SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 30, 2025
ಶಿವಮೊಗ್ಗ| ಕಾಂಗ್ರೆಸ್‌ನ ಮಲ್ಲಿಕಾರ್ಜುನ್ ಖರ್ಗೆಯವರು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದ ಬಗ್ಗೆ ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರಿಗೆ ಈಗಾಲೇ 80 ವರ್ಷ ದಾಟಿದೆ ಆದರೂ ಸಹ ಈ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಿರುದ್ದ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಲ್ಲಿಕಾರ್ಜುನ್ ಖರ್ಗೆಯವರು ಕುಂಭಮೇಳದಿಂದ ದೇಶದ ಬಡತನ ನಿರ್ಮೂಲನೆ ಆಗುತ್ತಾ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಯಾವಾಗಲೂ ಸಹ ಇಂತಹ ಹೇಳಿಕೆಯನ್ನು ನೀಡುವುದರ ಮೂಲಕ ಹಿಂದೂಗಳ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಇದೇ ರೀತಿಯ ಪ್ರಶ್ನೆಯನ್ನು ಮುಸ್ಲಿಮರು ಮೆಕ್ಕಾ ಮದೀನಕ್ಕೆ ಹೋಗುತ್ತಾರಲ್ಲ ಅವರಿಗೆ ನಿವ್ಯಾಕೆ ಮೆಕ್ಕಾ ಮದೀನಕ್ಕೆ ಹೋಗತ್ತೀರಿ ಎಂದು ಕೇಳಲು ಅವರಿಗೆ ಧೈರ್ಯವಿಲ್ಲ. ಇನ್ಮುಂದೆ ನಮ್ಮ ತೀರ್ಥ ಕ್ಷೇತ್ರದ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದರು

ಹಿಂದೂ ಸಮಾಜದ ಮೇಲೆ ಯಾಕೆ ನಿಮಗೆ ಚಿಂತೆ, ಈ ಸಮಾಜದಲ್ಲಿ ಪುಣ್ಯ ಕ್ಷೇತ್ರದ ಬಗ್ಗೆ, ಹಸು ಬಗ್ಗೆ, ನದಿ ಬಗ್ಗೆ ಹಗುರವಾಗಿ ಮಾತನಾಡುವ ಅನೇಕರು ಕಾಂಗ್ರೆಸ್ ನಲ್ಲಿದ್ದಾರೆ. ಮೋದಿ ಬಗ್ಗೆ ಅಮಿತ್ ಶಾ ಬಗ್ಗೆ ಟೀಕೆ ಮಾಡಲು ನೀವು ಯಾರು. ನಿಮ್ಮ ಕಾಂಗ್ರೆಸ್‌ನ ಅನೇಕ ನಾಯಕರು ಕದ್ದುಮುಚ್ಚಿ ಕುಂಭಮೇಳಕ್ಕೆ ಹೋಗಿ ಮಿಂದೆದ್ದು ಬಂದಿದ್ದಾರೆ. ಅವರನ್ನು ಪಕ್ಷದಿಂದ ಕಿತ್ತು ಹಾಕುವ ತಾಕತ್ತು ನಿಮಗಿದೆಯಾ ಎಂದು ಪ್ರಶಿಸಿದರು.
SUMMARY | Mallikarjun Kharge of the Congress has been talking very lightly about the ongoing Kumbh Mela in Prayagraj.
KEYWORDS | Mallikarjun Kharge, Congress, Kumbh Mela, ks eshvarappa,