ಡೆವಿಲ್‌ ಚಿತ್ರೀಕರಣಕ್ಕೆ ಡಿಬಾಸ್‌ ಭಾಗಿ | ಶೂಟಿಂಗ್‌ ಸ್ಟಾರ್ಟ್‌ ಯಾವಾಗ ಗೊತ್ತಾ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 11, 2025

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಇದೀಗ ಪೂರ್ಣಪ್ರಮಾಣದ ಬೇಲ್‌ ಪಡೆದಿರುವ ದರ್ಶನ್‌ ತೂಗುದೀಪ್‌ ಇದೀಗ ಮತ್ತೆ ಡೆವಿಲ್‌ ಚಿತ್ರದ ಶೂಟಿಂಗ್‌ಗೆ ಮರಳುತ್ತಿದ್ದಾರೆ.

ಮೈಸೂರಿನಲ್ಲಿ ಶೂಟಿಂಗ್‌ ಆರಂಭಿಸಲು ಚಿತ್ರಂಡ ಪೊಲೀಸ್‌ ಇಲಾಕೆಯಿಂದ ಅನುಮತಿ ಪಡೆದಿದೆ. ಈ ಹಿಂದೆ ಚಿತ್ರದ ಶೂಟಿಂಗ್‌ ಎಲ್ಲಿಯವರೆಗೆ ನಿಂತಿತ್ತೂ ಅಲ್ಲಿಂದ ಚಿತ್ರದ  ಶೂಟಿಂಗ್‌ ಮುಂದುವರೆಯಲಿದ್ದು, ಮಾರ್ಚ್‌ 12 ರಿಂದ 15 ರ ವರೆಗೆ ದರ್ಶನ್‌ ಮೈಸೂರಿನಲ್ಲಿ ನಡೆಯುವ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನಲೆ ದರ್ಶನ್‌ರವರಿಗೆ ಭದ್ರತೆಯನ್ನು ನೀಡಲು 10 ಜನ ಪೊಲೀಸರನ್ನು ನಿಯೋಜಿಸಲಾಗಿದ್ದು, ಅದಕ್ಕಾಗಿ ಚಿತ್ರತಂಡ  ಒಂದುವರೆ ಲಕ್ಷ ರೂಪಾಯಿಗಳನ್ನು ನೀಡಿದೆ ಎನ್ನಲಾಗಿದೆ. 

ಚಿತ್ರದ ನಿರ್ದೇಶನವನ್ನು ಮಿಲನ ಪ್ರಕಾಶ್ ಮಾಡುತ್ತಿದ್ದು, ಶ್ರೀ ಜೈಮಠ ಕಂಬೈನ್ಸ್ ಮತ್ತು ವೈಷ್ಣೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಜೆ ಜಯಮ್ಮ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಯುವ ನಟಿ ರಚನಾ ರೈ ಡಿ ಬಾಸ್‌ ಗೆ  ಜೋಡಿಯಾಗಿ ಅಭಿನಯಿಸುತ್ತಿದ್ದಾರೆ.

SUMMARY | Darshan Thoogudeep is now returning to the sets of ‘Devil’.

KEYWORDS | Darshan Thoogudeep, Devil, shooting,

Share This Article