SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 31, 2025
ಶಿವಮೊಗ್ಗ | ನಾದಲೀಲೆ ಸಾಂಸ್ಕ್ರತಿಕ ಟ್ರಸ್ಟ್ ಶಿವಮೊಗ್ಗದ ಉದ್ಘಾಟನಾ ಸಮಾರಂಭ ಫೆಬ್ರವರಿ 2 ರಂದು ಸಂಜೆ 4:30 ಕ್ಕೆ ನಗರದ ಬಿ ಆರ್ ಅಂಬೇಡ್ಕರ್ ಭನದಲ್ಲಿ ನಡೆಯಲಿದೆ ಎಂದು ಟ್ರಸ್ಟ್‌ನ ಖಜಾಂಚಿ ಆರ್ ಡಿ ರೇವಂತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿವಮೊಗ್ಗ ನಗರದ ಸಾಂಸ್ಕ್ರತಿಕ ಏಳಿಗೆಗೋಸ್ಕರ ಈ ಟ್ರಸ್ಟ್‌ನ್ನು ಸ್ಥಾಪಿಸುತ್ತಿದ್ದೇವೆ. ಈ ಟ್ರಸ್ಟ್ ನಲ್ಲಿ ನೃತ್ಯ ನಾಟಕ ಸಂಗೀತ ಸೇರದಂತೆ ಮಂತಾದವುಗಳ ಬಗ್ಗೆ ತರಭೇತಿ ನೀಡುತ್ತೇವೆ. ಕಲೆ ಹಗೂ ಸಂಸ್ಕ್ರುತಿ ಎಂದರೇನು ಎಂಬುವುದರ ಬಗ್ಗೆ ಮುಂದಿನ ಪೀಳಿಗೆಗೆ ಮಾಹಿತಿಯನ್ನು ನೀಡುತ್ತೇವೆ ಎಂದರು.
ಕಾರ್ಯಕ್ರಮದ ದಿನ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 4 ಜನ ಸಾಧಕರಿಗೆ ನಾದಲೀಲೆ ರಾಜ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದೇವೆ. ಹಾಗೆಯೇ ಹತ್ತನೇ ತರಗತಿ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಗಳಿಸಿದ ಸುಮಾರು 42 ಜನ ವಿದ್ಯಾರ್ಥಿಗಳಿಗೆ ಕನ್ನಡ ಕುವರ ಕುವರಿ ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದೇವೆ ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತರು, ಶಿವಗಂಗಾ ಯೋಗ ಕೇಂದ್ರ ಶಿವಮೊಗ್ಗ ಯೋಗಾಚಾರ್ಯ ಡಾ ಸಿ.ವಿ. ರುದ್ರಾರಾಧ್ಯ, ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್‌ನ ಸಂಸ್ಥಾಪಕರಾದ ಶಾಂತಾ ಎಸ್. ಶೆಟ್ಟಿ, ಜೂನಿಯರ್ ವಿಷ್ಣುವರ್ಧನ್ ಎಂದು ಖ್ಯಾತರಾಗಿರುವ ಅಪೇಕ್ಷ ಮಂಜುನಾಥ್ ಭದ್ರಾವತಿ ಹಾಗೂ ಡಾ॥ ರಾಜೇಂದ್ರ ಬುರಡಿಕಟ್ಟಿ ಲೇಖಕರು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು, ಶಿವಮೊಗ್ಗ ಇವರುಗಳು ನಾದಲೀಲೆ ರಾಜ್ಯ ಪ್ರಶಸ್ತಿಯನ್ನು ಪಡೆಯುವ ಸಾಧಕರಾಗಿದ್ದಾರೆ.
SUMMARY | The inauguration ceremony of Nadaleele Cultural Trust Shivamogga. The event will be held at 4:30 pm on May 2 at B R Ambedkar Bhavan in the city, said R D Revanth, treasurer of the trust.
KEYWORDS | Nadaleele Cultural Trust, inauguration ceremony, shivamogga,