ಸಿನಿಮಾ ಟಿಕೆಟ್‌ ದರ 200 ರೂ | ಸ್ಯಾಡಂಲ್‌ ವುಡ್‌ ಕ್ವೀನ್‌ ಹೇಳಿದ್ದೇನು

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 8, 2025

2025-26 ನೇ ಸಾಲಿನ ರಾಜ್ಯ ಬಜೆಟ್‌ನ್ನು ಸಿ ಎಂ ಸಿದ್ದಾರಾಮಯ್ಯರವರು ಮಾರ್ಚ್‌ 07 ರಂದು  ಮಂಡಿಸಿದ್ದು, ಅದರಲ್ಲಿ ಮಲ್ಟಿಫ್ಲೆಕ್ಸ್‌ ಸೇರಿದಂತೆ ರಾಜ್ಯದ ಎಲ್ಲ ಥಿಯೇಟರ್‌ಗಳಲ್ಲಿ ಸಿನಿಮಾ ಟಿಕೆಟ್‌ಗಳ ದರ  200 ರೂ ಮೀರಬಾರದೆಂದು ಘೊಷಿಸಿದ್ದಾರೆ. ಇದಕ್ಕೆ ಎಲ್ಲೆಡೆ ಪರ ವಿರೋದ ಚರ್ಚೆಗಳು ಎದುರಾಗಿದೆ. ರಾಜ್ಯ ಸರ್ಕಾರ ಈ ನಿಯಮಕ್ಕೆ ಇದೀಗ ಸ್ಯಾಂಡಲ್‌ ವುಡ್‌ ಕ್ವೀನ್‌ ರಮ್ಯ ಶ್ಲಾಘನೆ ವ್ಯಕ್ತಪಡಿಸಿ ಟ್ವೀಟರ್‌ನಲ್ಲಿ ಪೋಸ್ಟ್‌ ಒಂದನ್ನು ಶೇರ್‌ ಮಾಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ

ಕನ್ನಡ ಚಲನಚಿತ್ರೋದ್ಯಮವನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕ್ರಮವನ್ನು ಕೈಗೊಂಡಿರುವುದು ಸಂತಸ ತಂದಿದೆ.  ಕನ್ನಡದಲ್ಲಿ 2025 ರ ಆರಂಭದಲ್ಲಿ 75 ಕ್ಕೂ ಹೆಚ್ಚು ಚಲನಚಿತ್ರಗಳು ಬಿಡುಗಡೆಯಾದುವು. ಅದರೆ ಯಾವ ಚಲನಚಿತ್ರಗಳು ಕೂಡಾ ಉತ್ತಮವಾಗಿ ಪ್ರದರ್ಶನ ಕಾಣಲಿಲ್ಲ. ಅದಕ್ಕೆ ಕಾರಣ ಸಿನಿಮಾ ಟಿಕೆಟ್‌ಗಳ ದರ ಹೆಚ್ಚಾಗಿರುವುದು.  ಮಲ್ಟಿಫ್ಲೆಕ್ಸ್‌ಗಳಲ್ಲಿ ಒಂದು ಚಿತ್ರದ ಟಿಕೆಟ್‌ 1000 ರೂಪಾಯಿಗಳಿಗಿಂತ ಹೆಚ್ಚಿರುತ್ತದೆ. ರಾಜ್ಯ ಸರ್ಕಾರದ ಈ ನಿಯಮದಿಂದ ಸಾಮಾನ್ಯರೂ ಸಹ ಹೆಚ್ಚೆಚ್ಚು ಚಿತ್ರಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಒಟಿಟಿ ಪ್ಲಾಟ್ಫಾರ್ಮ್ಗಳು ಇತರ ಭಾಷೆಗಳ ಬಗ್ಗೆ ಪಕ್ಷಪಾತ ಹೊಂದಿವೆ ಮತ್ತು ಕನ್ನಡ ಚಲನಚಿತ್ರಗಳನ್ನು ಖರೀದಿಸುವುದಿಲ್ಲ.ಆದ್ದರಿಂದ ಸರ್ಕಾರದ ಈ ಕ್ರಮ ಶ್ಲಾಘನೀಯ ಎಂದು ಬರೆದು ಕೊಂಡಿದ್ದಾರೆ.



SUMMARY | The state government has now shared a post on Twitter praising Sandalwood queen Ramya for the rule.

KEYWORDS | state government,  budget, movie ticket, Ramya,

Share This Article