ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ಉದ್ಯೋಗವಕಾಶ | ಯಾರೆಲ್ಲಾ ಅರ್ಜಿ ಸಲ್ಲಿಸಬಹುದು

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 9, 2025

ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ಮೈಸೂರಿನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ ಮೇ 07 2025 ಕೊನೆಯ ದಿನಾಂಕವಾಗಿದ್ದು, ಅದರೊಳಗಾಗಿ ಆನ್ಲೈಲ್​ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇದರಲ್ಲಿ ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ 10 ಹಾಗೂ ಜೂನಿಯ‌ರ್ ಸ್ಟೆನೋಗ್ರಾಫರ್  06 ಸೇರಿದಂತೆ ಒಟ್ಟು 16 ಹುದ್ದೆಗಳು ಖಾಲಿ ಇದೆ.

ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯ ಪ್ರಕಾರ ಅಭ್ಯರ್ಥಿಗಳ ವಿದ್ಯಾರ್ಹತೆ ನೊಡುವುದಾದರೆ ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಪಿಯುಸಿ ಆಗಿರಬೇಕು. ಜೂನಿಯ‌ರ್ ಸೆಕ್ರೆಟರಿಯೇಟ್ ಸಹಾಯಕ – 36,220 ರೂಪಾಯಿ ಹಾಗೂ ಜೂನಿಯ‌ರ್ ಸ್ಟೆನೋಗ್ರಾಫರ್ 47,415 ರೂಪಾಯಿ ಸಂಭಳವನ್ನು ನಿಡಲಾಗುತ್ತಿದ್ದು,  ಇದಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 28 ಮೀರಿರಬಾರದು. 

ಅರ್ಜಿ ಶುಲ್ಕವನ್ನು ನೋಡುವುದಾದರರೆ. SC/ST/PwBD/ಮಹಿಳಾ/ಮಾಜಿ ಸೈನಿಕರ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಆದರೆ ಇತರೆ ಅಭ್ಯರ್ಥಿಗಳಿಗೆ 500 ರೂಪಾಯಿ ಶುಲ್ಕವನ್ನು ನಿಗದಿಪಡಿಸಲಾಗಿದೆ,

ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್: cftri.res.in ಇದರಲ್ಲಿ ಅರ್ಜಿ ಸಲ್ಲಿಸಬಹುದು.

SUMMARY | Central Food Technological Research Institute (FTIRE), Mysore has released a notification for the recruitment of vacant posts

KEYWORDS | Mysore,  notification,  vacant, posts, job news,

Share This Article