳಿತಾಯ ನಿದಿ ಹಾಗೂ ಸಾಲ ಮರುಪಾವತಿಯನ್ನು ಮಾಡುತ್ತಾರೆ. ಆ ಹಣವನ್ನು ಬ್ಯಾಂಕ್ಗೆ ಪಾವತಿಸಲು ಯೋಜನೆಯಲ್ಲಿ ಗ್ರಾಹಕರ ಸೇವಾ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ. ವ್ಯವಸ್ಥೆಯಡಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ಅವರ ಮೂಲಕ ಸಂಘದ ಹಣವನ್ನು ಸ್ವೀಕರಿಸಿ ಬ್ಯಾಂಕ್ಗೆ ಕಟ್ಟಬೇಕು.
ಆದರೆ ಹಸೂಡಿಯಲ್ಲಿ ಅಲ್ಲಿಯ ನಿವಾಸಿ ಪರಮೇಶ್ವರ್ ಕಳೆದ ಇಪ್ಪತ್ತನೇ ತಾರೀಖು ತಾನು ಸಂಗ್ರಹಿಸಿದ್ದ 2,70.209/- (ಎರಡು ಲಕ್ಷದ ಎಪ್ಪತ್ತು ಸಾವಿರದ ಇನ್ನೂರ ಒಂಭತ್ತು) ರೂ ಗಳನ್ನು ಬ್ಯಾಂಕ್ ಕಟ್ಟಿಲ್ಲ. ಇದರಲ್ಲಿ 1,880/- ರೂ ಗಳನ್ನು ಡ್ರಾವರ್ ನಲಿ ಬಿಟ್ಟು ಉಳಿದ 2.68,329 ರೂಪಾಯಿಯನ್ನು ತೆ್ಗೆದುಕೊಂಡು ಹೋಗಿದ್ದಾನೆ. ಈ ಸಂಬಂಧ ಆತನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು,.IPC 1860 (U/s-420) ಅಡಿಯಲ್ಲಿ ಕೇಸ್ ದಾಖಲಾಗಿದೆ.
ಶಿರಾಳಕೊಪ್ಪದ ಸಾಮಿಲ್ನಲ್ಲಿದ್ದ ಒಂಟೆಯನ್ನು ರಕ್ಷಿಸಿದ ದೆಹಲಿಯಿಂದ ಬಂದ ಇಮೇಲ್! 3-4 ರಾಜ್ಯ ದಾಟಿ ಬಂದ ಕಥೆ!
ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದಲ್ಲಿ ಬಕ್ರೀದ್ ಹಬ್ಬಕ್ಕಾಗಿ ತರಿಸಲಾಗಿದ್ದ ಒಂಟೆಯನ್ನು ಶಿರಾಳಕೊಪ್ಪ ಪೊಲೀಸ್ ಸ್ಟೇಷನ್ ಪೊಲೀಸರು ರಕ್ಷಿಸಿದ್ಧಾರೆ. ಮುಖ್ಯವಾಗಿ ಈ ರಕ್ಷಣಾ ಕಾರ್ಯಾಚರಣೆ ಹಿಂದೇ ಒಂದು ಇಮೇಲ್ ಕೆಲಸ ಮಾಡಿದೆ.
ಏನಿದು ಪ್ರಕರಣ?
ಮೂರು ನಾಲ್ಕು ರಾಜ್ಯಗಳನ್ನ ದಾಟಿಸಿಕೊಂಡು ಒಂಟೆಯನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪಕ್ಕೆ ತರಲಾಗಿತ್ತು. ಆದಾಗ್ಯು ಶಿವಮೊಗ್ಗ ಪೊಲೀಸರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. ಈ ಮಧ್ಯೆ ಒಂಟೆಯ ನಿಖರ ಸ್ಥಳದ ಜೊತೆಗೆ ವ್ಯಕ್ತಿಯೊಬ್ಬರು ದೆಹಲಿಯಿಂದ ಇಮೇಲ್ ಮಾಡಿದ್ದಾರೆ. ಶಿರಾಳಕೊಪ್ಪ ಪೊಲೀಸರು ಇಮೇಲ್ ದೂರು ನೋಡುತ್ತಿದ್ದಂತೆ ಶಾಕ್ ಆಗಿದ್ದಾರೆ. ಅಲ್ಲದೆ ತಕ್ಷಣವೇ ಮೇಲಾಧಿಕಾರಿಗಳಿಗೆ ತಿಳಿಸಿ ರೇಡ್ ಮಾಡಿದ್ದಾರೆ.
ಸಾಮಿಲ್ನಲ್ಲಿತ್ತು ಒಂಟೆ
ಪೊಲೀಸರಿಗೆ ಇಮೇಲ್ನಲ್ಲಿಯೇ ಸ್ಥಳ ಹಾಗೂ ವಿವರ ಸಿಕ್ಕಿದ್ದರಿಂದ ಅನುಕೂಲವಾಗಿತ್ತು. ಇನ್ನೂ ಶಿರಾಳಕೊಪ್ಪದ ಪಟ್ಟಣದಲ್ಲಿರುವ ಸೈಯ್ಯದ್ ಬಿಲಾಲ್ ಎಂಬವರಿಗೆ ಸೇರಿದ್ದ ಸಾಮಿಲ್ನಲ್ಲಿ ಒಂಟೆಯನ್ನು ಕಟ್ಟಿಹಾಕಲಾಗಿತ್ತು. ದಾಳಿ ನಡೆಸಿದ ಪೊಲೀಸರು ಒಂಟೆಯನ್ನು ವಶಕ್ಕೆ ಪಡೆದುಕೊಂಡು ಪ್ರಾಣಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ಧಾರೆ.
ವಿಶೇಷ ಅಂದರೆ, ಬಿಲಾಲ್ರ ಮೇಲೆ ಈ ಹಿಂದೆ ಜಿಂಕೆ ಮರಿಯನ್ನು ತನ್ನ ಸಾಮಿಲ್ನಲ್ಲಿ ಅಕ್ರಮವಾಗಿ ಇರಿಸಿಕೊಂಡಿದ್ದ ಆರೋಪ ಕೇಳಿಬಂದಿತ್ತು. ಆ ಬಗ್ಗೆಯು ಪ್ರಕರಣ ದಾಖಲಾಗಿತ್ತು. ಇದೀಗ ಒಂಟೆಯನ್ನು ಅಕ್ರಮವಾಗಿ ಇರಿಸಿಕೊಂಡ ಪ್ರಕರಣ ದಾಖಲಾಗಿದೆ.
