SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 31, 2025
ಶಿವಮೊಗ್ಗ | ಕುವೆಂಪು ವಿಶ್ವವಿದ್ಯಾಲಯದಲ್ಲಿ ಅವ್ಯವಹಾರ ನಡೆದು ಈ ದುಸ್ಥಿತಿಗೆ ಬರಲು ಬಿಜೆಪಿ ಸರ್ಕಾರ ಕಾರಣ, ನಾವು ಆಡಳಿತಕ್ಕೆ ಬಂದ ಮೇಲೆ ವಿವಿ ಯನ್ನು ಹತೋಟಿಗೆ ತರುವ ಕೆಲಸ ಮಾಡಿದ್ದೇವೆ ಎಂದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ಕುವೆಂಪು ವಿಶ್ವವಿದ್ಯಾಲಯ ಮುಚ್ಚುವ ಸ್ಥಿತಿಗೆ ಬಂದಿದ್ದು ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಡಿ ಎಸ್ ಅರುಣ್ ಹೇಳಿಕೆಗೆ ಸಚಿವರು ಈ ಮೇಲಿನಂತೆ ಉತ್ತರಿಸಿದರು. ಕುವೆಂಪು ವಿಶ್ವ ವಿದ್ಯಾಲಯದ ಅದೋಗತಿಗೆ ಬಿಜೆಪಿಯವರೇ ಕಾರಣ ಎಂಬುದು ಎಲ್ಲರಿಗೂ ಗೊತ್ತು. ಸುಮ್ಮನೆ ಇಲ್ಲಸಲ್ಲದ ಆಪಾದನೆಯನ್ನು ನಮ್ಮ ಸರ್ಕಾರದ ಮೇಲೆ ಹೊರಿಸಬೇಡಿ. ನಮ್ಮ ಸರ್ಕಾರ ಬಂದ ಮೇಲೆಯೇ ಕುವೆಂಪು ವಿಶ್ವ ವಿದ್ಯಾಲಯ ಹತೋಟಿಗೆ ಬಂದಿದ್ದು ಎಂದರು.
ಡಿ ಎಸ್ ಅರುಣ್‌ರವರಿಗೆ ಕಾಮನ್ ಸೆನ್ಸ್ ಇಲ್ಲ
ರಾಜ್ಯಪಾಲರು ಒಂದು ಕಾರ್ಯಕ್ರಮಕ್ಕೆ ಬಂದಾಗ ಯಾವ ರೀತಿಯ ಸಭ್ಯತೆಯಿಂದ ವರ್ತಿಸಬೇಕೆಂದು ಡಿ ಎಸ್ ಅರುಣ್‌ರವರು ಮೊದಲು ಕಲಿತುಕೊಳ್ಳಬೇಕು. ಘಟಕೋತ್ಸವಕ್ಕೆ ರಾಜ್ಯಪಾಲರು ಬಂದ ದಿನ ನಾನು ಬಾರದೆ ಇರುವ ಒಂದು ವಿಷಯವನ್ನು ಹಿಡಿದುಕೊಂಡು ಆರೋಪವನ್ನು ಮಾಡುತ್ತಿದ್ದಾರೆ. ಆದರೆ ರಾಜ್ಯ ಪಾಲರು ಬಂದಾಗ ಡಿ ಎಸ್ ಅರುಣ್‌ರವರು ತಡವಾಗಿ ಬಂದ್ರು. ರಾಜ್ಯಪಾಲರು ಒಂದು ಕಾರ್ಯಕ್ರಮಕ್ಕೆ ಬಂದಾಗ ಯಾವ ರೀತಿಯ ಸಭ್ಯತೆಯಿಂದ ವರ್ತಿಸಬೇಕೆಂಬ ಕಾಮನ್ ಸೆನ್ಸ್ ಅರುಣ್‌ರವರಿಗಿಲ್ಲ ಎಂದು ಗುಡುಗಿದರು.
SUMMARY | Education Minister Madhu Bangarappa said that the BJP government was responsible for the irregularities in kuvempu university and after coming to power, we worked to control the university.
KEYWORDS | Education Minister, Madhu Bangarappa, kuvempu university, BJP government,