ಸಾಲ ಭಾದೆ, ವಿಷ ಸೇವಿಸಿ ರೈತ ಆತ್ಮಹತ್ಯೆ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 1, 2025

ತರೀಕೆರೆ | ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ  ರೈತರೊಬ್ಬರು  ಸಾಲಭಾದೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಜಾನಾಯ್ಕ (45) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. 

ರೈತ ಮಂಜಾನಾಯ್ಕ್‌ ಯೂನಿಯನ್ ಬ್ಯಾಂಕ್‌ನಿಂದ 4.70 ಲಕ್ಷ ಸಾಲ ಪಡೆದಿದ್ದರು.  ಆದರೆ ಪದೇ ಪದೆ ಸಾಲವನ್ನು ಹಿಂದಿರುಗಿಸುವಂತೆ  ಬ್ಯಾಂಕ್ ಸಿಬ್ಬಂದಿಯು ಕಿರುಕುಳು ನೀಡುತ್ತಿದ್ದರು. ಅಷ್ಟೇ ಅಲ್ಲದೆ ಬ್ಯಾಂಕ್ ಸಿಬ್ಬಂದಿಯ ಸಾಲ ಮರು ಪಾವತಿಸುವಂತೆ  ಮಂಜಾನಾಯ್ಕ್‌ ರವರಿಗೆ ಲಾಯ‌ರ್ ಮುಕಾಂತರ  ನೋಟಿಸ್‌ನ್ನು ಕಳುಹಿಸಿದ್ದರು. ಹಣ ಇಲ್ಲಿದಿದ್ದ ಸಂದರ್ಭದಲ್ಲಿ ಸಾಲ ಕಟ್ಟದೇ  ಇದ್ದಾಗ ಮಂಜಾನಾಯ್ಕ ಅವರನ್ನ ಬ್ಯಾಂಕ್ ಸಿಬ್ಬಂದಿಯು ಗ್ರಾಮಸ್ಥರ ಮುಂದೆಯೂ ನಿಂದಿಸಿದ್ದರು ಎನ್ನಲಾಗಿದೆ. ಹೀಗಾಗಿ ಮಂಜಾನಾಯ್ ಮನನೊಂದು ಮರ್ಯಾದೆಗೆ ಅಂಜಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಮಂಜಾನಾಯ್ಕ ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

SUMMARY | A farmer committed suicide at Hunaghatta village in Tarikere taluk of Chikkamagaluru district.

KEYWORDS | farmer, suicide, Tarikere, Chikkamagaluru, 

Share This Article