ನಕಲಿ ಚಿನ್ನದ ನಾಣ್ಯ ಕೊಟ್ಟು 7 ಲಕ್ಷ ರೂಪಾಯಿ ವಂಚನೆ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 25, 2025

ನಕಲಿ ಚಿನ್ನದ ನಾಣ್ಯ ನೀಡಿ ಹಾಸನದ ವ್ಯಕ್ತಿಯೊಬ್ಬರಿಗೆ 7 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಭದ್ರಾವತಿ ತಾಲೂಕಿನ ಮಂಗೋಟೆ ಗ್ರಾಮದಲ್ಲಿ ನಡೆದಿದೆ. ಗಿರಿಗೌಡ ಹಣ ಕಳೆದುಕೊಂಡ ವ್ಯಕ್ತಿ.

ಸುರೇಶ್‌ ಎಂಬ ವ್ಯಕ್ತಿ ಗಿರಿಗೌಡರಿಗೆ ತಾನು ಮಾದೇಶ್ವರ ಬೆಟ್ಟದ ನಿವಾಸಿ ಎಂದು ಪರಿಚಯಿಸಿಕೊಂಡು ಕರೆ ಮಾಡಿದ್ದರು. ನಂತರ ನನಗೆ ಹೊಲದಲ್ಲಿ ಕೆಲಸ ಮಾಡುವವ ವೇಳೆ ಚಿನ್ನದ ನಾಣ್ಯ ಸಿಕ್ಕಿದೆ. ನಾನು ಬಡವನಾಗಿದ್ದು, ನನ್ನ ಮಗಳ ಮದುವೆಗೆ ಹಣ ಬೇಕಿದೆ. ನಿಮಗೆ ಈ ಚಿನ್ನದ ನಾಣ್ಯವನ್ನು ಕಡಿಮೆ ಬೆಲೆಗೆ ನೀಡುತ್ತೇನೆ ಎಂದಿದ್ದಾರೆ. ಮೊದಲು ಅದನ್ನು ನಂಬದ ಗಿರಿಯಗೌಡರು ಅದನ್ನು ಸರ್ಕಾರಕ್ಕೆ ಹಿಂದಿರುಗಿಸಿ ಎಂದಿದ್ದಾರೆ. ಆದರೂ ಸಹ ಸುರೇಶ್ ಮತ್ತೆ ಗಿರಿಗೌಡರಿಗೆ ಕರೆ ಮಾಡಿ, ನೀವು ಒಮ್ಮೆ ನಾಣ್ಯಗಳನ್ನು ಎಲ್ಲಿಬೇಕಾದರೂ ಪರಿಶೀಲಿಸಿ ನಂತರ ಖರೀದಿಸಿ ಎಂದಾಗ ಗಿರಿಗೌಡರಿಗೆ ನಾಣ್ಯವನ್ನು ಪರಿಶೀಲಿಸಲು ಒಪ್ಪಿದ್ದರು. ನಂತರ ಅದು ಚಿನ್ನದ ನಾಣ್ಯವೆಂದು ಭಾವಿಸಿದ ಗಿರಿಗೌಡರು   ಒಂದು ಕೆಜಿ ನಾಣ್ಯದ ದರವನ್ನು ಇಬ್ಬರೂ ಮಾತನಾಡಿಕೊಂಡು 7 ಲಕ್ಷಕ್ಕೆ ವ್ಯವಹಾರವನ್ನು ನಡೆಸಿದ್ರು. ಮಂಗೋಟೆಯ ಸೇತುವೆ ಬಳಿ ಬಂದು ನಾಣ್ಯಗಳನ್ನು ಸಂಗ್ರಹಿಸಲು ಸುರೇಶ್ ತಿಳಿಸಿದ್ದನು. ಸೇತುವೆ ಬಳಿ ಬಂದು ನಕಲಿ ಚಿನ್ನದ ನಾಣ್ಯಕ್ಕೆ 7 ಲಕ್ಷ ಕೊಟ್ಟು ಖರೀದಿಸಿಕೊಂಡು ಊರಿಗೆ ಬಂದ ಗಿರಿಗೌಡರು ಪರಿಕ್ಷಿಸಿದಾಗ ಇದು ನಕಲಿ ಎಂದು ತಿಳಿದು ಬಂದಿದೆ. ಈ ಸಂಬಂಧ ಇದೀಗ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ವಂಚನೆಯ ಪ್ರಕರಣವನ್ನು ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

SUMMARY | A man from Hassan was duped of Rs 7 lakh by giving him a fake gold coin at Mangote village in Bhadravathi taluk 

KEYWORDS | Hassan,  7 lakh,  fake gold coin,

Share This Article