ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಸಂಬಂಧ ಮತ್ತೊಂದು ಬಿಗ್ ಅಪ್‌ಡೇಟ್ಸ್
Sharavathi Pump Storage Project Update

SHIVAMOGGA| MALENADUTODAY NEWS | ಮಲೆನಾಡು ಟುಡೆ Mar 5, 2025
ವಿರೋಧಕ್ಕೂ ಗುರಿಯಾಗಿರುವ ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿಚಾರದಲ್ಲಿ ರಾಜ್ಯ ಸರ್ಕಾರ ಇನ್ನೊಂದು ಹೆಜ್ಜೆಯನ್ನು ಮುಂದಿಟ್ಟಿದೆ. 2,000 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆಯು ಅನುಮೋದನೆಯ ಕೊನೆಘಟ್ಟದಲ್ಲಿದೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ. ಕಳೆದ ಜನವರಿಯಲ್ಲಿ ಈ ಪ್ರಾಜೆಕ್ಟ್ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯಿಂದ ಅನುಮೋದನೆ ಪಡೆದಿತ್ತು. ಈ ನಂತರ ಇದೀಗ ಶರಾವತಿ ಪಂಪ್-ಸ್ಟೋರೇಜ್ ಯೋಜನೆಯು ರಾಜ್ಯ ಸರ್ಕಾರದಿಂದ ಅಂತಿಮ ಅನುಮೋದನೆಯನ್ನು ಪಡೆದುಕೊಳ್ಳುವ ಹಂತದಲ್ಲಿದೆ.
ವರದಿ ಪ್ರಕಾರ, ಹಂತ1 ಅನುಮೋದನೆಗಾಗಿ ಪ್ರಸ್ತಾವನೆಯನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (Ministry of Environment, Forests and Climate Change (MoEF&CC)) ಕ್ಕೆ ಕಳುಹಿಸಲಾಗಿದೆ. ಇಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆಯಡಿಯಲ್ಲಿ ಯೋಜನೆ ಅನುಮೋದನೆಗೊಂಡಲ್ಲಿ ಕಾಮಗಾರಿ ಆರಂಭವಾಗಲಿದೆ.
2,000 MW ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿರುವ ಜಲವಿದ್ಯುತ್ ಯೋಜನೆಗೆ ಒಟ್ಟು ಒಟ್ಟು 142.763 ಹೆಕ್ಟೇರ್ ಭೂಮಿ ಅಗತ್ಯವಿದೆ. ಈ ಯೋಜನೆಗೆ ಕಳೆದ ಜನವರಿಯಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಕೆಲವೊಂದು ಷರತ್ತುಗಳ ಅಡಿಯಲ್ಲಿ ಅನುಮೋದನೆಯನ್ನು ನೀಡಿತ್ತು. ಇನ್ನೊಂದೆಡೆ ಪರಿಸರ ಪ್ರೇಮಿಗಳು ಯೋಜನೆಯಿಂದ ಆಗುವ ಅಪಾಯವನ್ನು ಮುಂದಿಟ್ಟು ಯೋಜನೆಯನ್ನು ಅನುಷ್ಟಾನಗೊಳಿಸುವುದು ಸರಿಯಲ್ಲ ಎಂದು ವಿರೋಧಿಸುತ್ತಿದ್ದಾರೆ.
ನಾಳೆ ಸಭೆ
ಇನ್ನೊಂದೆಡೆ ಯೋಜನೆಗೆ ತಳಕಳಲೆ ಗ್ರಾಮದ ಮರಾಠಿ ಕೇರಿಯಲ್ಲಿ ಭೂಸ್ವಧೀನ ಪ್ರಕ್ರಿಯೆಗೆ ಕಂದಾಯ ಇಲಾಖೆ ಚಾಲನೆ ನೀಡಲಾಗಿದೆ. ಈ ಸಂಬಂಧ ಮರಾಠಿ ಕೇರಿ ಗ್ರಾಮಸ್ಥರ ಜೊತೆಗೆ ಮಾರ್ಚ್ ಆರರಂದು ಸಭೆ ನಡೆಯಲಿದೆ.