ಪಾರಿತೋಷಕ ಕೊಡಲು ರೆಡಿಯಾದ ಶಿವಮೊಗ್ಗದ ಹುಡುಗರು | ಚಿತ್ರ ರಿಲೀಸ್‌ ಯಾವಾಗ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 10, 2025

ಶಿವಮೊಗ್ಗ | ಶಿವಮೊಗ್ಗದ ಮನು ನಾಯಕ ನಟರಾಗಿ ಅಭಿನಯಿಸಿರುವ  ಪಾರಿತೋಷಕ ಚಿತ್ರವು ಇದೇ ಮಾರ್ಚ್‌ 14 ರಂದು ರಾಜ್ಯಾದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕರಾದ ಪ್ರದೀಪ್‌ ತುಂಬಿನ ಕೆರೆ ತಿಳಿಸಿದರು. 

ಇಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಚಿತ್ರದಲ್ಲಿ ಚಿತ್ರದುರ್ಗದಲ್ಲಿ ಈ ಹಿಂದೆ ನಡೆದಿರುವ ಕಥೆ ಇರಲಿದ್ದು, ಚಿತ್ರ ತುಂಬಾ ಅದ್ಬುತವಾಗಿ ಮೂಡಿಬಂದಿದೆ. ಜೀವನದಲ್ಲಿ ಎಲ್ಲರೂ ದುಡ್ಡಿಗಾಗಿ ಕಷ್ಟಪಟ್ಟು ದುಡಿಯುತ್ತಾರೆ. ಆದರೆ ಕೆಲವರು ಸುಲಭವಾಗಿ ದುಡ್ಡನ್ನು ಸಂಪಾದಿಸಲು ದುರ್ಮಾರ್ಗದ ಕಡೆಗೆ ಮುಖ ಮಾಡುತ್ತಾರೆ. ಹಾಗೆ ದುರ್ಮಾರ್ಗದಿಂದ ದುಡಿದ ಹಣ ಹೆಚ್ಚುಕಾಲ ಉಳಿಯುವುದಿಲ್ಲ ಎಂಬುದೆ ಈ ಚಿತ್ರದ ಒನ್‌ ಲೈನ್‌ ಸ್ಟೋರಿಯಾಗದೆ. ಈ ಚಿತ್ರವನ್ನು ಶೇ 75 ರಷ್ಟು ರಾತ್ರಿವೇಳೆ ಶೂಟ್‌ ಮಾಡಿದ್ದೇವೆ. ಈ ಚಿತ್ರದಲ್ಲಿ ಹಲವಾರು ಟ್ವಿಸ್ಟ್‌ಗಳಿದ್ದು, ಕುಟುಂಬ ಸಮೇತರಾಗಿ ಈ ಚಿತ್ರವನ್ನು ನೋಡಬಹುದು. ಐಶ್ವರ್ಯ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ ಎಂದರು. 

ಚಿತ್ರದ ನಾಯಕ ನಟ ಮನು ಮಾತನಾಡಿ ಈ ಚಿತ್ರವನ್ನು  ಶಿವಮೊಗ್ಗದ ಪ್ರತಿಭೆಗಳು ಸೇರಿಕೊಂಡು ನಿರ್ಮಾಣ ಮಾಡಿದ್ದೆವೆ. ನಮ್ಮೆಲ್ಲರ ಕನಸಿನ ಚಿತ್ರ ಇದಾಗಿದೆ.  ಬಹಳಾ ಕಷ್ಟಪಟ್ಟು ಮಾಡಿದ ಈ ಸಿನಿಮಾವನ್ನು ಎಲ್ಲರೂ ಥೇಟರ್‌ನಲ್ಲಿ ಬಂದು ವೀಕ್ಷಿಸಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಎಂದರು.

ಈ ಚಿತ್ರಕ್ಕೆ ಮಂಜುನಾಥ್‌ ಎ ಕೋಟೇಹಾಳ್‌ ಹಾಗೂ ಶಾರದ ಮಂಜುನಾಥ್‌ ಬಂಡವಾಳ ಹೂಡಿದ್ದು, ಚಿತ್ರಕ್ಕೆ ಸಂಗೀತವನ್ನು ಚಂದನ್‌ ಹೆಗ್ಗಡೆ ಸಂಯೋಜಿಸಿದ್ದಾರೆ.

SUMMARY | The film will be released across the state on March 14

KEYWORDS | paarithoshaka, movie, kannada, March 14,

Share This Article