SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 3, 2025
ಶಿವಮೊಗ್ಗ | ಸಚಿವ ಮಧುಬಂಗಾರಪ್ಪನವರು ಸರಿಯಾದ ವಿಷಯವನ್ನು ತಿಳಿದುಕೊಳ್ಳದೆ ವಿಧಾನಪರಿಷತ್ ಸದಸ್ಯ ಡಿಎಸ್ ಅರುಣ್‌ರವರಿಗೆ ಸಾಮಾನ್ಯ ಜ್ಞಾನ ಇಲ್ವಾ ಎಂಬ ಪದ ಬಳಕೆ ಮಾಡಿದ್ದು ತಪ್ಪು ಎಂದು ಕುವೆಂಪು ವಿವಿಯ ಮಾಜಿ ಸದಸ್ಯ ಚಂದ್ರಶೇಖರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ಕುವೆಂಪು ವಿಶ್ವವಿದ್ಯಾಲಯದಲ್ಲಿ ಓದಿ ಬಂದವನು. ನನಗೆ ಅಲ್ಲಿ ಒಂದು ಹುದ್ದೆ ಸಿಕ್ಕಿರುವುದು ಬಹಳ ಸಂತೋಷ ತಂದಿದೆ. ಕುವೆಂಪು ವಿಶ್ವವಿಧ್ಯಾಲಯದ 34 ನೇ ಘಟಿಕೋತ್ಸವದ ದಿನ ನಾನು ಮತ್ತು ಡಿಎಸ್ ಅರುಣ್ ರವರು ತೆರಳಿದ್ದೇವು. ಅಂದು ಆ ಘಟಿಕೋತ್ಸವವನ್ನು ವಿದ್ಯಾರ್ಥಿಗಳು ಭೋಧಕೇತರ ಸಿಬ್ಬಂದಿಗಳು ನಡೆಸಿದ್ದು, ಬಹಳ ಬೇಸತ ತರಿಸಿದೆ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಷ್ಟುಜನ ಕೆಲಸಗಾರರಿದ್ದರೂ ಸಹ ವಿದ್ಯಾರ್ಥಿಗಳು ಯಾಕೆ ಈ ಈವೆಂಟ್‌ನ್ನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿತು. ಅಷ್ಟು ದೊಡ್ಡ ಕಾರ್ಯಕ್ರಮವನ್ನು ಒಂದು ಶಾಲಾ ವಾರ್ಷಿಕೋತ್ಸದ ರೀತಿ ಮಾಡಿ ಮುಗಿಸಿದರು.
ಇದರಿಂದಾಗಿ ಡಿ ಎಸ್ ಅರುಣ್‌ರವರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಅವ್ಯವಹಾರ ಹಾಗೂ ಭ್ರಷ್ಟಾಚಾರಗಳ ಬಗ್ಗೆ ಹೇಳಿಕೆಯನ್ನು ನೀಡಿದರು. ಹಾಗೆಯೇ ಶಿಕ್ಷಣ ಸಚಿವರು ಕಾರ್ಯಕ್ರಮಕ್ಕೆ ಗೈರಾಗಿರುವುದಕ್ಕೆ ಬೇಸರವನ್ನು ಸಹ ವ್ಯಕ್ತಪಡಿಸಿದರು. ಆದರೆ ಅದಕ್ಕೆ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಡಿ ಎಸ್ ಅರುಣ್‌ರವರಿಗೆ ಸಾಮಾನ್ಯ ಜ್ಞಾನ ಇಲ್ವ ಎಂದು ಕೇಳಿದ್ದಾರೆ.
ಸಚಿವರೆ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ನಿಮಗೆ ತಿಳಿಯಲಿ ಎಂಬ ಕಾರಣದಿಂದ ಡಿ ಎಸ್ ಅರುಣ್ ರವರು ನಿಮ್ಮ ಅನುಪಸ್ಥಿತಿಯ ಬಗ್ಗೆ ಪ್ರಶ್ನಿಸಿದ್ದೇ ಹೊರತು ಬೇರೆ ಕಾರಣದಿಂದಲ್ಲ. ಕುವೆಂಪು ವಿಶ್ವವಿದ್ಯಾಲಯಕ್ಕೆ ಕ್ರೀಡಾ ಸಾಮಗ್ರಿಗಳಿಗೆಂದು ಅನುದಾನ ಬಂದಿದೆ ಆ ಹಣ ಎಲ್ಲಿಗೆ ಹೋಗಿ ಮುಟ್ಟುತ್ತೆ ಎಂಬುವುದು ಯಾರಿಗೂ ತಿಳಿದಿಲ್ಲ. ಆ ಎಲ್ಲಾ ವಿಚಾರಗಳು ಶಿಕ್ಷಣ ಸಚಿವರಾಗಿ ನಿಮಗೆ ತಿಳಿದಿರಬೇಕು. ಕುವೆಂಪು ವಿಶ್ವವಿದ್ಯಾಲಯದ ಮೇಲಿರುವ ಕಾಳಜಿಯಿಂದ ಅರುಣ್ ರವರು ಈ ಪ್ರಶ್ನೆಯನ್ನು ಕೇಳಿದ್ದಾರೆ. ಆ ರೀತಿಯ ಪ್ರಶ್ನೆಯನ್ನುಕೇಳಿದವರಿಗೆ ಸಚಿವರಾಗಿ ನೀವು ಸಾಮಾನ್ಯ ಜ್ಞಾನ ಇಲ್ವಾ ಎಂದು ಕೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಇಂಥಹ ಪದಗಳನ್ನು ಸಚಿವರು ಇನ್ಮುಂದೆ ಬಳಸಬಾರದು.ಕುವೆಂಪು ವಿಶ್ವವಿದ್ಯಾಲಯ ಯಾರಿಗೂ ಸೀಮಿತವಲ್ಲ.,ಕುವೆಂಪು ವಿಶ್ವವಿದ್ಯಾಲಯದ ನಮ್ಮ ಜಿಲ್ಲೆಯ ಆಸ್ತಿ ವಿದ್ಯಾಲಯದ ಅಭಿವೃದ್ಧಿಗೆ ಸಚಿವರು ಯಾವುದೇ ನಿರ್ಧಾರ ಕೈಗೊಂಡರು ನಾವು ಸಹಕರಿಸುತ್ತೇವೆ ಎಂದರು.
SUMMARY | Chandrushekhar, a former member of Kuvempu University, alleged that it was wrong for Minister Madhu Bangarappa to use the word ‘ordinary knowledge’ for MLC D.S. Arun without knowing the right thing.
KEYWORDS | Chandrushekhar, Kuvempu University, D.S. Arun, Madhu Bangarappa,