BSNL ನೆಟ್‌ವರ್ಕ್‌ ಇಲ್ಲ | ಸಿಗ್ನಲ್‌ಗಾಗಿ ಸಿಂಗಲ್‌ ಆಗಿ ಧರಣಿ ಕುಳಿತ ಸೀನಿಯರ್‌ ಸಿಟಿಜನ್

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 8, 2025 ‌‌ ‌

ಶಿವಮೊಗ್ಗ ಹೋರಾಟದ ಕುದಿನೆಲ ಎನ್ನುವುದಕ್ಕೆ ಸಾಕ್ಷಿಯಾಗಿ ನಿನ್ನೆ ಒಂದು ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು BSNL ಕಚೇರಿ ಎದುರು ನೆಟ್‌ವರ್ಕ್‌ ಸಮಸ್ಯೆ ಸರಿಮಾಡಿಕೊಡಿ ಎಂದು ಸೀನಿಯರ್‌ ಸಿಟಿಜನ್‌ ಒಬ್ಬರು ಏಕಾಂಗಿಯಾಗಿ ಪ್ರತಿಭಟನೆ ಕುಳಿತಿದ್ದರು. 

ಏನಿದು ಧರಣಿ

ಮಲೆನಾಡು ಭಾಗದಲ್ಲಿ ಊರಿಗೊಬ್ಬಳೆ ಪದ್ಮಾವತಿ ಎಂಬಂತೆ,  ಮೊಬೈಲ್‌ಗೆ ಬಿಎಸ್‌ಎನ್‌ಎಲ್‌ ಸಿಮ್‌ ಒಂದೆ ಗಟ್ಟಿ. ಆದರೆ BSNL ನೆಟ್‌ವರ್ಕ್‌ ಒಮ್ಮೊಮ್ಮೆ ಇರುತ್ತದೆ, ಇನ್ನೊಮ್ಮೆ ಕೈ ಕೊಡುತ್ತದೆ. ಸಾಗರ ತಾಲ್ಲೂಕುನಲ್ಲಿರುವ ತಮ್ಮ ಗ್ರಾಮದಲ್ಲಿ ಕಳೆದ 15 ದಿನಗಳಿಂದ  ಬಿಎಸ್ಎನ್ಎಲ್ ಮೊಬೈಲ್ ನೆಟ್ ವರ್ಕ್ ಸಿಗುತ್ತಿಲ್ಲ. ಇದರಿಂದಾಗಿ  ಸಿಟಿಯಲ್ಲಿ ಓದುತ್ತಿರುವ ತಮ್ಮ ಮಕ್ಕಳನ್ನು ಸಂಪರ್ಕ ಮಾಡಲು ಆಗುತ್ತಿಲ್ಲ. ಹಳ್ಳಿಯಲ್ಲಿ ವಾಸಿಸುವ ತಮ್ಮ ಅವಸ್ಥೆಗೆ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಇನ್ನೊಂದಿಷ್ಟು ಸಮಸ್ಯೆ ಮಾಡುತ್ತಿದೆ ಎಂದು ಆರೋಪಿಸಿ ಹುಲಿದೇವರಬನ ಸಮೀಪದ ಹೊಸಕೊಪ್ಪದ ಸೀತಾರಾಮ್ ಹೆಗಡೆ  ಬಿಎಸ್ಎನ್ಎಲ್ ಕಚೇರಿ ಏಕಾಂಗಿಯಾಗಿ ಧರಣಿ ಕುಳಿತಿದ್ದರು. 

ಪ್ರತಿ ಸಲ ದೂರು ಹೇಳಿದಾಗಲೂ ಅಧಿಕಾರಿಗಳು ಇಲ್ಲದ ಕಾರಣ ಕೊಡುತ್ತಿದ್ದಾರೆ ಎಂದು ಸೀತಾರಾಮ್‌ ಹೆಗೆಡೆಯವರು ಆರೋಪಿಸಿದರು. ಇದಕ್ಕೆ ಪ್ರತಿಯಾಗಿ ಅಧಿಕಾರಿಗಳು ಆವಿನಹಳ್ಳಿ ಭಾಗದಲ್ಲಿ ಮರ ಬಿದ್ದು ಕರೆಂಟ್‌ ಕಟ್‌ ಆಗಿದೆ. ಹಾಗಾಗಿ ಬ್ಯಾಟರಿ ಚಾರ್ಜ್‌ ಇಲ್ಲದೆ ನೆಟ್‌ವರ್ಕ್‌ ಪ್ರಾಬ್ಲಮ್‌ ಆಗಿದೆ, ಬೇಗ ಎಲ್ಲವನ್ನು ಸರಿಪಡಿಸಿ ಕೊಡುವುದಾಗಿ ಪ್ರತಿಭಟನೆ ನಡೆಸಿದ ಸೀತಾರಾಮ್‌ ಹೆಗೆಡೆಯವರಿಗೆ ಆಶ್ವಾಸನೆ ನೀಡಿದರು. 

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು