ರೀಲ್ಸ್‌ ಕ್ರೇಜ್‌ ವಿಡಿಯೋ ಮಾಡಲು ಹೋಗಿ ಮೂವರು ಯುವಕರು ಸಾವು | ವಿಡಿಯೋ ವೈರಲ್‌

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 7, 2025

ಅಹಮದಾಬಾದ್‌ | ಇತ್ತೀಚಿನ ದಿನಗಳಲ್ಲಿ ಎಲ್ಲಡೆ ರೀಲ್ಸ್‌ ಕ್ರೇಜ್‌ ಹೆಚ್ಚಾಗುತ್ತಿದೆ. ಇದರಿಂದಾ ಎಷ್ಟೋ ಯುವಕ ಯುವತಿಯರಿಗೆ ನೇಮು ಫೇಮು ಬರ್ತಿದೆ. ಆದರೆ ಇದರ ನಡುವೆ ಎಷ್ಟೋ ಜನ ಸ್ಟಂಟ್‌ ಹಾಗೂ ಇನ್ನಿತರೆ ಸಾಹಸಗಳನ್ನು ಮಾಡಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅಹಮದಾಬಾದ್‌ ನಲ್ಲೀಗ ಅಂತಹುದ್ದೇ ಘಟನೆವೊಂದು ನಡೆದಿದೆ. ಅದೇನೆಂದರೆ ಕಾರಿನಲ್ಲಿ ರೀಲ್ಸ್‌ ಮಾಡುತ್ತಿದ್ದ ಯುವಕರ ಕಾರು ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದು ಇಬ್ಬರು  ಸಾವನ್ನಪಿದ್ದಾರೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.



ವಿಡಿಯೋದಲ್ಲಿರುವಂತೆ ಮೂವರು ಯುವಕರು ರೀಲ್ಸ್‌  ಶೂಟಿಂಗ್‌ಗಾಗಿ ಸ್ಟಂಟ್ ಮಾಡಲು ಎಸ್‌ಯುವಿ ಕಾರಿನಲ್ಲಿ ಕಾಲುವೆ ಬಳಿ ತೆರಳಿದ್ದಾರೆ. ಆಗ ಆ ಎಸ್‌ ಯುವಿ ಕಾರು  ಚಲಾಯಿಸುತ್ತಿದ್ದ ಯುವಕ ಕಾರನ್ನು  ಕಾಲುವೆ ಬಳಿ ಯು-ಟರ್ನ್  ಮಾಡಲು ಪ್ರಯತ್ನಿಸಿದ್ದಾನೆ. ಆಗ ಆತನ ನಿಯಂತ್ರಣ ತಪ್ಪಿ ಕಾರು  ಕಾಲುವೆಗೆ ಉರುಳಿದೆ. ಕಾಲುವೆಯಲ್ಲಿ ನೀರಿನ ರಭಸ ಹೆಚ್ಚಿದ್ದರಿಂದ ಮೂವರು ಕಾಲುವೆಯಲ್ಲಿ ಕೊಚ್ಚಿ  ಹೋಗಿದ್ದರೆ. ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಶೋಧಕಾರ್ಯ ನಡೆಸಿ ಇಬ್ಬರು ಯುವಕರ ಮೃತ ದೇಹವನ್ನು ಪತ್ತೆ ಹಚ್ಚಿದ್ದಾರೆ. ಆದರೆ ಇನ್ನೋರ್ವನ ಮೃತದೇಹ ಇನ್ನು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ, ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

SUMMARY | Two persons were killed when the car in which they were doing reels lost control and fell into a canal.

KEYWORDS |  reels,  car, ahmedabad, viral video,

Share This Article