ಸಿಗಂದೂರು ದೇವಿ ದರ್ಶನಕ್ಕೆ ಬಂದು ಸೇತುವೆ ನೋಡಿ ಥ್ರೀಲ್‌ ಆದ ನಟ | ಹೇಳಿದ್ದೇನು 

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 26, 2025

ಸಿಗಂದೂರು ಸೇತುವೆ  ಇದೇ ಮೇ ತಿಂಗಳ ಕೊನೆವಾರ ಅಥವಾ ಜೂನ್ ಮೊದಲ ವಾರ  ಲೋಕಾರ್ಪಣೆಗೊಳ್ಳಲಿದೆ. ದೇಶದ ಎರಡನೇ ಅತಿ ಉದ್ದದ ಕೇಬಲ್‌ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸೇತುವೆಯ ವೈಭವವನ್ನು ಈಗಾಗಲೇ ಅನೇಕ ಜನರು ಕಣ್ತುಂಬಿಕೊಂಡು ಖುಷಿ ಪಡುತ್ತಿದ್ದಾರೆ, ಅಷ್ಟೇ ಅಲ್ಲದೆ ಅನೇಕರು ಆ ಸೇತುವೆಯಲ್ಲಿ ಸಂಚರಿಸಲು ಉತ್ಸುಕತೆಯಿಂದ ಕಾದು ಕುಳಿತಿದ್ದಾರೆ. ಇದರ ನಡುವೆ ಕನ್ನಡ ಚಿತ್ರರಂಗದ  ನಟರಾಗಿರುವ ಶರಣ್‌ರವರು  ಸಿಗಂದೂರು ದೇವಸ್ಥಾನಕ್ಕೆ ಭೇಟಿಕೊಟ್ಟಿದ್ದು. ಅಈ ವೇಳೆ ಸೇತುವೆ ನೋಡಿ ಅದರ ದೃಶ್ಯವನ್ನು ಸೆರೆ ಹಿಡಿದು ಪೋಸ್ಟ್ ಹಾಕಿಕೊಂಡಿದ್ದಾರೆ.



ಶರಣ್‌ ರವರು ಆ ವಿಡಿಯೋಗೆ ಸಿಗಂದೂರು ಚೌಡೇಶ್ವರಿ ಅಮ್ಮನವರ ದರ್ಶನಕ್ಕೆಂದು ಲಾಂಚ್ ದೋಣಿಯಲ್ಲಿ ಹೋಗುವ ಅನುಭವವೇ ಸ್ಮರಣೀಯ. ಇನ್ನೇನು ಕೆಲವೆ ದಿನಗಳಲ್ಲಿ ಸೇತುವೆ ತೆರೆಯುತ್ತದೆ.  ಲಾಂಚ್ ನ ಖುಷಿಯ ಜೊತೆಗೆ ಅಮ್ಮನವರ ದರ್ಶನ, ಮರೆಯಲಾಗದ ಅನುಭವವೇ ಸರಿ ಎಂಬ ಕ್ಯಾಪ್ಷನ್‌ ಅನ್ನು ಕೊಟ್ಟು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

SUMMARY | Sharan, who is an actor from the Kannada film industry, visited the Sigandur temple.

KEYWORDS | Sharan,Sigandur temple, Kannada film, twitter,  

Share This Article