SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 22, 2025
ಶಿವಮೊಗ್ಗ | ಫೆಬ್ರವರಿ 25 ರಂದು ವಸತಿ ಸಚಿವ ಜಮೀರ್ ಅಹಮದ್ ಶಿವಮೊಗ್ಗಕ್ಕೆ ಆಗಮಿಸಲಿದ್ದು, ಲಾಟರಿ ಮೂಲಕ ಗೋವಿಂದಾಪುರದ ಆಶ್ರಯ ಮನೆಗಳನ್ನು ಹಂಚಲಿದ್ದಾರೆ ಎಂದು ವಿಧಾನ ಪರಿಷತ್ ಶಾಸಕಿ ಭಲ್ಕಿಶ್ ಭಾನು ತಿಳಿಸಿದರು.
ಇಂದು ಪತ್ರಿಕಾ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಆಶ್ರಯ ಮನೆಗಳನ್ನು ಹಂಚುವ ಕಾರ್ಯಕ್ರಮ ಬೆಳಿಗ್ಗೆ 11:00 ಗಂಟೆಗೆ ಆರಂಭವಾಗುತ್ತದೆ. ವಸತಿ ಸಚಿವರು ಆ ಮನೆಗಳನ್ನು ಲಾಟರಿ ಮೂಲಕ ಫಲಾನುಭವಿಗಳಿಗೆ ಹಂಚುತ್ತಾರೆ. ನಂತರ ಮನೆಯ ಬೀಗದ ಕೀ ಯೊಂದಿಗೆ ಸಂಧಪಟ್ಟ ದಾಖಲೆಗಳನ್ನು ವಿತರಿಸಲಾಗುತ್ತದೆ. ಆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪರವರು ಭಾಗಿಯಾಗಲಿದ್ದಾರೆ ಎಂದರು.
2013 ರಂದು ನಮ್ಮ ಕಾಂಗ್ರೆಸ್ ಸರ್ಕಾರದಿಂದ ಬಡವರಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಆ ಕೆಲಸಗಳು ಈಗ ಪೂರ್ಣಗೊಳ್ಳುತ್ತಿದ್ದು, ಇದನ್ನು ನಮ್ಮ ಸರ್ಕಾರದ ಹೋರಾಟದ ಫಲ ಎಂದು ಹೇಳಬಹುದು.ಮಾ.03 ರಂದು ಅದ್ದೂರಿಯಾಗಿ ಮನೆ ಹಂಚುವ ಯೋಜನೆ ಇತ್ತು ಆದರೆ ಫಲಾನುಭವಿಗಳ ಒತ್ತಡದ ಮೇರೆಗೆ ಫೆ.25 ರಂದು ಲಾಟರಿ ಮೂಲಕ 625 ಮನೆಗಳನ್ನು ಹಂಚಲು ಬಹಳ ಸಂತೋಷವಾಗುತ್ತಿದೆ.ಆರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳಿಗೆ ಕಾರ್ಪೊರೇಷನ್‌ರವರು ಫೋನ್ ಮಾಡ ಮೂಲಕ ವಿಷಯವನ್ನು ತಿಳಿಸಿದ್ದಾರೆ. ಆಶ್ರಯ ಸಮಿತಿಯ ತೀರ್ಮಾನದಂತೆ ಆಶ್ರಯ ಮನೆಗಳಲ್ಲಿ ತಾತ್ಕಾಲಿಕವಾಗಿ ನೀರಿನ ಸೌಲಭ್ಯ ಕರೆಂಟ್ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶಿವಮೊಗ್ಗ ಜಿಲ್ಲೆಗೆ ವಸತಿ ಸಚಿವ ಜಮೀರ್ ಅಹ್ಮದ್ ಪ್ರಥಮ ಭಾರಿಗೆ ಆಗಮಿಸುತ್ತಿದ್ದು,ಆ ವೇಳೆ ಇನ್ನಷ್ಟು ಮನೆಗಳನ್ನು ಹಂಚಬೇಕೆಂಬ ಬೇಡಿಕೆಯನ್ನು ಅವರ ಬಳಿ ಇಡುತ್ತೇವೆ ಎಂದರು.
SUMMARY | Housing Minister Zameer Ahmed will arrive in Shivamogga on February 25 and distribute shelter homes in Govindapura through a lottery, MLC Bhalkish Bhanu said.
KEYWORDS | Zameer Ahmed, February 25, Govindapura, MLC Bhalkish Bhanu,