Thursday, 25 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಫೆಬ್ರವರಿ 21 ರಿಂದ 23ರ ವರೆಗೆ ಮೆಟ್ರೋ ಸರ್ವ ಮಹಿಳಾ ಸಂಸತ್ ಅಧಿವೇಶನ | ಹೇಗಿರಲಿದೆ ಗೊತ್ತಾ

131
Last updated: February 12, 2025 10:43 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ

ಶಿವಮೊಗ್ಗ | ಫೆಬ್ರವರಿ 21ರಿಂದ 23ರವರೆಗೆ ಜೆಸಿಐ ಶಿವಮೊಗ್ಗ ವತಿಯಿಂದ ವಿಶ್ವದ ಅತಿದೊಡ್ಡ ಹಾಗೂ ಪ್ರಥಮ ಮೆಟ್ರೋ ಸರ್ವ ಮಹಿಳಾ ಸಂಸತ್ ಅಧಿವೇಶನವನ್ನು ರಾಷ್ಟ್ರೀಯ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಜೆಸಿಐ ಸೆನೇಟರ್ ಡಾ. ಎಸ್.ವಿ. ಶಾಸ್ತ್ರಿ ತಿಳಿಸಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹೇಗಿರಲಿದೆ ಮಹಿಳಾ ಸಂಸಂತ್‌ ಅದಿವೇಶನ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಇದುವರೆಗೂ ಸುಮಾರು 14 ಮಾದರಿ ಸಂಸತ್ ಅಧಿವೇಶನವನ್ನು ಮಾಡಿದ್ದೇನೆ. ಇದು 15ನೇಯ ಸಂಸತ್ ಅಧಿವೇಶನ. ಈ ಅಧಿವೇಶನದಲ್ಲಿ ಎಲ್ಲರೂ ಮಹಿಳೆಯರೇ ಇರುತ್ತಾರೆ. ಮಾದರಿ ಸಂಸತ್ ಅಧಿವೇಶನದಲ್ಲಿ ಪುರುಷರಿಗೆ ಗ್ಯಾಲರಿಯಲ್ಲಿ ಕುಳಿತುಕೊಳ್ಳಲು ಅವಕಾಶ ಮಾತ್ರ ಇದೆ ಎಂದರು.

ಇದಕ್ಕಾಗಿ ಈಗಾಗಲೇ ಹಲವು ಸಿದ್ಧತೆ ಮಾಡಲಾಗಿದೆ. ರಾಷ್ಟ್ರೀಯ ಪ್ರೌಢಶಾಲಾ ಆವರಣದಲ್ಲಿ ರಾಷ್ಟ್ರಪತಿ ಭವನ ಸಿದ್ಧಪಡಿಸಲಾಗಿದೆ. ಫೆ. 21ರಂದು ಮಧ್ಯಾಹ್ನ 3 ಗಂಟೆಗೆ ಅಧಿವೇಶನ ಆರಂಭವಾಗಲಿದ್ದು, ಎಲ್ಲಾ ಸಂಸದರು, ಮಂತ್ರಿಗಳು, ಪ್ರತಿಪಕ್ಷದ ನಾಯಕರುಗಳು ಸಂಸತ್ ನಲ್ಲಿ ಸಮಾವೇಶಗೊಳ್ಳಲಿದ್ದು, ರಾಷ್ಟ್ರಪತಿಗಳಿಂದ ಪ್ರತಿಜ್ಞಾವಿಧಿ ಇರುತ್ತದೆ. ಸಂಜೆ 4.30ರಿಂದ 5.30ರ ವರೆಗೆ ಪ್ರಧಾನ ಮಂತ್ರಿ ಸೇರಿದಂತೆ ಸಂಪುಟ ದರ್ಜೆಯ ಸಚಿವರುಗಳಿಗೆ ಪ್ರಮಾಣವಚನ ಬೋಧಿಸಲಾಗುವುದು ಎಂದರು.

ಫೆ. 21ರಂದು ಸಂಜೆ 6 ಗಂಟೆಗೆ ಮೆಟ್ರೋ ಸರ್ವ ಮಹಿಳಾ ಸಂಸತ್ ಅಧಿವೇಶನ ಉದ್ಘಾಟನೆಯಾಗಲಿದ್ದು, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅಧಿವೇಶನ ಉದ್ಘಾಟಿಸುವರು. ಕೇಂದ್ರ ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಂಸದೀಯ ನಡವಳಿಕೆಗಳ ಪುಸ್ತಕ ಬಿಡುಗಡೆ ಮಾಡುವರು. ಸಚಿವ ಎಸ್. ಮಧು ಬಂಗಾರಪ್ಪ ಮಾಹಿತಿ ಮುನ್ನೋಟ ಪುಸ್ತಕ ಬಿಡುಗಡೆ ಮಾಡುವರು. ಸಂಸತ್ ನಲ್ಲಿ ಭಾಗವಹಿಸಿದ ಸದಸ್ಯರಿಗೆ ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಾಸಕ ಬಿ.ಕೆ. ಸಂಗಮೇಶ್ ಬ್ಯಾಗ್ ಗಳನ್ನು ನೀಡುವರು ಎಂದರು. ಗೌರವ ಅತಿಥಿಗಳಾಗಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ್, ಡಿ.ಎಸ್. ಅರುಣ್, ಬಲ್ಕಿಶ್ ಬಾನು, ಡಾ. ಧನಂಜಯ ಸರ್ಜಿ, ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಕುಮಾರಿ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರಶ್ಮಿ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸುರೇಶ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು.

ಫೆ. 22ರಂದು ಅಧಿವೇಶನದ ಕಾರ್ಯಕಲಾಪಗಳು ಬೆಳಗ್ಗೆ 10ರಿಂದಲೇ ಆರಂಭವಾಗಲಿವೆ. ಮೊದಲು ಅಗಲಿದ ಗಣ್ಯರಿಗೆ ಸಂತಾಪ, ಪರದೇಶಗಳಿಂದ ಬಂದ ಸದಸ್ಯರಿಗೆ ಸ್ವಾಗತ ನೀಡಲಾಗುವುದು. ಚಹಾ ವಿರಾಮದ ನಂತರ 11.30ಕ್ಕೆ ರಾಷ್ಟ್ರಪತಿಗಳ ಆಗಮನವಾಗುವುದು. ರಾಷ್ಟ್ರಗೀತೆ ನಂತರ ಕುಶಾಲತೋಪುಗಳ ಗೌರವಪೂರ್ವಕ ಸ್ವಾಗತ, ನಂತರ ರಾಷ್ಟ್ರಪತಿಗಳು ಜಂಟಿ ಸದನ ಉದ್ದೇಶಿಸಿ ಮಾತನಾಡುವರು. ರಾಷ್ಟ್ರಪತಿಗಳನ್ನು ಬೀಳ್ಕೊಡಲಾಗುವುದು. ಭೋಜನ ವಿರಾಮದ ನಂತರ ಕಲಾಪ ಆರಂಭವಾಗಲಿದೆ ಎಂದರು. ಕಲಾಪದ ಆರಂಭದಲ್ಲಿ ವಿತ್ತ ಸಚಿವರಿಂದ ಆಯ ವ್ಯಯ ಮಂಡನೆ, ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ, ಚರ್ಚೆ, ವಿತ್ತ ಸಚಿವರ ಬಿಲ್ ಮೇಲೆ ಚರ್ಚೆ, ಆಳುವ ಪಕ್ಷದಿಂದ ಬಿಲ್ ಮಂಡನೆ, ನಂತರ ಶೂನ್ಯ ವೇಳೆ ಇರುತ್ತದೆ ಎಂದರು.

