ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಮಹಾರಾಜ್ ಪೋಸ್ಟರ್‌ ರೀಲಿಸ್‌ | ಚಿತ್ರ ಬಿಡುಗಡೆ ಯಾವಾಗ 

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 20, 2025

ಶಿವಾಜಿ ಮಹಾರಾಜ್ 395 ನೇ ಜಯಂತಿಯ ಹಿನ್ನಲೆ ರಿಷಬ್ ಶೆಟ್ಟಿ ನಟನೆಯ ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರನ್ನು ಚಿತ್ರತಂಡ  ಬಿಡುಗಡೆ ಮಾಡಿದೆ.

- Advertisement -

ಈ  ಕುರಿತು ದೇವಿಯ ಮುಂದೆ ಶಿವಾಜಿ ನಿಂತಿರುವ ಹೊಸ ಪೋಸ್ಟರ್‌ನ್ನು  ಶೇರ್ ಮಾಡಿರುವ ನಿರ್ದೇಶಕ ಸಂದೀಪ್‌ ಸಿಂಗ್‌  ಭವಾನಿ! ಜೈ ಶಿವಾಜಿ! ಹರ ಹರ ಮಹಾದೇವ!! ಮಹಾನ್ ಯೋಧ, ರಾಜನ 395ನೇ ಜಯಂತಿಯಂದು ಫಸ್ಟ್ ಲುಕ್ ಬಿಡುಗಡೆ ಮಾಡ್ತಿದ್ದೀವಿ. ಇಡೀ ಖಂಡದ ಚಿತ್ರಣವನ್ನೇ ಬದಲಿಸಿದ ಮಹಾನ್ ರಾಜನ ಶಕ್ತಿ, ಭಕ್ತಿಯನ್ನ ತೋರಿಸ್ತಿದ್ದೀವಿ. ಅವರ ಧೈರ್ಯ, ಗೌರವ, ಸ್ವರಾಜ್ಯದ ಅಸಾಮಾನ್ಯ ಕಥೆಯನ್ನ ಅದ್ಭುತ ತಂಡದೊಂದಿಗೆ ತೆರೆಗೆ ತರ್ತಿರೋದು ಹೆಮ್ಮೆಯ ವಿಷಯ.  “ಈ ಚಿತ್ರ 2027 ರ ಜನವರಿ 21 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ” ಎಂದು ಕ್ಯಾಪ್ಶನ್ ನೀಡಿದ್ದಾರೆ.



ಇತ್ತೀಚೆಗೆ ಶಿವಾಜಿ ಮಹಾರಾಜರ ಮಗನಾದ ಸಂಭಾಜಿ ಮಹಾರಾಜರ ಜೀವನಾಧಾರಿತ ಚಿತ್ರವಾದ ಛಾವ ಸಿನಿಮಾ ರಿಲೀಸ್ ಆಗಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಶಿವಾಜಿ ಮಹಾರಾಜರ ಪುತ್ರನ ಜೀವನಾಧರಿತ  ಚಿತ್ರವನ್ನು ನೋಡಿದ ಪ್ರೇಕ್ಷಕರು ಆತನ ಶೌರ್ಯ ಹಾಗು ಪರಾಕ್ರಮಕ್ಕೆ  ಬೆರಗಾಗಿದ್ದರು. ಆ ಮಟ್ಟಿಗೆ ಆ ಚಿತ್ರದ ನೈಜ ಕಥೆಯನ್ನು ಅಚ್ಚುಕಟ್ಟಾಗಿ ನಿರ್ದೇಶಕರು ಹೆಣೆದಿದ್ದರು.  ಇದರ ನಡುವೆ ಇದೀಗ ಶಿವಾಜಿ ಮಹಾರಾಜರ ಜೀವನಾಧಾರಿತ ಚಿತ್ರವನ್ನು ಬಾಲಿವುಡ್ ನಿರ್ದೇಶಕ ಸಂದೀಪ್‌ ಸಿಂಗ್‌  ಬಹುದೊಡ್ಡ ಮಟ್ಟದಲ್ಲಿ ತೆರೆಗೆ ತರಲು ಹೊರಟಿದ್ದಾರೆ. ಅದರಲ್ಲೂ ಈ ಚಿತ್ರಕ್ಕೆ ಕನ್ನಡದ ಪ್ರತಿಭಾವಂತ ನಟ ರಿಷಬ್‌ ಶೆಟ್ಟಿ ನಾಯಕರಾಗಿ ಆಯ್ಕೆಯಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಈ ಹಿಂದೆಯೂ ಸಹ ಶಿವಾಜಿಯ ಜೀವನವನ್ನಾಧರಿಸಿದ  ಅನೇಕ ಚಿತ್ರಗಳು ವಿವಿಧ ಭಾಷೆಗಳಲ್ಲಿ  ಬಿಡುಗಡೆಯಾಗಿದ್ದವು. ಈಗ  ಬಾಲಿವುಡ್ ನಿರ್ದೇಶಕ ಸಂದೀಪ್‌ ಸಿಂಗ್‌  ಶಿವಾಜಿಯ ಜೀವನಾಧರಿತ ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದು. ಶಿವಾಜಿಯ ಜೀವನವನ್ನು ಯಾವರೀತಿ ಅದ್ಭುತವಾಗಿ ತೆರೆ ಮೇಲೆ ತೋರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

SUMMARY | On the occasion of the 395th birth anniversary of Shivaji Maharaj, the makers of Rishab Shetty starrer Pride of Bharat Chhatrapati Shivaji Maharaj have released the first look poster of the film.

KEYWORDS |  395th birth anniversary, Shivaji Maharaj,  Rishab Shetty,  

Share This Article
Leave a Comment

Leave a Reply

Your email address will not be published. Required fields are marked *