ಮತ್ತೊಂದು ಮುಂಗಾರು ಮಳೆ ಆಗುತ್ತಾ ಮನದ ಕಡಲು ಚಿತ್ರ | ರಿಲೀಸ್‌ ಯಾವಾಗ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌Mar 3, 2025

ಇದೇ 18 ವರ್ಷದ ಹಿಂದೆ ಯೋಜರಾಜ್‌ ಭಟ್‌ ನಿರ್ದೇಶಿಸಿ ಇ ಕೃಷ್ಣಪ್ಪ ನಿರ್ಮಾಣ ಮಾಡಿದ್ದ ಮುಂಗಾರು ಮಳೆ ಚಿತ್ರ ಬ್ಲಾಕ್‌ಬಸ್ಟ್‌ರ್‌ ಹಿಟ್ಟಾಗಿತ್ತು. ಇದೀಗ ಅದೇ ಜೋಡಿ ಮನದ ಕಡಲು ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸುಮನ್‌ ನಾಯಕನಾಗಿ ನಟಿಸುತ್ತಿರುವ ಈ ಚಿತ್ರ ಮಾರ್ಚ್‌ 28 ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತದೆ.

ಈ ಹಿಂದೆ ಮನದ ಕಡಲು ಚಿತ್ರತಂಡ  ಬಿಡುಗಡೆ ಮಾಡಿದ್ದ ಎಲ್ಲಾ ಹಾಡುಗಳು ಸಹ ಸೂಪರ್‌ ಹಿಟ್‌ ಆಗಿದ್ದವು.  ಅದಾದ ನಂತರ ಚಿತ್ರ ರಿಲೀಸ್‌ ಯಾವಾಗ ಎಂದು ಸಿನಿ ಪ್ರಿಯರು ಕಾದು ಕುಳಿತ್ತಿದ್ದರು. ಆದರೆ ಅವರಿಗೀಗ ಗುಡ್‌ನ್ಯೂಸ್‌ ಸಿಕ್ಕಿದ್ದು, ಈಗ ಚಿತ್ರತಂಡ ವಿಡಿಯೋ ಬಿಡುಗಡೆ ಮಾಡುವ ಮೂಲಕ ಚಿತ್ರದ ರಿಲೀಸ್‌ ಡೇಟ್‌ನ್ನು ಘೋಷಣೆ ಮಾಡಿದೆ. ಅದರಲ್ಲಿ ವಿಶೇಷವೆಂದರೆ ಬಿಡುಗಡೆ ದಿನಾಂಕವನ್ನು ಗ್ರಾಫಿಕ್ಸ್‌ ಮುಖಾಂತರ ಭಟ್ಟರ ಸ್ಟೈಲ್‌ನಲ್ಲಿ ಎರಡು ಮೊಲಗಳಿಂದ ಬಿಡುಗಡೆ ಮಾಡಿಸಿದ್ದಾರೆ. ಈ ಚಿತ್ರ ಮಾರ್ಚ್‌ 18 ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದ್ದು, ಈ ಸಿನಿಮಾ ಮುಂಗಾರು ಮಳೆ ರೀತಿಯಲ್ಲಿ ಹಿಟ್‌ ಆಗುತ್ತಾ ಎಂದು ಕಾದು ನೋಡಬೇಕಿದೆ.  

SUMMARY | Manada Kadalu, starring Suman in the lead, will be released across the state on March 28.

KEYWORDS | Manada Kadalu, Suman, yogaraj bhat, kannada movie,

Share This Article