SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 14, 2024
ಕನ್ನಡದ ಜನಪ್ರಿಯ ಸಂಗೀತ ಕಾರ್ಯಕ್ರಮವಾದ ಸರಿಗಮಪ ಇಂದು ಸಂಜೆಯಿಂದ ಪ್ರಾರಂವಾಗಲಿದ್ದು, ಈ ಸಂಗೀತದ ಆಡಿಷನ್ ನಲ್ಲಿ ಶಿವಮೊಗ್ಗದ ಕಾರ್ತಿಕ್ ಆಯ್ಕೆಯಾಗಿದ್ದಾರೆ.
ಸರಿಗಮಪ ಆಡಿಷನ್ ಕಾರ್ಯಕ್ರಮ ಜೀ ಕನ್ನಡದಲ್ಲಿ ಇಂದು ಸಂಜೆ ನಡೆಯಲಿದೆ. ಇದರ ನಡುವೆ ಜೀ ಕನ್ನಡ ಆಡಿಷನ್ ನಲ್ಲಿ ಸೆಲೆಕ್ಟ್ ಆದವರ ಕೆಲವು ವಿಡಿಯೋ ತುಣುಕನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದೆ. ಅದರಲ್ಲಿ ಶಿವಮೊಗ್ಗದ ಕಾರ್ತಿಕ್ ಎಂಬುವವರು ನಮ್ಮೂರ ಮಂದಾರ ಹೂವೆ ಎಂಬ ಹಾಡನ್ನು ಹಾಡಿದ್ದಾರೆ. ಈ ವಿಡಿಯೋವನ್ನು ಹಾಕಿರುವ ಜೀ ಕನ್ನಡ ನಮ್ಮೂರ ಮಂದಾರ ಹೂವೆ’ ಅನ್ನೋ ಘಮಲು ಕೊಟ್ಟು ಸ್ವರ ಸಂಸ್ಥಾನಕ್ಕೆ ಬಂದ ಶಿವಮೊಗ್ಗದ ಕಾರ್ತಿಕ್ ಎಂಬ ಕ್ಯಾಪ್ಷನ್‌ನ್ನು ಹಾಕಿದೆ, ಆ ಹಾಡನ್ನ ಕೇಳಿದ ಜಡ್ಜಸ್ ಗ್ರೀನ್ ಬಜಾರ್ ಒತ್ತುವ ಮೂಲಕ ಕಾರ್ತಿಕ್‌ರನ್ನು ಸೆಲೆಕ್ಟ್ ಮಾಡಿದ್ದಾರೆ, ಈ ಹಾಡನ್ನುಕೇಳಿ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಇದು ಸೀಜನ್ 21 ರ ಪ್ಯೂರೆಸ್ಟ್ ಕ್ಲೀನ್ ಸಿಂಗಿಂಗ್ ಇದು ಎಂದಿದ್ದಾರೆ. ನಂತರ ಗಾಯಕ ರಾಜೇಶ್ ಕೃಷ್ಣನ್ ಕಾರ್ತಿಕ್‌ಗೆ ಮೆಡಲ್ ಹಾಕಿ ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ.
#Karthik
‘ನಮ್ಮೂರ ಮಂದಾರ ಹೂವೆ’ ಅನ್ನೋ ಘಮಲು ಕೊಟ್ಟು ಸ್ವರ ಸಂಸ್ಥಾನಕ್ಕೆ ಬಂದ ಶಿವಮೊಗ್ಗದ ಕಾರ್ತಿಕ್!
White Gold ಸರಿಗಮಪ ‘ಮೆಗಾ ಆಡಿಷನ್’ | ಇಂದಿನಿಂದ ಶನಿ-ಭಾನು ರಾತ್ರಿ 7:30ಕ್ಕೆ.#SaReGaMaPa #SRGMP #MegaAudition #14thDec #ZeeKannada #BayasidaBaagiluTegeyona pic.twitter.com/PeTsheCv5E— Zee Kannada (@ZeeKannada) December 14, 2024
SUMMARY | Karthik from Shivamogga has been selected for the audition for the popular Kannada music show Saregamapa, which will begin this evening.
KEYWORDS | Shivamogga, Saregamapa, Karthik, kannada,