SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 3, 2025
ಶಿವಮೊಗ್ಗದ ಈದ್ಗಾ ಮೈದಾನದ ಜಾಗ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.. ಮೈದಾನಕ್ಕೆ ಬೇಲಿ ಹಾಕಿದ ಬಳಿಕ ಹಿಂದೂ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು. ಬಳಿಕ ಜಿಲ್ಲಾ ರಕ್ಷಣಾಧಿಕಾರಿಗಳು ತಾವೇ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು, ಅದಾದ ಬಳಿಕ ಇದೀಗ ಪೊಲೀಸರು ಈದ್ಗಾ ಮೈದಾನದ ಸುತ್ತ ಬ್ಯಾರಿಗೇಡ್‌ಗಳನ್ನು ಅಳವಡಿಸಿದ್ದಾರೆ. ಇಷ್ಟು ದಿನ ಯಾರೂ ಸಹ ಹೆಚ್ಚಾಗಿ ಗಮನ ಕೊಡದ ಆ ಜಾಗ ಈಗ ರಕ್ಷಣಾ ಪಡೆಯ ಕಣ್ಗಾವಲಿನಲ್ಲಿ ವಿವಾದದ ಜಾಗವಾಗಿ ಪರಿವರ್ತನೆಯಾಗಿದೆ.ಈ ಬೆಳವಣಿಗೆಯ ನಡುವೆ ಇದೀಗ ಈದ್ಗಾ ಮೈದಾನದ ವಿವಾದಕ್ಕೆ ಮಾಜಿ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪನವರ ಧುಮುಕಿದ್ದು, ಶಿವಮೊಗ್ಗ ಸಿಡಿಪಿ ಪ್ಲಾನ್ ಇಟ್ಟುಕೊಂಡು ಈಶ್ವರಪ್ಪನವರು ವಾಗ್ದಾಳಿ ನಡೆಸಿದ್ದಾರೆ.
ಅಷ್ಟಕ್ಕೂ ಶಿವಮೊಗ್ಗ ಸಿಡಿಪಿ ಯಲ್ಲಿ ಆ ಜಾಗಕ್ಕೆ ಯಾವ ಮಾರ್ಕ್ ಮಾಡಲಾಗಿದೆ
ಈಶ್ವರಪ್ಪನವರು ಸಿಡಿಪಿ ಪ್ಲಾನ್‌ನಲ್ಲಿ ಇಡೀ ಶಿವಮೊಗ್ಗದ ನಕ್ಷೆಯ ಚಿತ್ರಣವನ್ನು ನೀಡಿದ್ದಾರೆ. ಅದರಲ್ಲಿ ಶಿವಮೊಗ್ಗದಲ್ಲಿ ಬರುವ ಪ್ರದೇಶಗಳಿಗೆ ಕೆಲವೊಂದು ಬಣ್ಣಗಳನ್ನು ನೀಡಿ ಗುರುತಿಸಿದ್ದಾರೆ. ಸಿಡಿಪಿ ಪ್ಲಾನ್ ನಲ್ಲಿ ಈಗಾಗಲೇ 7 ಬಣ್ಣಗಳಲ್ಲಿ ಶಿವಮೊಗ್ಗದಲ್ಲಿರುವ ಆಸ್ತಿಗಳನ್ನು ಮಾರ್ಕ್ ಮಾಡಲಾಗಿದೆ.. ರೆಸಿಡೆಂಟಲ್, ಕಮರ್ಶಿಯಲ್, ಇಂಡಸ್ಟ್ರಿಯಲ್, ಪಬ್ಲಿಕ್ ಮತ್ತು ಸೆಮಿ ಪಬ್ಲಿಕ್, ಪಾರ್ಕ್ ಒಪನ್ ಸ್ಪೇಸ್, ಆಟದ ಮೈದಾನ, ಪಬ್ಲಿಕ್ ಯುಟಿಲಿಟಿ, ಟ್ರಾನ್ಸಪೋರ್ಟ್ ಮತ್ತು ಕಮ್ಯುನಿಕೇಶನ್ಸ್ ಆಸ್ತಿಗಳಿಗೆ ಬಣ್ಣಗಳಲ್ಲಿ ಮಾರ್ಕ್ ಮಾಡಲಾಗಿದೆ. ಇದರಲ್ಲಿ ಈದ್ಗಾ ಮೈದಾನವನ್ನು ಗ್ರೀನ್ ಮಾರ್ಕ್ ಮಾಡಲಾಗಿದೆ. ಪಾರ್ಕ್ ಖಾಲಿ ಜಾಗ ಆಟದ ಮೈದಾನಗಳ ಆಸ್ತಿಗಳನ್ನು ಗ್ರೀನ್ ಮಾರ್ಕ್‌ನಲ್ಲಿ ನಮೂದಿಸಲಾಗಿದೆ.
