SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 4, 2025
ಶಿವಮೊಗ್ಗ | ನಗರದಲ್ಲಿ ಎಫ್.ಡಿ.ಎ. ಮೆಹತಾಬ್ ರವರು ಹಂಗಾಮಿ ಜಿಲ್ಲಾ ವಕ್ಫ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಆತ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಹಾಗೆಯೇ ಸಾರ್ವಜನಿಕರೊಂದಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕೂಡಲೇ ಎಫ್ ಡಿ ಎ ಯನ್ನ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಮುಸ್ಲಿಂ ಮುಖಂಡ ಮೊಹ್ಮದ್ ಆರೀಫ್ ವುಲ್ಲಾ ನೇತೃತ್ವದಲ್ಲಿ ವಕ್ಫ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ವೇಳೆ ಮೊಹ್ಮದ್ ಆರೀಫ್ ವುಲ್ಲಾ ಮಾತನಾಡಿ ಶಿವಮೊಗ್ಗ ಜಿಲ್ಲೆ ವಕ್ಫ್ ಕಛೇರಿಯಲ್ಲಿ ಖಾಯಂ ಜಿಲ್ಲಾ ವಕ್ಫ್ ಅಧಿಕಾರಿಯಿಲ್ಲದೇ ಮೆಹತಾಬ್ ರವರು ಹಂಗಾಮಿ ಜಿಲ್ಲಾ ವಕ್ಫ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಎಫ್ ಡಿ ಎ ವರ್ತನೆಯಿಂದ ಸಾರ್ವಜನಿಕರಲ್ಲಿ ವಕ್ಫ್ ಸಂಸ್ಥೆ ಬಗ್ಗೆ ಅಪ ನಂಬಿಕೆ ಹುಟ್ಟುತ್ತಿದೆ. ಅಲ್ಲದೇ ಸಾರ್ವಜನಿಕರ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ ಹಾಗಾಗಿ ತಕ್ಷಣವೇ ಎಫ್‌ಡಿಎ ಮೆಹತಾಬ್ ರವರನ್ನು ತಕ್ಷಣವೇ ವರ್ಗಾವಣೆಗೊಳಿಸಿ ಶಿವಮೊಗ್ಗ ವಕ್ಸ್ ಕಛೇರಿಗೆ ಖಾಯಂ ಆಗಿ ಪ್ರಾಮಾಣಿಕ ಜಿಲ್ಲಾ ವಕ್ಸ್ ಅಧಿಕಾರಿಯನ್ನು ನೇಮಿಸುವಂತೆ ಆಗ್ರಹಿಸಿದರು.
SUMMARY | Muslim leader Mohammad Arif Ullah led a protest in front of the Waqf office demanding immediate transfer of the FDA.
KEYWORDS | Mohammad Arif Ullah, Waqf office, transfer officer,