SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 27, 2024
ರಾಜ್ಯ ಸರ್ಕಾರದ ಐದು ಗ್ಯಾರಂಟಿಯಲ್ಲಿ ಗೃಹಲಕ್ಷ್ಮಿ ಯೋಜನೆ ಸಹ ಒಂದು. ಸರ್ಕಾರ ತಿಂಗಳಿಗೆ ಕೊಡುವ 2000 ರೂಪಾಯಿಯಿಂದಾಗಿ ಎಷ್ಟೋ ಜನ ಮಹಿಳೆಯರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಕೆಲ ಮಹಿಳೆಯರು ಆ ಹಣವನ್ನು ಕೂಡಿಸಿಟ್ಟು ಗೃಹ ಬಳಕೆ ವಸ್ತುಗಳನ್ನು ಕೊಂಡು ಕೊಂಡರೆ ಇನ್ನಿತರರು ಆ ಹಣವನ್ನು ಬ್ಯುಸಿನೆಸ್‌ಗೆ ಇನ್ವೆಸ್ಟ್ ಮಾಡುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬರು ಮಹಿಳೆ ತನ್ನ ಸೊಸೆಗೆ ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣವನ್ನು ಕೂಡಿಸಿಟ್ಟು ಫ್ಯಾನ್ಸಿ ಅಂಗಡಿಯನ್ನು ತೆರೆದು ಕೊಟ್ಟಿದ್ದಾರೆ. ಭದ್ರಾವತಿ ತಾಲೂಕಿನ ನೀರಲಗಿ ಗ್ರಾಮದ ದಾಕ್ಷಾಯಿಣಿ ಪಾಟೀಲ ಎಂಬುವರು ಗೃಹಲಕ್ಷ್ಮಿ ಯೋಜನೆಯಡಿ ಬಂದಿದ್ದ20 ಸಾವಿರ ಹಣದಲ್ಲಿ ಸೊಸೆಗಾಗಿ ಫ್ಯಾನ್ಸಿ ಅಂಗಡಿ ತೆರೆದು ವ್ಯಾಪಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 10 ಕಂತಿನಲ್ಲಿ ಬಂದಿದ್ದ 20 ಸಾವಿರ ಹಣವನ್ನು ದಾಕ್ಷಾಯಿಣಿ ಅವರು ಬ್ಯಾಂಕ್ ಖಾತೆಯಲ್ಲಿಯೇ ಕೂಡಿಟ್ಟಿದ್ದರು. ಸ್ವಂತ ಉದ್ಯೋಗ ಆರಂಭಿಸಲು ಯೋಚಿಸಿದ್ದ ಸೊಸೆ ಕುಮಾರಿಗೆ ಆ ಹಣಕ್ಕೆ ಸ್ವಲ್ಪ ಹಣವನ್ನು ಕೂಡಿಸಿ ಫ್ಯಾನ್ಸಿ ಅಂಗಡಿಯನ್ನು ತೆರೆದು ಕೊಟ್ಟಿದ್ದಾರೆ.
SUMMARY | The woman has opened a fancy shop for her daughter-in-law with the money she received from the Griha Lakshmi scheme.
KEYWORDS | fancy shop, Griha Lakshmi scheme, congress,