SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 29, 2025
ಶಿವಮೊಗ್ಗ | ಸಂವಿಧಾನ ಸಂರಕ್ಷಣಾ ದಿನದ ಅಂಗವಾಗಿ ಅಹಿಂದ ಸಮ್ಮೇಳನ ಚಿಂತನಾ ಮಂತನಾ ಕಾರ್ಯಕ್ರಮವನ್ನು ಅಹಿಂದ ಚಳುವಳಿ ಶಿವಮೊಗ್ಗ, ಮಿಲಿಂದ ಸಂಘಟನೆ ಶಿವಮೊಗ್ಗ ಹಾಗು ಹಿಂದುಳಿದ ಜನಜಾಗೃತಿ ವೇದಿಕೆ ಶಿವಮೊಗ್ಗ ವತಿಯಿಂದ ಜನವರಿ 31 ರಂದು ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಹಿಂದುಳಿದ ಜನಜಾಗೃತಿ ವೇದಿಕೆಯ ಗೌವರವ ಅಧ್ಯಕ್ಷರಾದ ಪ್ರೋ ಹೆಜ್ ರಾಜಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕದ ರಾಜಕೀಯ ಸ್ಥಿತಿ ಔದ್ಯೋಗಿಕ ಸ್ಥಿತಿ ಹಾಗೂ ಸಾಮಾಜಿಕ ಸ್ಥಿತಿಯ ಕುರಿತು ಈ ಚಿಂತನಾ ಮಂಥನ ಕಾರ್ಯಕ್ರಮ ನಡೆಯಲಿದೆ.ಅಂದು ಬೆಳಗ್ಗೆ 11ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ವಿಧಾನಸಭೆಯ ಮಾಜಿ ಕಾರ್ಯದರ್ಶಿ ಮತಗತು ಅಹಿಂದ ರಾಜ್ಯ ಪ್ರಧಾನ ಸಂಚಾಲಕ ಎಸ್. ಮೂರ್ತಿ ಆಗಮಿಸುವರು. ಹಾಗೆಯೇ ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತ, ಕ್ರಾಂತಿದೀಪ ಸಂಪಾದಕ ಎನ್. ಮಂಜುನಾಥ್, ಮಾಧ್ಯಮ ಅಕಾಡಮಿ ಪ್ರಶಸ್ತಿ ಪುರಸ್ಕೃತ ಆರುಂಡಿ ಶ್ರೀನಿವಾಸ್ಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದರು. ಪ್ರಾಸ್ತಾವಿಕ ಭಾಷಣವನ್ನು ಸಂಘಟನೆಯ ಜಿಲ್ಲಾಧ್ಯಕ್ಷ ತೀ.ನ. ಶ್ರೀನಿವಾಸ ವಹಿಸುವರು. ಈ ಚಿಂತನಾ ಮಂಥನಾ ಕಾರ್ಯಕ್ರಮದಲ್ಲಿ 4 ಖಂಡನಾ ನಿರ್ಣಯ ಹಾಗೂ ಹಾಗು 3 ಸಾಮಾನ್ಯ ನಿರ್ಣಯದ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಅವುಗಳೆಂದರೆ ರಾಜ್ಯ ಸರ್ಕಾರ ಒಳಮೀಸಲಾತಿಗೆ ವಿಳಂಬ ಮಾಡುತ್ತಿರುವುದು. ಗೃಹಸಚಿವರಾದ ಅಮಿತ್ ಶಾ ಅಂಬೇಡ್ಕರ್ ಬಗ್ಗೆ ವ್ಯಂಗ್ಯವಾಗಿ ಹೇಳಿಕೆ ನೀಡಿರುವುದು. ಕಾಂತರಾಜ್ ಆಯೋಗವನ್ನು ಜಾರಿಗೆ ತರದೇ ಇರುವುದು ಹಾಗು ದೇವರಾಜ್ ಅರಸ್ ಭವನದ ನಿರ್ಮಾಣ ಕಾಮಗಾರಿಯನ್ನು ತಡ ಮಾಡುತ್ತಿರುವುದು. ಇದು 4 ಖಂಡನಾ ನಿರ್ಣಯವಾಗಿದೆ.
ಜಾತಿಗಣತಿ ಮಾಡುವುದು. ಮುಸ್ಲಿಂ ಸಾಚಾರ್ ಕಮಿಟಿಯ ವರದಿಯನ್ನು ಜಾರಿಗೆ ತರುವುದು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ರಾಜಕೀಯ ಮೀಸಲಾತಿ ನೀಡುವುದು ಇದು ಸಾಮಾನ್ಯ ನಿರ್ಣಯವಾಗಿದೆ ಎಂದರು.
SUMMARY | As part of Samvidana Samrakshana Diwas, Ahinda Sammelana Chintana Mantana programme will be organised by Ahinda Andolana Shivamogga, Milinda Sangathana Shivamogga and Backward Janajagruti Vedike, Shivamogga on Jan. 31 at Pathrakarthara Bhavan in city.
KEYWORDS | Samvidana, Samrakshana Diwas, Ahinda Sammelana, Shivamogga,