SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 6, 2025
ನಮ್ಮ ಸಂಸ್ಕೃತಿಯ ಬೆಳಕನ್ನು ಮುಂದಿನ ಪೀಳಿಗೆಯವರಿಗೆ ತಲುಪಿಸುವ ಜವಾಬ್ದಾರಿ ನಮ್ಮದು ಎಂದು ಸಚಿವ ಕುಮಾರ್ ಬಂಗಾರಪ್ಪ ಕುಂಭ ಮೇಳದಲ್ಲಿ ಭಾಗವಹಿಸಿ ಗಂಗೆಯಲ್ಲಿ ಮಿಂದೆದ್ದಿದ್ದಾರೆ.
ಸಚಿವ ಕುಮಾರ್ ಬಂಗಾರಪ್ಪ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಿದ್ದಾರೆ. ರಾಜಕೀಯ ಜಂಜಾಟ ರಾಜಕೀಯ ನಾಯಕರುಗಳ ನಡುವೆ ಪರಸ್ಪರ ವೈಮನಸ್ಸು ಇವೆಲ್ಲದರ ನಡುವೆಯೂ ಸಹ ಕುಮಾರ್ ಬಂಗಾರಪ್ಪ ಭಕ್ತಿ ಪೂರ್ವಕವಾಗಿ ಕುಂಭಮೇಳದಲ್ಲಿ ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲದೆ ಫೇಸ್ ಬುಕ್‌ನಲ್ಲಿ ದೊಡ್ಡದಾದ ಶೀರ್ಷಿಕೆಯೊಂದಿಗೆ ಅಲ್ಲಿರುವ ಕೆಲವೊಂದು ಫೋಟೊಗಳನ್ನು ಸಹ ಹಂಚಿಕೊಂಡಿದ್ದಾರೆ.
ಪ್ರಯಾಗ್ ರಾಜ್ ಮಹಾಕುಂಭ ಮೇಳ, ನಮ್ಮ ಸಂಸ್ಕೃತಿಯ ಮಹಾನ್ ಪಾವನ ಪರಂಪರೆಯ ಭಾಗವಾಗಿದ್ದು, ಪವಿತ್ರ ತ್ರಿವೇಣಿ ಸಂಗಮದಲ್ಲಿ ಪಾಪವಿಮೋಚನೆಗಾಗಿ ಮತ್ತು ಧಾರ್ಮಿಕ ಶುದ್ಧೀಕರಣಕ್ಕಾಗಿ ಕೋಟ್ಯಂತರ ಭಕ್ತರು ಜಮಾಯಿಸುವ ಅತಿವಿಶೇಷ ಕ್ಷಣ.
ಈ ಪವಿತ್ರ ಮಹಾಕುಂಭ ಮೇಳದಲ್ಲಿ ಭಾಗವಹಿಸುತ್ತಿರುವುದು ನನಗೆ ಅತ್ಯಂತ ಗೌರವದ ಸಂಗತಿ. ಇದು ಸಮಾಜದಲ್ಲಿ ಸೌಹಾರ್ದ್ಯ, ಶಾಂತಿ, ಮತ್ತು ಸಜ್ಜನತೆ ಹರಡುವ ಅದ್ಭುತ ಅವಕಾಶವಾಗಿದೆ. ನಾವು ನಮ್ಮ ಸಂಸ್ಕೃತಿಯ ಬೆಳಕನ್ನು ಮುಂದಿನ ಪೀಳಿಗೆಯವರಿಗೆ ತಲುಪಿಸುವ ಜವಾಬ್ದಾರಿ ಹೊಂದಿದ್ದೇವೆ. ಹೀಗಾಗಿ, ಇಂತಹ ಧಾರ್ಮಿಕ ಉತ್ಸವಗಳಲ್ಲಿ ಶ್ರದ್ಧೆಯಿಂದ ಭಾಗವಹಿಸಿ, ಸನಾತನ ಧರ್ಮದ ಮೌಲ್ಯಗಳನ್ನು ಜೀವಿಸುವ ಮತ್ತು ಉಳಿಸುವ ಕೆಲಸ ಮಾಡೋಣ. ನಮ್ಮ ಭಾರತೀಯ ಸಂಸ್ಕೃತಿ ಸಹಿಷ್ಣುತೆಯ, ಸಹಬಾಳ್ವೆಯ, ಮತ್ತು ಭಕ್ತಿಯ ಪ್ರತೀಕ. ಈ ಮಹಾಕುಂಭ ಮೇಳದ ಶುಭ ಸಂದರ್ಭದಲ್ಲಿ, ನಾವೆಲ್ಲರೂ ಒಗ್ಗಟ್ಟಿನಿಂದ, ಪರಸ್ಪರ ಪ್ರೀತಿ, ನಿಷ್ಠೆ ಮತ್ತು ಸಹಕಾರದೊಂದಿಗೆ ಬದುಕೋಣ. ಎಂದು ಬರೆದುಕೊಂಡಿದ್ದಾರೆ.
SUMMARY | It is our responsibility to pass on the light of our culture to the next generation,” said Minister Kumar Bangarappa, who participated in the Kumbh Mela.
KEYWORDS | Kumar Bangarappa, Kumbh Mela, culture,