ರೈಲ್ವೇ ಇಲಾಖೆಯ ಹಾಫ್‌ ಟಿಕೇಟ್‌ ಬಗ್ಗೆ ನಿಮಗೆಷ್ಟು ಗೊತ್ತು

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 15, 2025

ಪ್ರತಿದಿನ ಲಕ್ಷಾಂತರ ಜನರು ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಇದರ ನಡುವೆ ರೈಲ್ವೇ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ಅದೆಷ್ಟೋ ಪ್ರಯಾಣಿಕರಿಗೆ ಅದರ ಬಗ್ಗೆ ಮಾಹಿತಿಯೇ ಇರುವುದಿಲ್ಲ. ರೈಲ್ವೇ ಇಲಾಖೆಯ ವಿವಿಧ ನಿಯಮಗಳಲ್ಲಿ ಮಕ್ಕಳಿಗೆ ಹಾಫ್‌ ಟಿಕೆಟ್ ಎಂಬ ನಿಯಮವೊಂದಿದ್ದು, ಆ ನಿಯಮ ಎಷ್ಟವರ್ಷದ ಮಕ್ಕಳಿಗೆ ಅನ್ವಯವಾಗುತ್ತದೆ ಎನ್ನುವುದರ ಬಗ್ಗೆ ತಿಳಿಯೋಣ

ಏನಿದು ಹಾಫ್ ಟಿಕೆಟ್‌ ಎಷ್ಟು ವರ್ಷದ ಮಕ್ಕಳಿಗೆ ಅನ್ವಯವಾಗುತ್ತದೆ

ಹಾಫ್ ಟಿಕೆಟ್‌ ಎಂದರೆ ‌ ರೈಲಿನಲ್ಲಿ 1 ರಿಂದ 4 ವರ್ಷದೊಳಗಿನ ಮಕ್ಕಳಿದ್ದರೆ ಅವರಿಗೆ ರೈಲ್ವೆ ಇಲಾಖೆ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ. ಹಾಗೆಯೇ  5 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ರೈಲಿನಲ್ಲಿ ಪ್ರಯಾಣಿಸುವಾಗ ಅರ್ಧ ಟಿಕೇಟ್‌ ಚಾರ್ಜ್‌ನ್ನು ಪಡೆಯುತ್ತಾರೆ. ಅರ್ಧ ಟಿಕೇಟ್‌ ಎಂದರೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ರೈಲ್ವೇ ಇಲಾಖೆ ಇಂತಿಷ್ಟು ದರವನ್ನು ನಿಗದಿಪಡಿಸಿರುತ್ತದೆ. ಆದರೆ ಈ 5 ರಿಂದ 12 ವರ್ಷದೊಳಗಿನ ಮಕ್ಕಳು ಆ ದರದ ಅರ್ಧ ಹಣವನ್ನು ಮಾತ್ರ ಪಾವತಿಸಿದರೆ ಸಾಕಾಗುತ್ತದೆ. ಆದರೆ ನಿಮ್ಮ ಮಗು ಪೂರ್ಣ ಪ್ರಮಾಣದಲ್ಲಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಿಕೊಳ್ಳಬೇಕೆಂದು ಕೊಂಡಿದ್ದರೆ ಆ  ಸಂದರ್ಭದಲ್ಲಿ ಸಂಪೂರ್ಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

SUMMARY | There is a rule called off-ticket for children in various rules of the Railways and let’s find out how many years of age that rule applies to children 

KEYWORDS |  off ticket, Railways, children, 

Share This Article