SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 21, 2024
ಶಿವಮೊಗ್ಗ| ಮಲೆನಾಡು ಕಲಾತಂಡದ ವತಿಯಿಂದ ಇದೇ ಡಿಸೆಂಬರ್ 30ರಂದು ಮುದುಕನ ಮದುವೆ ಹಾಗೂ 31 ರಂದು ಕುರುಡು ನಂಬಿಕೆ ಎಂಬ ನಾಟಕ ಪ್ರದರ್ಶನ 2 ದಿನಗಳ ಕಾಲ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ ಎಂದು ನಿರ್ದೇಶಕ ಗಣೇಶ್ ಆರ್ ಕೆಂಚನಾಲ್ ಹೇಳಿದರು.
ಇಂದು ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು ಧುತ್ತಾಗಿರಿ ಅವರ ಹೆಸರಾಂತ ಹಾಸ್ಯ ನಾಟಕಗಳಲ್ಲಿ ಮುದುಕನ ಮದುವೆ ಮೊದಲಿನ ಸಾಲಿನಲ್ಲಿ ನಿಲ್ಲುತ್ತದೆ. ಸಾವಿರಾರು ಪ್ರದರ್ಶನ ಕಂಡ ಈ ನಾಟಕದ 2 ನೇ ಪ್ರದರ್ಶನವನ್ನು ನಮ್ಮ ತಂಡದಿಂದ ಶಿವಮೊಗ್ಗದ ಕುವೆಂಪು ಮಂದಿರದಲ್ಲಿ ನಡೆಸುತ್ತಿದ್ದೇವೆ. ಈ ನಾಟಕವನ್ನು ನಾನು (ಡಾ. ಗಣೇಶನ ಕೆಂಚನಾಲ್) ನಿರ್ದೇಶಿಸಿದ್ದೇನೆ. ಈ ನಾಟಕ ಡಿ. 30 ರಂದು ಸೋಮವಾರ ಸಂಜೆ 6:45 ಕ್ಕೆ ಕುವೆಂಪುರಂಗಮಂದಿರದಲ್ಲಿ ಪ್ರಾರಂಭವಾಗುತ್ತದೆ ಇದಕ್ಕೆ ಪ್ರವೇಶ ಶುಲ್ಕ 99 ರೂಪಾಯಿಗಳು ಇರುತ್ತದೆ ಎಂದರು.
ಹಾಗೆಯೇ ಮಾರನೇ ದಿನ ಡಿ. 31 ರಂದು ಬೆಳಿಗ್ಗೆ 10:30ಕ್ಕೆ ಕುವೆಂಪು ರಂಗಮಂದಿರದಲ್ಲಿಯೇ ಪದವಿ ಕಾಲೇಜು ಮಕ್ಕಳಿಗೆ ಪಠ್ಯವಾಗಿರುವ ಕೆಪಿ ಪೂರ್ಣ ಚಂದ್ರ ತೇಜಸ್ವಿಯವರ ಪರಿಸರ ಕಥೆ ಕೃತಿ ಆಧರಿತ ಕುರುಡು ನಂಬಿಕೆಗಳು ಎಂಬ ನಾಟಕವನ್ನು ಪ್ರದರ್ಶಿಸಲಿದ್ದೇವೆ. ಈ ನಾಟಕವನ್ನು ಡಿ ಎಂ ರಾಜ್ ಕುಮಾರ್ ನಿರ್ದೇಶಿಸಿದ್ದಾರೆ. ಎಲ್ಲರು ಆಗಮಿಸಿ ಎಂದರು
SUMMARY | Director Ganesh R Kenchanal said that the Malnad Art Troupe will be organising a two-day drama titled ‘Kurudu nambike’ on December 30 and the mudukana maduve on December 30.
KEYWORDS | drama, Kurudu nambike, mudukana maduve, shivamogaga, kuvempu rangamandira,