SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 21, 2025
ಶಿವಣ್ಣ, ರಾಜ್ ಬಿ ಶೆಟ್ಟಿ ಹಾಗೂ ಉಪೇಂದ್ರ ನಟಿಸುತ್ತಿರುವ 45 ಚಿತ್ರದ ಟೇಸರ್ ಯುಗಾದಿ ಹಬ್ಬದ ಪ್ರಯುಕ್ತ ಮಾರ್ಚ್ 30 ರಂದು ಬಿಡುಗಡೆಯಾಗಲಿದೆ.
ಈ ಕುರಿತು ಕನ್ನಡದ ಪ್ರಸಿದ್ದ ಯೂಟ್ಯೂಬ್ ಚಾನಲ್‌ಗಳಲ್ಲಿ ಒಂದಾದ ಆನಂದ್ ಆಡಿಯೋ ಟ್ವೀಟರ್‌ನಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿ ಮಾಹಿತಿಯನ್ನು ಹಂಚಿಕೊಂಡಿದೆ.
45 ಚಿತ್ರವನ್ನು ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶಿಸಿದ್ದಾರೆ. ಚಿತ್ರ ನಿರ್ದೇಶನಕ್ಕಿಳಿದ ಮೊದಲ ಬಾರಿಯಲ್ಲೇ 3 ಜನ ಹೀರೋಗಳನ್ನು ಹಾಕಿಕೊಂಡು ಚಿತ್ರ ನಿರ್ದೇಶಿಸಿರುವ ಅರ್ಜುನ್ ಜನ್ಯ ಈ ಚಿತ್ರಕ್ಕಾಗಿ ಬಹಳಷ್ಟು ತಯಾರಿ ನಡೆಸಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೆ ಈ ಚಿತ್ರದ ಒಂದೂಂದು ಪಾತ್ರವನ್ನು ಸಹ ರೋಬೋಟಿಕ್ ಗೊಂಬೆಗಳ ಮೂಲಕ ರಚನೆ ಮಾಡಿ ಚಿತ್ರದ ನಿರ್ಮಾಪಕರಿಗೆ ಹಾಗೂ ನಟರಿಗೆ ಕಥೆಯನ್ನು ಹೇಳಿದ್ದರು. ಇದನ್ನು ನೋಡಿದ ರಾಜ್ ಬಿ ಶೆಟ್ಟಿ ಅರ್ಜುನ್ ಜನ್ಯರವರರಿಗೆ ಕೆಲಸದ ಮೇಲಿರುವ ಶ್ರದ್ದೆಯನ್ನು ಮೆಚ್ಚಿಕೊಂಡಿದ್ದರು. ಇದೀಗ ಆ ಚಿತ್ರದ ಟ್ರೈಲರ್ ರಿಲೀಸ್ ಆಗಲು ರೆಡಿಯಾಗಿದ್ದು, ಚಿತ್ರದ ಕ್ವಾಲಿಟಿ ಹಾಗೂ ಮೇಕಿಂಗ್ ಹೇಗಿರಲಿದೆ ಎಂದು ಟೀಸರ್ ಬಿಡುಗಡೆಯಾದ ನಂತರವೇ ನೋಡಬೇಕಿದೆ.
Prepare yourself for a new and unique experience ????#45TheMovie Teaser on this ugadi, are you ready?
Stay Tuned for all musical updates:???? https://t.co/IKwWnRtE7C????
Banner: @SripadaStudios
Producer: #MRameshReddy
Direction & Music By: @ArjunJanyaMusic
Starring:… pic.twitter.com/HA7UNt0uYH— aanandaaudio (@aanandaaudio) March 21, 2025
ಈ ಚಿತ್ರಕ್ಕೆ ಎಂ ರಮೇಶ್ ರೆಡ್ಡಿ ಬಂಡವಾಳ ಹೂಡಿದ್ದು, ಅಗಸ್ಟ್ 15, 2025 ಸ್ವಾತಂತ್ರ್ಯ ದಿನಾಚಾರಣೆಯಂದು ದೇಶದಾದ್ಯಂತ ರಿಲೀಸ್ ಆಗಲಿದೆ.
SUMMARY | The teaser of Shivanna, Raj B Shetty and Upendra starrer ’45’ will be released on March 30 on the occasion of Ugadi festival.
KEYWORDS | 45 teaser, Ugadi festival, Upendra, Raj B Shetty,