ಆಫೀಸ್‌ನಲ್ಲಿ ಕಾಣಿಸಿಕೊಂಡ ಅಪರೂಪದ ಕಾಮನ್‌ ಕುಕ್ರಿ ಹಾವು 

ಹಂಚಿಕೊಳ್ಳಿ
WhatsApp Facebook X Telegram
ಆಫೀಸ್‌ನಲ್ಲಿ ಕಾಣಿಸಿಕೊಂಡ ಅಪರೂಪದ ಕಾಮನ್‌ ಕುಕ್ರಿ ಹಾವು 

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 28, 2025

ಬೇಸಿಗೆ ಬರುತ್ತಿದ್ದಂತೆ  ಹಾವುಗಳು ಸಹ ಅಲ್ಲಿ ಇಲ್ಲಿ ತಂಪಾದ ಪ್ರದೇಶಗಳನ್ನು ಹುಡುಕುತ್ತಾ ಇರುತ್ತವೆ. ಕೆಲವೊಮ್ಮೆ ಮನೆ ಹಾಗೂ ಆಫೀಸ್‌ ಒಳಗೂ ಸಹ ನುಸುಳಿ ಅಲ್ಲೆ ಠಿಕಾಣಿ ಹೂಡುತ್ತವೆ . ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗದ ವೆಯೋಲಿಯಾ ಇಂಡಿಯಾ ಪ್ರೈವೆಟ್ ಲಿಮಿಟೆಡ್  ಆಫಿಸ್‌ನಲ್ಲಿ  ಕಾಮನ್‌ ಕುಕ್ರಿ ಎಂಬ ಜಾತಿಯ ಹಾವು ಸೇರಿಕೊಂಡಿತ್ತು. ಇದನ್ನು ನೋಡಿ ಗಾಬರಿಯಾದ ಸಿಬ್ಬಂದಿಗಳು ಉರಗ ತಜ್ಙ ಸ್ನೇಕ್‌ ಕಿರಣ್‌ರವರಿಗೆ ಫೋನ್‌ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ದಾವಿಸಿದ ಸ್ನೇಕ್‌ ಕಿರಣ್‌ ಹಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.

ಅಪರೂಪದ ಹಾವುಗಳಲ್ಲಿ ಇದು ಸಹ ಒಂದಾಗಿದ್ದು, ಇದು ಮನುಷ್ಯನ ಬೆರಳಿನಷ್ಟು ದಪ್ಪವಿರುತ್ತದೆ.  ನೋಡಲು ಕಾಫಿ ಬಣ್ಣದಲ್ಲಿದ್ದು, ಮೈಮೇಲೆ ಕಪ್ಪು ಬಣ್ಣದ ಪಟ್ಟೆಗಳಿರುತ್ತದೆ. ಜಗತ್ತಿನಲ್ಲಿರುವ ವಿಷರಹಿತ ಹಾವುಗಳಲ್ಲಿ ಇದು ಸಹ ಒಂದಾಗಿದೆ.

SUMMARY | The office included a snake of the common kukri species. 

KEYWORDS | office, snake, common kukri, 

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor