SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 17, 2025
ಶಿವಮೊಗ್ಗ | ಬಿಜೆಪಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರರವರಿಗೆ ಡಿಸಿಎಂ ಡಿಕೆ ಶಿವಕುಮಾರ್ ನಾಡಗೀತೆಯನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಹೇಳಿದ್ದಾರೆ.ಆದರೆ ಡಿಕೆ ಶಿವಕುಮಾರ್‌ರವರೆ ಮೊದಲು ನೀವು ಸಂವಿಧಾನವನ್ನು ಅರ್ಥಮಾಡಿಕೊಳ್ಳಬೇಕು ಎಂದು ಮಾಜಿ ಡಿಸಿಎಂ ಈಶ್ವರಪ್ಪ ಡಿಕೆ ಶಿವಕುಮಾರ್ ವಿರುದ್ದ ವಾಗ್ದಾಳಿ ನಡೆಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದಿಗೋಷ್ಠಿ ನಡೆಸಿ ಮಾತನಾಡಿದ ಅವರು. ನಿಮ್ಮ ಸರ್ಕಾರ ನಮ್ಮ ರಾಜ್ಯದ ಮಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿಯನ್ನು ಕೊಟ್ಟಿದೆ. ಆದರೆ ದೇಶದ ಯಾವದೇ ರಾಜ್ಯದಲ್ಲಿ ಮುಸ್ಲಿಮರಿಗೆ ಇಷ್ಟರ ಮಟ್ಟಿಗೆ ಮೀಸಲಾತಿಯನ್ನು ಕೊಟ್ಟಿಲ್ಲ. ಅಷ್ಟೇ ಅಲ್ಲದೆ ನಮ್ಮ ಸಂವಿಧಾನದಲ್ಲಿಯೂ ಸಹ ಯಾವುದೇ ಧರ್ಮಕ್ಕೆ ಧರ್ಮಾಧಾರಿತ ಮೀಸಲಾತಿಯನ್ನು ನೀಡಬಾರದು ಎಂದು ಹೇಳಿದೆ. ಆದರೆ ನೀವು ಅದ್ಯಾವುದಕ್ಕೂ ಕ್ಯಾರೇ ಎನ್ನದೆ ಮುಸ್ಲಿಮರಿಗೆ ಮೀಸಲಾತಿಯನ್ನು ನೀಡಿದ್ದೀರಿ. ಆದ್ದರಿಂದ ಬೇರೆಯವರಿಗೆ ಹೇಳುವ ಬದಲು ನೀವು ನಮ್ಮ ದೇಶದ ಸಂವಿಧಾನವನ್ನು ಓದಿ ಎಂದರು.
ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ನನ್ನ ಬೆಂಬಲವಿದೆ
ಚಕ್ರವರ್ತಿ ಸೂಲಿಬೆಲೆಯವರು ಹಿಂದೂ ಹುಡುಗರು ಮುಸ್ಲಿಂ ಹುಡುಗಿಯರನ್ನು ಮದುವೆ ಯಾಗಿ ಎಂಬ ಹೇಳಿಕೆ ನೀಡಿದ್ದಾರೆ. ಅದಕ್ಕೆ ನನ್ನಸಂಪೂರ್ಣ ಬೆಂಬಲವಿದೆ. ಏಕೆಂದರೆ ಚಕ್ರವರ್ತಿ ಸೂಲಿಬೆಲೆ ಮುಸ್ಲಿಂ ಹುಡುಗಿಯರನ್ನು ಪ್ರೀತಿಸಿ ಮದುವೆಯಾಗಿ ಅಂತ ಹೇಳಿದ್ದಾರೆ ಹೊರತು ಪ್ರೀತಿಸಿ ಕೊಲೆ ಮಾಡಿ ಎಂದು ಎಲ್ಲಿಯೂ ಹೇಳಿಲ್ಲ ಎಂದರು.
SUMMARY | Former Deputy CM Eshwarappa said, “DK Shivakumar, first you have to understand the Constitution.
KEYWORDS | Eshwarappa, DK Shivakumar, Constitution, politics,