ಫೆ. 23ರಂದು ಬೆಳಗ್ಗೆ 10 ಗಂಟೆಗೆ ಅಧಿವೇಶನ ಆರಂಭವಾಗಲಿದೆ. ಸರ್ಕಾರದ 2, 3, 4ನೇ ಬಿಲ್ ಗಳ ಮಂಡನೆಯಾಗಲಿದೆ, ಚರ್ಚೆ ನಡೆಯಲಿದೆ. ಶೂನ್ಯ ವೇಳೆಯಲ್ಲಿ ಹಲವು ವಿಷಯಗಳು ಚರ್ಚೆಯಾಗಲಿವೆ. ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು. ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮತ್ತು ಜಿಲ್ಲೆಯ ಶಾಸಕರು ಭಾಗವಹಿಸಲಿದ್ದು, ಜೆಸಿಐ ಶಾಶ್ವತಿ ಘಟಕದ ಅಧ್ಯಕ್ಷ ನರಸಿಂಹ ಮೂರ್ತಿ ಜಿ.ಕೆ. ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಸರ್ವ ಮಹಿಳಾ ಸಂಸತ್ ಅಧಿವೇಶನಕ್ಕೆ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮದ ವಿವಿಧ ಸಮಿತಿಗಳ ಉಸ್ತುವಾರಿಗಳನ್ನು ನೀಡಲಾಗಿದೆ. ಸುಮಾರು 16 ಜೆಸಿ ಘಟಕಗಳ ಅಧ್ಯಕ್ಷರು ಮತ್ತು ಸದಸ್ಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ರಾಷ್ಟ್ರಪತಿಯಾಗಿ ಡಾ. ಅನುರಾಧ ಪಟೇಲ್, ಉಪ ರಾಷ್ಟ್ರಪತಿಯಾಗಿ ಪ್ರತಿಭಾ ಅರುಣ್, ಪ್ರಧಾನ ಮಂತ್ರಿಯಾಗಿ ಅನಿಷಾ ಕಾತರಕಿ, ಉಪ ಪ್ರಧಾನಿಯಾಗಿ ಶಾಂತಾ ಎಸ್. ಶೆಟ್ಟಿ, ಸಭಾಪತಿಯಾಗಿ ಸ್ವಾತಿ ಎಸ್.ಎನ್., ಉಪ ಸಭಾಪತಿಯಾಗಿ ಅನಲಾ ಭರತ್, ಹಾಗೂ ಗೃಹ, ರಕ್ಷಣಾ, ವಿತ್ತ, ಆರೋಗ್ಯ, ರೈಲ್ವೇ, ಜವಳಿ, ಬಂದರು ಸೇರಿದಂತೆ ಸುಮಾರು 24 ಸಚಿವರನ್ನು ಕೂಡ ಆಯ್ಕೆ ಮಾಡಲಾಗಿದೆ. ಪ್ರತಿಪಕ್ಷದ ನಾಯಕರಾಗಿ ಕಾಂಗೈನಿಂದ ರೇಖಾ ರಂಗನಾಥ್, ರಾಷ್ಟ್ರಭಕ್ತರ ಬಳಗದಿಂದ ಶಶಿಕಲಾ ಪ್ರಶಾಂತ್, ಜೆಡಿಯುನಿಂದ ಮಂಜುಳಾ, ಆಮ್ ಆದ್ಮಿಯಿಂದ ಮಾರ್ಗರೇಟ್, ಶಿವಸೇನೆಯಿಂದ ಸ್ಮಿತಾ, ಸೇರಿದಂತೆ ಸುಮಾರು 14 ಪ್ರಮುಖ ಪಕ್ಷಗಳ ನಾಯಕಿಯರು ಭಾಗವಹಿಸಲಿದ್ದಾರೆ ಎಂದರು.

ನಮ್ಮೆಲ್ಲಾ ಕಾರ್ಯಕ್ರಮಗಳಿಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಸಕರು, ವಿವಿಧ ಕಾಲೇಜಿನ ಪ್ರಾಂಶುಪಾಲರುಗಳು, ಪಕ್ಷಗಳ ಮುಖಂಡರುಗಳು, ಸಹಕಾರ ನೀಡಿದ್ದಾರೆ ಎಂದರು.

