15 ದಿನದೊಳಗೆ ಮಹಾನಗರ ಪಾಲಿಕೆ ಚುನಾವಣೆ ದಿನಾಂಕ ಘೋಷಿಸಿ | ಕೆ ಎಸ್‌ ಈಶ್ವರಪ್ಪ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 25, 2025

ಶಿವಮೊಗ್ಗ | ಮಹಾನಗರ ಪಾಲಿಕೆ ಚುನಾವಣೆಗೆ ಚುನಾವಣ ಆಯೋಗ ಫೈನಲ್‌ ಡೇಟ್‌ ಫಿಕ್ಸ್‌ ಮಾಡುವಂತೆ ಚುನಾವಣಾ ಅಧಿಕಾರಿಗಳಿಗೆ ರಾಷ್ಟ್ರಭಕ್ತ ಬಳಗದ ವತಿಯಿಂದ ಮನವಿ ಮಾಡುತ್ತೇವೆ. ಅದಕ್ಕೆ ಚುನಾವಣಾ ಅಧಿಕಾರಿಗಳು ಒಪ್ಪದಿದ್ದರೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮಾಜಿ ಡಿಸಿಎಂ ಕೆ ಎಸ್‌ ಈಶ್ವರಪ್ಪ ತಿಳಿಸಿದರು.

ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮೊನ್ನೆ ಶಿವಮೊಗ್ಗ ನಗರಕ್ಕೆ ಉಪ ಲೋಕಾಯುಕ್ತರು ಬಂದ ನಂತರ ಶಿವಮೊಗ್ಗ ಮಹಾನಗರ ಪಾಲಿಕೆಯೆ ಆಡಳಿತದ ಪರಿಸ್ಥಿಯನ್ನು ಈಗಲಾದರೂ ರಾಜ್ಯ ಸರ್ಕಾರ ಗಮನಿಸಿದೆ ಎಂದು ನಾನು ಭಾವಿಸುತ್ತೇನೆ. ಚುನಾಯಿತ ಪ್ರತಿನಿಧಿ ಇಲ್ಲದೆ ಶಿವಮೊಗ್ಗ ಮಹನಗರ ಪಾಲಿಕೆ ಕಸದ ತೊಟ್ಟಿಯಾಗಿದೆ ಎಂಬ ವಿಷಯವನ್ನು ಉಪಲೋಕಾಯುಕ್ತರು ತಿಳಿಸಿದ್ದಾರೆ. ನಮ್ಮ ಜಿಲ್ಲೆಯೆ ಜಿಲ್ಲಾ ಉಸ್ತುವಾರಿ ಸಚಿವರು ಆಶ್ರಯ ಯೋಜನೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು  12 ಕೋಟಿ ರೂಪಾಯಿಗಳನ್ನು ನೀಡುತ್ತೇನೆಂದು ಹೇಳಿ 6 ತಿಂಗಳು ಕಳೆಯಿತು. ಆದರೆ ಇದುವರೆಗೂ ಆ ಹಣ ಬಿಡುಗಡೆ ಮಾಡಲಿಲ್ಲ. ಇದರ ನಡುವೆ ಉಪ ಲೋಕಾಯುಕ್ತರು ಶಿವಮೊಗ್ಗ ಮಹಾನಗರ ಪಾಲಿಕೆಗೆ ಎಷ್ಟು ಬೇಕಾದರೂ ಹಣ ನೀಡುತ್ತೇನೆ ಎಂದು ಹೇಳಿದ್ದಾರೆ. ಈ ಸರ್ಕಾರವನ್ನು ನಂಬಿ ಅದು ಯಾವ ಧೈರ್ಯದ ಮೇಲೆ ಈ ರೀತಿ ಹೇಳಿಕೆ ನೀಡಿದ್ರೋ ಗೊತ್ತಿಲ್ಲ . ಈಗ ಚುನಾವಣಾ ಅಧಿಕಾರಿಗಳು 7 ಮಹಾನಗರ ಪಾಲಿಕೆಗೆಳ ಚುನಾವಣೆಗಳನ್ನು ಶೀಘ್ರದಲ್ಲಿ ನಡೆಸುತ್ತೇವೆ ಎಂದು ಹೇಳಿದ್ದಾರೆ. ಇನ್ನು 15 ದಿನದ ಒಳಗೆ ಚುನಾವಣೆ ಫೈನಲ್‌ ಡೇಟ್‌ನ್ನು ಅಧಿಕಾರಿಗಳು ಘೋಷಿಸಬೇಕು. ಹಾಗೆಯೇ  ಮಹಾನಗರ ಪಾಲಿಕೆ ಚುನಾವಣೆಗೆ ಚುನಾವಣಾ ಆಯೋಗ ಫೈನಲ್‌ ಡೇಟ್‌ ಫಿಕ್ಸ್‌ ಮಾಡುವಂತೆ  ನಿಯೋಗ ರಚಿಸಿ ಚುನಾವಣಾ ಅಧಿಕಾರಿಗಳಿಗೆ ರಾಷ್ಟ್ರಭಕ್ತ ಬಳಗದ ವತಿಯಿಂದ ಮನವಿ ಮಾಡುತ್ತೇವೆ. ಅದಕ್ಕೆ ಚುನಾವಣಾ ಅಧಿಕಾರಿಗಳು ಒಪ್ಪದಿದ್ದರೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

SUMMARY | On behalf of the Rashtrabhakta Balaga, we appeal to the election authorities to fix the final date for the municipal corporation elections

KEYWORDS |  Rashtrabhakta Balaga, election authorities,  k s eshwarappa,

Share This Article