ಇನ್ನು ಸಿಡಿಪಿ ಪ್ಲಾನ್ ನಲ್ಲಿ ಹಳದಿ ಬಣ್ಣದ ಕಲರ್ ಮಾರ್ಕ್ ರೆಸಿಡೆಂಟಲ್ ಅಸ್ತಿಗಳನ್ನು ತೋರಿಸುತ್ತಿದೆ.. ನೀಲ ಬಣ್ಣಗಳ ಮಾರ್ಕ್, ಕಮರ್ಶಿಯಲ್ ಆಸ್ತಿಗಳನ್ನು ತೋರಿಸುತ್ತದೆ, ನೇರಳೆ ಬಣ್ಣ ಇಂಡಸ್ಟ್ರಿಯಲ್ ಆಸ್ತಿಗಳನ್ನು ತೋರಿಸುತ್ತದೆ, ಕೆಂಪು ಬಣ್ಣದ ಮಾರ್ಕ್ , ಪಬ್ಲಿಕ್ ಮತ್ತು ಸೆಮಿ ಪಬ್ಲಿಕ್, ಆಸ್ತಿಗಳನ್ನು ತೋರಿಸುತ್ತದೆ, ಹಸಿರು ಬಣ್ಣದ ಮಾರ್ಕ್ ಪಾರ್ಕ್, ಒಪನ್ ಸ್ಪೇಸ್(ಖಾಲಿ ಜಾಗ) ಆಟದ ಮೈದಾನದ ಆಸ್ತಿಗಳನ್ನು ತೋರುತ್ತದೆ. ಬೂದು ಬಣ್ಣದ ಕಲರ್ ಪಬ್ಲಿಕ್ ಯುಟಿಲಿಟಿ ಆಸ್ತಿಗಳನ್ನು ತೋರುತ್ತದೆ. ಇನ್ನು ಬಿಳಿ ಮತ್ತು ಕಪ್ಪು ಬಣ್ಣದ ಕಲರ್ ಟ್ರಾನ್ಸಪೋರ್ಟ್ ಮತ್ತು ಕಮ್ಯುನಿಕೇಶನ್ಸ್ ಆಸ್ತಿಗಳನ್ನು ತೋರುತ್ತದೆ.
ಈಶ್ವರಪ್ಪನವರ ವಾದವೇನು
ಈಶ್ವರಪ್ಪನವರ ಪ್ರಕಾರ ಈ ಜಾಗ ಮಹಾನಗರ ಪಾಲಿಕೆಗೆ ಸಂಬಂಧಿಸಿದ್ದು, ಅದನ್ನು ಮುಸ್ಲಿಮರು ಅನಧೀಕೃತವಾಗಿ ಆಕ್ರಮಿಸಿಕೊಂಡಿದ್ದಾರೆ. ಇದನ್ನು ಈದ್ಗಾ ಮೈದಾನ ಎಂದು ಕರೆಯುವ ಬದಲು ಆಟದ ಮೈದಾನ ಎಂದು ಕರೆಯಬಹುದು. ಈದ್ಗಾ ಮೈದಾನಕ್ಕೆ ಖಾತೆ ಇದೆ ಎಂದು ಮುಸ್ಲಿಮರು ಹೇಳುತ್ತಿದ್ದಾರೆ. ಆದರೆ ಆ ಖಾತೆಗೆ ಯಾವುದೇ ಮುಖ್ಯಸ್ಥರ ಸಹಿ ಇಲ್ಲ . ಗೆಜೆಟ್ ನೋಟಿಫಿಕೇಶನ್‌ನಲ್ಲಿ ಈದ್ಗಾ ಸುನ್ನಿ ಶಿವಮೊಗ್ಗ ನಗರ ಎಂದು ಮಾತ್ರ ನಮೂದಿಸಲಾಗಿದೆ. ಆದರೆ ಸ್ಥಳದ ವಿಳಾಸವನ್ನು ಅದರಲ್ಲಿ ಸರಿಯಾಗಿ ನಮೂದಿಸಲಿಲ್ಲ. ಅವರಿಗೆ ಈ ರೀತಿಯ ಖಾತೆ ಮಾಡಿ ಕೊಟ್ಟಿರುವುದು ಕಾನೂನು ಬಾಹಿರವಾಗಿದೆ. ಖಾತೆ ಬದಲು ಮಾಡಿದ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಬೇಕು. ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಬ್ರಹ್ಮ ಬಂದರೂ ಸಹ ಮುಸ್ಲಿಮರಿಗೆ ಆ ಜಾಗವನ್ನು ಬಿಟ್ಟುಕೊಡುವುದಿಲ್ಲ. ಈ ಎಲ್ಲಾ ಅಂಶಗಳನ್ನು ಜಿಲ್ಲಾಧಿಕಾರಿಗಳು ಗಮನಿಸುತ್ತಾರೆ ಎಂದುಕೊಳ್ಳುತ್ತೇನೆ ಎಂದರು.
SUMMARY | Former Chief Minister KS Eshwarappa has jumped into the idgah maidan controversy
KEYWORDS | KS Eshwarappa, idgah maidan, controversy, shivamogga,