SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 28, 2025
ಶಿವಮೊಗ್ಗದ ಶರಾವತಿ ನಗರದಲ್ಲಿ ನಿನ್ನೆ 20 ವರ್ಷದ ಉಲ್ಲಾಸ್ ಬೈಕ್ ಅಫಘಾತದಲ್ಲಿ ತಲೆಗೆ ತೀವೃವಾಗಿ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾನೆ. ಕೈಯಲ್ಲಿ ಹೆಲ್ಮೆಟ್ ಇದ್ದರೂ ಸಹ ಅದನ್ನು ಧರಿಸದೆ ಬೈಕ್ ಚಲಾಯಿಸಿದ್ದೇ ಆತನ ಸಾವಿಗೆಕಾರಣವಾಗಿದೆ ಎನ್ನಲಾಗಿದೆ.
ಈ ಹಿನ್ನೆಲೆ ಯುವಕನ ತಂದೆಯ ಗೆಳೆಯರೊಬ್ಬರು ಇಂದು ಮೃತರ ಪಾರ್ಥಿವ ಶರೀರದ ಎದುರುಗಡೆ ನಿಂತು ಬೈಕ್‌ನ್ನು ಚಲಾಯಿಸುವಾಗ ಹಿರಿಯರಿಂದ ಕಿರಿಯರ ವರೆಗೂ ಎಲ್ಲರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ. ಧರಿಸುವುದಷ್ಟೇ ಅಲ್ಲದೆ ಹೆಲ್ಮೆಟ್ನಲ್ಲಿರುವ ಲಾಕ್ ಅನ್ನು ಸರಿಯಾಗಿ ಹಾಕಿಕೊಳ್ಳಿ. ಹೆಲ್ಮೆಟ್ ಇದ್ದಿದ್ದರೆ ನನ್ನ ಗೆಳೆಯನ ಮಗ ಇಂದು ಬದುಕುತ್ತಿದ್ದ. ದಯವಿಟ್ಟು ಎಲ್ಲರು ಹೆಲ್ಮೆಟ್ ಅನ್ನು ಧರಿಸಿ ಎಂದು ಕೇಳಿಕೊಂಡಿದ್ದಾರೆ. ಅವರ ಈ ವಿಡಿಯೋವನ್ನು ಶಿವಮೊಗ್ಗ ಸಂಚಾರಿ ಪೊಲೀಸರು ತಮ್ಮ ಖಾತೆಯಲ್ಲಿ ಹಂಚಿಕೊಂಡು ವಾಹನ ಸವಾರರಲ್ಲಿ ಅರಿವನ್ನು ಮೂಡಿಸುತ್ತಿದ್ದಾರೆ.
Always Wear an ISI Marked Helmet @Shivamogga_SP pic.twitter.com/US47blS5XU
— Shivamogga Traffic Police (@Shimoggatraffic) March 28, 2025
SUMMARY | A 20-year-old man, Ullas, died of head injuries in a bike accident at Sharavathi Nagar in Shivamogga district yesterday
KEYWORDS | Ullas, died, bike accident, Shivamogga,