SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 24, 2025
ಶಿವಮೊಗ್ಗ | ಸಹಕಾರ ಭಾರತಿಗೆ ಸಂಘಕ್ಕೆ ಅಡಿಕೆ ಬೆಳೆಗಾರರಿಂದ ಮತ ಕೇಳುವ ನೈತಿಕತೆ ಇಲ್ಲ ಎಂದು ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ರಮೇಶ್ ಹೆಗ್ಡೆ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಾಗರದಲ್ಲಿ ನಡೆದ ಅಡಿಕೆ ಸಮಾವೇಶಕ್ಕೆ ಬಂದ ಕೇಂದ್ರ ಕೃಷಿ ಸಚಿವರು ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎಂಬ ಹೇಳಿಕೆಯನ್ನು ನೀಡುತ್ತಾರೆಂದು ನಾವೆಲ್ಲಾ ಭಾವಿಸಿದ್ದೆವು.
ಆದರೆ ಅವರು ಸಂಶೋದನಾ ಕೇಂದ್ರಗಳನ್ನು ಮಾಡಿ ಸಂಶೋಧನೆ ಆದ ನಂತರ ಅಫಿಡವಿಟ್ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಕೃಷಿಸಚಿವರಿಗೆ ಅಡಿಕೆಯಲ್ಲಿರುವ ಔಷದಿ ಗುಣಗಳ ಇನ್ನೂ ತಿಳಿದಿಲ್ಲ ಎಂದರು. ಸಹಕಾರಿ ಭಾರತಿ ಸಂಘವು ಬಿಜೆಪಿಯ ಒಂದು ಅಂಗ ಸಂಸ್ಥೆಯಾಗಿದೆ. ತಮ್ಮದೇ ಆದಂತಹ ಕೇಂದ್ರ ಸರ್ಕಾರದ ಕೃಷಿ ಸಚಿವರಿಗೆ ಅಡಿಕೆಯ ಗುಣಗಳ ಮನವರಿಕೆ ಮಾಡಿಕೊಡುವಲ್ಲಿ ಸಹಕಾರ ಭಾರತಿ ಸಂಪೂರ್ಣ ವಿಫಲವಾಗಿದೆ.
ಇಂಡೋನೇಷ್ಯಾದಿಂದ ಕಳಪೆ ಗುಣಮಟ್ಟದ ಅಡಿಕೆ ಶಿವಮೊಗ್ಗಕ್ಕೆ ಬರುತ್ತಿದೆ. ಅದರ ಬಗ್ಗೆ ಈ ಸಹಕಾರಿ ಭಾರತಿ ಸಂಘ ಯಾವುದೇ ದ್ವನಿ ಎತ್ತಲಿಲ್ಲ. ಅಡಿಕೆಯ ಮಾನಕ್ಕಿಂತ ಸಹಕಾರ ಭಾರತಿಗೆ ಅವರ ಬಿಜೆಪಿ ಪಕ್ಷ ಮುಖ್ಯ. ಮ್ಯಾಮ್ಕೋಸ್ ಚುನಾವಣೆ ಫೆಬ್ರವರಿ 4 ರಂದು ನಡೆಯಲಿದೆ. ಅದರ ಹಿನ್ನಲೆ ಮೊನ್ನೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸಾಗರಕ್ಕೆ ಭೇಟಿ ನೀಡಿದ್ದಾರೆ. ಸ್ವಯಂ ಘೋಷಿತ ಅಡಿಕೆ ರಕ್ಷಕರೆಂದು ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಿರುವ ಸಹಕಾರ ಭಾರತಿ ಸಂಘಕ್ಕೆ ಅಡಿಕೆ ಬೆಳೆಗಾಗರ ಸಮಸ್ಯೆ ಅರ್ಥವಾಗುತ್ತಿಲ್ಲ. ಅದ್ದರಿಂದ ಅವರಿಗೆ ಮುಂಬರುವ ಚುನಾವಣೆಯಲ್ಲಿ ರೈತರ ಬಳಿ ಮತ ಕೇಳುವ ನೈತಿಕತೆ ಇಲ್ಲ ಎಂದರು.
SUMMARY | Ramesh Hegde, president of the District Arecanut Growers’ Association, alleged that the association does not have the morality to seek votes from arecanut growers
KEYWORDS | Ramesh Hegde, Arecanut, sahakara bharati,
