ಆಟವಾಡುತ್ತಿದ್ದ ಬಾಲಕನ ಮೇಲೆ ಕಾರು ಹತ್ತಿಸಿದ ಮಹಿಳೆ | ಘಟನೆಯ ದೃಷ್ಯ ವೈರಲ್

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 26, 2025

ರಸ್ತೆಯಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಮಹಿಳೆಯೊಬ್ಬರು ಕಾರು ಹತ್ತಿಸಿದ ಭೀಕರ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಆ ಘಟನೆಯ ವಿಡಿಯೋ ಸಿಸಿ ಟಿವಿಯಲ್ಲಿ ರೆಕಾರ್ಡ್‌ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮಕ್ಕಳೆಲ್ಲರು  ಗಾಜಿಯಾಬಾದ್‌ನ ರಾಜೇಂದ್ರ ನಗರ ವಿಸ್ತರಣೆಯಲ್ಲಿರುವ ಎಸ್‌ಜಿ ಗ್ರ್ಯಾಂಡ್ ಸೊಸೈಟಿಯಲ್ಲಿರುವ ರಸ್ತೆಯಲ್ಲಿ ಕುಂಟೆಬಿಲ್ಲೆ ರೀತಿಯ ಆಟವನ್ನು ಆಡುತ್ತಿರುತ್ತಾರೆ. ಆವೇಳೆ ಒಬ್ಬ ಬಾಲಕ ರಸ್ತೆಯಲ್ಲಿ ಕುಳಿತುಕೊಂಡಿರುತ್ತಾನೆ. ಆಗ ಅಲ್ಲಿಗೆ ಕಾರಿನಲ್ಲಿ ಬಂದ ಮಹಿಳೆ ಒಮ್ಮೆಲೆ ಬಾಲಕನ ಮೇಲೆ ಕಾರನ್ನು ಹತ್ತಿಸುತ್ತಾರೆ. ಆಗ ಬಾಲಕ ಕಾರಿನ ಚಕ್ರದಡಿ ಸಿಲುಕುತ್ತಾನೆ. ಆಗ ಅಲ್ಲಿರುವ ಸುತ್ತಮುತ್ತಲಿನ ಜನರು ಬಂದು ಬಾಲಕನನ್ನು ಮೇಲೆತ್ತುತ್ತಾರೆ. ಮಹಿಳೆ ಕೂಡ ಕಾರಿನಿಂದ ಹೊರಬಂದು ಮಗುವಿನ ಕಡೆಗೆ ನೋಡುತ್ತಾಳೆ. ಆದರೆ ಕೆಲವೇ ಸೆಕೆಂಡುಗಳಲ್ಲಿ ಅವಳು ತನ್ನ ಕಾರನ್ನು ಸ್ಟಾರ್ಟ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾಳೆ. ಈ ಘಟನೆಯಲ್ಲಿ ಬಾಲಕನಿಗೆ ಸಣ್ಣಪುಟ್ಟ ಗಾಯಗಾಳಾಗಿವೆ ಎಂದು ತಿಳಿದುಬಂದಿದೆ.



 

SUMMARY | Ghaziabad In a shocking incident, a woman ran over a boy while he was playing on the road in Uttar Pradesh’s Ghaziabad.

KEYWORDS | Ghaziabad, Uttar Pradesh, shocking incident, 

Share This Article