ಸಿಗಂದೂರು ಸೇತುವೆ ಕಾಮಗಾರಿಯ ಮತ್ತೊಂದು ಫೋಟೋ ರಿಲೀಸ್‌

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 22, 2025

ದೇಶದಲ್ಲಿಯೇ ಎರಡನೇ ಅತಿ ಉದ್ದದ ಕೇಬಲ್‌ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಿಂಗದೂರು ಸೇತುವೆಯ ಕಾಮಗಾರಿ ಈಗ ಮುಕ್ತಾಯದ ಹಂತ ತಲುಪಿದೆ. ಇದೀಗ ಸೇತುವೆಯ ಮೇಲ್ಬಾಗದ ರಸ್ತೆಯುಲ್ಲಿ ಡಾಂಬರೀಕರಣ ಪ್ರಕ್ರಿಯೆ ಆರಂಭವಾಗಿದ್ದು, ಆ ಪೋಟೋವನ್ನು  ಸಂಸದ ಬಿವೈ ರಾಘವೇಂದ್ರರವರ ಮಾಧ್ಯಮ ವಿಭಾಗ ರಿಲೀಸ್‌ ಮಾಡಿದೆ.

ಈ ಹಿಂದೆ ಸಂಸದರು ಸೇತುವೆಯ ಕಾಮಗಾರಿಯ ಡ್ರೋನ್‌ ವಿಡಿಯೋಗಳನ್ನು ತಮ್ಮ ಅದೀಕೃತ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋಗಳು ಎಲ್ಲಡೆ ವೈರಲ್‌ ಆಗಿದ್ದವು. ಹಾಗೆಯೇ ಐತಿಹಾಸಿಕ ಸಿಗಂದೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯು ಎಲ್ಲರ ಕಣ್ಮನ ಸೆಳೆದಿತ್ತು. ಇದೀಗ ಸೇತುವೆಯ ಮೇಲೆ ಡಾಂಬರೀಕರಣ  ಪ್ರಕ್ರಿಯೆಯ ಫೋಟೋ ಬಿಡುಗಡೆಯಾಗಿದ್ದು, ಪ್ರವಾಸಿಗರಲ್ಲಿ ಸಂತಸವನ್ನು ಮೂಡಿಸಿದೆ.

SUMMARY | The asphalting process has begun on the road above the bridge and the photo was released by the media wing of MP BY RAGHAVENDRA.

KEYWORDS | b y raghavendra, siganduru, bridge photo 

Share This Article