SUMMARY | Jci Shivamogga will be organising the world’s largest and first metro all-women parliament session from February 21 to 23 at the National High School premises

KEYWORDS |  Jci Shivamogga, women parliament session, National High School,shivamogga,

Share This Article
Facebook Whatsapp Whatsapp Telegram Threads Copy Link
Previous Article ಗಾಂಧಿಬಜಾರ್‌, ಮೀನ್‌ ಮಾರ್ಕೆಟ್‌ ಸೇರಿದಂತೆ ಹಲವು ಏರಿಯಾಗಳಲ್ಲಿ ಫೆಬ್ರವರಿ 14 ರಂದು ಕರೆಂಟ್‌ ಇರಲ್ಲ
Next Article ಶಿವಮೊಗ್ಗ ಸಿಟಿ ಬಸ್‌ನಿಂದ ಬಿದ್ದು ವಿದ್ಯಾರ್ಥಿ ಸಾವು | ನಡೆದಿದ್ದೇನು ಗೊತ್ತಾ?
Leave a Comment

Leave a Reply Cancel reply

Your email address will not be published. Required fields are marked *

You Might Also Like

Massive Protest in Shivamogga Against Unscientific Internal Reservation
SHIVAMOGGA NEWS TODAYSTATE NEWS

ಟೈರ್​ಗೆ ಬೆಂಕಿ, ಸಿಎಂ ವಿರುದ್ಧ ಆಕ್ರೋಶ! ಶಿವಮೊಗ್ಗದಲ್ಲಿ ಒಳಮೀಸಲಾತಿ ಪ್ರತಿಭಟನೆ ! ಏನೆಲ್ಲಾ ನಡೆಯಿತು!

By ajjimane ganesh
Lokayukta ಪ್ರಕಾಶ್‌ ರಾವ್‌ ಮಂಚಾಲೆ, ಆಯುರ್ವೇದ ಸಸ್ಯಗಳು, ಪ್ರಕಾಶ್‌ ರಾವ್‌ ಮಂಚಾಲೆ, ತ್ಯಾಗರ್ತಿ, ಆಯುರ್ವೇದ ಸಸ್ಯಗಳು, ಸ್ವಾತಂತ್ರ್ಯೋತ್ಸವ, ಕೆಂಪುಕೋಟೆ, ಆಯುಷ್ ಇಲಾಖೆ, ಪ್ರಗತಿಪರ ಕೃಷಿಕ, Prakash Rao Manchalale, Thyagarathi, #PrakashRao #IndependenceDay  Sagara Land Case Sagar Tahsildar Transferred Rashmi H. J. Takes Charge, Couple Assaulted Three Arrested in sagara 09Vehicle Document Renewal akshara Habba Sagara sagara news
COURT LIVESAGARASHIVAMOGGA CRIME NEWS TODAYSHIVAMOGGA NEWS TODAY

ಸಾಗರ ಕೋರ್ಟ್​ನಿಂದ ಇಬ್ಬರಿಗೆ 2 ವರ್ಷ ಶಿಕ್ಷೆ! ಈ ಥರ ವಿಚಾರದಲ್ಲಿಯು ಜೈಲು ಖಾಯಂ

By ajjimane ganesh
Train Service Extension
SHIVAMOGGA NEWS TODAYTRAIN NEWS TODAY

ಯಶವಂತಪುರ-ತಾಳಗುಪ್ಪ ವಿಶೇಷ ರೈಲು! ಪ್ರಯಾಣಿಕರಿಗೆ ಗುಡ್ ನ್ಯೂಸ್!

By ajjimane ganesh
Haratalu halappa ಹರತಾಳು ಹಾಲಪ್ಪ
SHIVAMOGGA NEWS TODAY

Haratalu halappa :  ಸಿಗಂದೂರು ಸೇತುವೆ ಉದ್ಘಾಟನೆ: ಸಿಎಂಗೆ ದಾರಿ ತಪ್ಪಿಸಲಾಗಿದೆ – ಮಾಜಿ ಸಚಿವ ಹಾಲಪ್ಪ ಆರೋಪ

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up