SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 14, 2024
ಶಿವಮೊಗ್ಗ | ಬಂಜಾರ್ ವಿದ್ಯಾರ್ಥಿ ಸಂಘ ಹಾಗೂ ಬಂಜಾರ್ ತಾಲೂಕು ಘಟಕದಿಂದ ದೇಶದಲ್ಲಿ ಜನಗಣತಿ ಆಗುವವರೆಗೆ ಒಳಮೀಸಲಾತಿಯನ್ನು ಜಾರಿಗೊಳಿಸಬಾರದೆಂದು ಇದೇ ಡಿಸೆಂಬರ್ 17 ರಂದು ಬೆಳಗಾವಿ ಸುವರ್ಣ ಸೌಧ ಚಲೋ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಕುರಿತು ಬಂಜಾರ್ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಿ ಆರ್ ಗಿರೀಶ್ ಹೇಳಿದರು.
ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಪ್ರೀಂಕೋರ್ಟ್ 2024 ಆಗಸ್ಟ್‌ನಲ್ಲಿ ಪರಿಶಿಷ್ಟಜಾತಿ, ಹಾಗೂ ಪರಿಶಿಷ್ಟ ಪಂಗಡಗಳಿಗೆ ಒಳಮೀಸಲಾತಿ ಕಲ್ಪಿಸುವುದು ಆಯಾ ರಾಜ್ಯಕ್ಕೆ ಬಿಟ್ಟಿದ್ದು ಎಂದು ಹೇಳಿದೆ. ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಹೆಚ್.ಎಸ್.ನಾಗಮೋಹನ್‌ದಾಸ್ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗವನ್ನು ರಚಿಸಿ, ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯ ಕುರಿತು ದತ್ತಾಂಶ ಪಡೆದು ಒಳಮೀಸಲಾತಿ ಬಗ್ಗೆ 2 ತಿಂಗಳ ಒಳಗೆ ವರದಿ ಸಲ್ಲಿಸಲು ಸೂಚಿಸಿದೆ ಇದು ಅಸಾಧ್ಯವಾದ ಮಾತು. ಈ ಹಿಂದೆ 2011 ರಲ್ಲಿ ಜನಗಣತಿ ನಡೆಸಿದಾಗ ನಮ್ಮ ಜನಾಂಗದ ಜನಸಂಖ್ಯೆ 11 ಲಕ್ಷ ಎಂದು ಹೇಳಿದ್ದರು ಆದರೆ ಅದಕ್ಕಿಂತ ಹೆಚ್ಚು ನಮ್ಮ ಜನಸಂಖ್ಯೆ ಇದೆ. ಪ್ರಸ್ತುತ ರಾಜ್ಯಸರ್ಕಾರದ ಬಳಿ ಜನಸಂಖ್ಯೆಯ ಯಾವುದೇ ದತ್ತಾಂಶಗಳಿಲ್ಲ 2025-26 ನೇ ಇಸವಿಗೆ ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುವುದಾಗಿ ತಿಳಿಸಿದೆ. ಆ ಗಣತಿ ಆದ ಬಳಿಕವೇ ಒಳಮೀಸಲಾತಿ ಜಾರಿಗೊಳಿಸಬೇಕು. ಈ ಹಿನ್ನಲೆ ಡಿಸೆಂಬರ್ 17 ರಂದು ಬೆಳಗಾವಿ ಸುವರ್ಣ ಸೌಧದ ಎದುರು ಭೋವಿ, ಬಂಜಾರ, ಕೊರಚ, ಕೊರಮ ಮಹಾ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದರು.
SUMMARY | The Banjar Students’ Union and the Banjar taluk unit will hold a ‘Suvarna Soudha Chalo’ protest in Belagavi on December 17 to protest against the implementation of internal reservation till the census is conducted in the country
KEYWORDS | Banjar Students, Banjar taluk unit, Suvarna Soudha, protest,