ಓಟಿಟಿಗೆ ಲಗ್ಗೆಇಡಲು ಸಿದ್ದವಾದ ಡ್ರ್ಯಾಗನ್ | ರಿಲೀಸ್‌ ಯಾವಾಗ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 19, 2025

ತಮಿಳಿನ ಲವ್‌ ಟುಡೆ ಖ್ಯಾತಿಯ ಪ್ರದೀಪ್‌ ರಂಗನಾಥನ್‌ ನಟಿಸಿ  ಅಶ್ವಥ್‌ ಮಾರಿಮುತ್ತು ನಿರ್ದೇಶಿಸಿರುವ ಡ್ರ್ಯಾಗನ್ಚಿತ್ರ ಇದೇ ಮಾರ್ಚ್‌ 21 ರಂದು ಓಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಈ ಚಿತ್ರದ ಪ್ರಸಾರದ ಹಕ್ಕನ್ನು ನೆಟ್‌ಫ್ಲಿಕ್ಸ್‌ ಕೊಂಡುಕೊಂಡಿದ್ದು, ಈ ಚಿತ್ರ ಕನ್ನಡ, ತಮಿಳ್‌, ತೆಲುಗು, ಹಿಂದಿ ಮತ್ತು ಮಳಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ. 30 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರ ಬಾಕ್ಸ್‌ ಆಫಿಸ್‌ನಲ್ಲಿ ಬರೋಬ್ಬರಿ 100 ಕೋಟಿಗೂ ಅಧಿಕ ಕಲೆಕ್ಷನ್‌ನ್ನು ಮಾಡಿತ್ತು. ಆ ಮಟ್ಟಿಗೆ ಚಿತ್ರದ ಕಥೆ ಹಾಗೂ ಪ್ರದೀಪ್‌ ರಂಗನಾಥನ್‌ ನಟನೆಯನ್ನು ಜನರು ಮೆಚ್ಚಿಕೊಂಡಿದ್ದರು. ಫೆ 21 ರಂದು ಬಿಡುಗಡೆಯಾಗಿದ್ದ ಈ ಚಿತ್ರ ಇದೀಗ ಸರಿಯಾಗಿ ಒಂದು ತಿಂಗಳ ಬಳಿಕ ಓಟಿಟಿಯಲ್ಲಿ ರಿಲೀಸ್‌ ಆಗುತ್ತಿದ್ದು, ಥೇಟರ್‌ನಲ್ಲಿ ಚಿತ್ರವನ್ನು  ಮಿಸ್‌ ಮಾಡಿಕೊಂಡವರು ಮನೆಯಲ್ಲಿಯೇ ಈಗ ಚಿತ್ರವನ್ನು ವೀಕ್ಷಿಸಬಹುದು.

SUMMARY | Directed by Ashwath Marimuthu and starring Pradeep Ranganathan of Love Today fame, Dragon is all set to hit the screens on March 21.

KEYWORDS |  Dragon, March 21, Pradeep Ranganathan, netflix,

Share This Article