SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 18, 2025
ಶಿವಮೊಗ್ಗ | ಕೃತಕ ಬುದ್ದಿಮತ್ತೆ (ಎಐ) ಈಗ ವಿಶ್ವದಾದ್ಯಂತ ಸುದ್ದಿ ಮಾಡುತ್ತಿದ್ದು, ನಾವೆಲ್ಲರೂ ಅದನ್ನು ತಾಂತ್ರಿಕತೆಯಿಂದ ಏನು ಮಾಡಲು ಸಾಧ್ಯವಿಲ್ಲ ಅದನ್ನು ಭಾವುಕತೆಯಿಂದ ಗೆಲ್ಲಬೇಕು ಎಂದು ಕನ್ನಡಪ್ರಭದ ಹಿರಿಯ ಪತ್ರಕರ್ತ ಹಾಗು ಸಾಹಿತಿ ಜೋಗಿ ಗಿರೀಶ್ ರಾವ್ ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಹಿರಿಯ ಪತ್ರಕರ್ತ ಜೋಗಿ ಗಿರೀಶ್ ರಾವ್ ರೊಂದಿಗೆ ಪತ್ರಿಕಾ ಸಂವಾದ ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಗಿರೀಶ್ ರಾಜ್ ಕೃತಕ ಬುದ್ದಿಮತ್ತೆ ಪ್ರಸ್ತುತ ಜಗತ್ತಿನಲ್ಲಿ ಯಾವ ರೀತಿ ಪ್ರಭಾವ ಬೀರುತ್ತಿದೆ ಅದರಿಂದಾಗುವ ಪ್ರಯೋಜನ ಹಾಗೂ ದುಷ್ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು
ಇಂಗ್ಲೀಷ್‌ನಲ್ಲಿ ಇತ್ತೀಚೆಗೆ ಕೃತಕ ಬುದ್ದಿಮತ್ತೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಕವಿಗಳು ಹಾಗೂ ಚಿತ್ರ ನಿರ್ದೇಶಕರು ಒಂದು ಲೈನ್ ಕತೆ ಬರೆದು ಅದನ್ನು ಚಾಟ್ ಜಿಪಿಟಿಗೆ ಹಾಕಿದರೆ ಅದು ನಮ್ಮ ಮನಸ್ಸಿನಲ್ಲಿರುವ ಸಂಪೂರ್ಣ ಕಥೆಯನ್ನು ನೀಡುತ್ತದೆ. ಇತ್ತೀಚೆಗೆ ಎಷ್ಟೋ ಜನ ವಿದ್ಯಾರ್ಥಿಗಳು ಚಾಟ್ ಜಿಪಿಟಿಯಿಂದ ಪಠ್ಯಗಳ ಬಗ್ಗೆ ಶಿಕ್ಷಕರಿಗಿಂತ ಹೆಚ್ಚಿನ ವಿಷಯವನ್ನು ತಿಳಿದುಕೊಳ್ಳತ್ತಿದ್ದಾರೆ. ಇನ್ನೊಂದು ಐದು ವರ್ಷದಲ್ಲಿ ಕೃತಕ ಬುದ್ದಿಮತ್ತೆ ಕನ್ನಡವನ್ನು ಕಲಿತು ಕನ್ನಡ ಮಾಧ್ಯಮಕ್ಕೂ ಕಾಲಿಡಲಿದೆ ಎಂದರು.
ತಂತ್ರಜ್ಙಾನವನ್ನು ಅಭಿವೃದ್ದಿ ಪಡಿಸಿದ ಎಷ್ಟೋ ಜನ ವಿಜ್ಞಾನಿಗಳು ಅದರ ಅಗಾಧತೆಯನ್ನು ತಿಳಿದುಕೊಂಡು ಇಂದು ಈ ಕೆಲಸವೇ ಬೇಡವೆಂದು ಬಿಟ್ಟು ಹೋಗಿರುವ ಉದಾಹರಣೆಗಳಿವೆ. ತಂತ್ರಜ್ಙಾನದಿಂದ ಎಷ್ಟು ಅನುಕೂಲತೆ ಇದೆಯೋ ಅಷ್ಟೇ ಅನಾನುಕೂಲತೆಯೂ ಇದೆ. ನಾವೆಲ್ಲರೂ ಅದನ್ನು ತಾಂತ್ರಿಕತೆಯಿಂದ ಏನು ಮಾಡಲು ಸಾಧ್ಯವಿಲ್ಲ ಅದನ್ನು ಭಾವುಕತೆಯಿಂದ ಗೆಲ್ಲಬೇಕು ಎಂದು ಜೋಗಿ ತಿಳಿಸಿದರು.
ಈ ಹಿಂದೆ ಮೊದಲು ಕಂಪ್ಯೂಟರ್ ಪತ್ರಿಕೋದ್ಯಮಕ್ಕೆ ಕಾಲಿಟ್ಟಾಗ ಅನೇಕ ಪತ್ರಕರ್ತರು ಅದನ್ನು ವಿರೋದಿಸಿದರು. ಆದರೆ ಕೆಲವರು ಅದರೋಡನೆ ಬೆರೆತು ಕಲಿತುಕೊಂಡರು. ಹಾಗೆ ಕಲಿತವರು ಇದುವರೆಗೂ ಕೆಲಸ ಮಾಡುತಿದ್ದಾರೆ. ಅದನ್ನು ವಿರೋಧಿಸಿದರು ಕೆಲಸವನ್ನು ಕಳೆದುಕೊಂಡಿದ್ದಾರೆ ಎಂದರು.
SUMMARY | Jogi Girish Rao, a senior journalist and writer of Kannada Prabha, said that nothing can be done with technology and it has to be won with emotion.
KEYWORDS | Jogi Girish Rao, journalist, technology,
