ಲಾರಿ ಹಾಗೂ ಬಸ್‌ ನಡುವೆ ಭೀಕರ ಅಪಘಾತ | ಬೆಚ್ಚಿ ಬೀಳಿಸುತ್ತಿದೆ ಕ್ಯಾಮರಾದ ದೃಶ್ಯ |

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 11, 2024

ಬಸ್‌ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬಸ್‌ನಲ್ಲಿದ್ದ 10 ಮಂದಿಗೆ ಗಂಭೀರ ಗಾಯವಾಗಿರುವ ಘಟನೆ ಚೆನ್ನೈ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರೀಪೆರಂಬದೂರಿನ ಸಮೀಪ ನಡೆದಿದೆ. ಅಪಘಾತದ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ವಿಡಿಯೋದಲ್ಲಿರುವಂತೆ ವ್ಯಕ್ತಿಯೊಬ್ಬ ರಸ್ತೆ ದಾಟುತ್ತಿರುತ್ತಾನೆ. ಆ ವೇಳೆ ಖಾಸಗಿ ಬಸ್‌ನ ಚಾಲಕ ಬಸ್‌ ಅನ್ನು ನಿಧಾನವಾಗಿ ಚಲಾಯಿಸುತ್ತಿರುತ್ತಾನೆ. ಆಗ ಹಿಂಬದಿಯಿಂದ ಬಂದ ಲಾರಿಯೊಂದು ರಭಸವಾಗಿ ಬಸ್‌ಗೆ ಡಿಕ್ಕಿ ಹೊಡೆಯುತ್ತದೆ. ಗುದ್ದಿದ ರಭಸಕ್ಕೆ ಆ ಖಾಸಗಿ ಬಸ್ ರಸ್ತೆ ದಾಟುತ್ತಿದ್ದ ವ್ಯಕ್ತಿ ಮೇಲೆ ಹರಿದು ಡಿವೈಡರ್‌ ಮೇಲೆ ಮಗುಚಿ ಬಿದ್ದಿದೆ. ಇದರ ಪರಿಣಾಮ ಬಸ್‌ನಲ್ಲಿದ್ದ ಹತ್ತು ಮಂದಿಗೆ ಗಂಬೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 

SUMMARY | At least 10 people in the bus were seriously injured when a bus collided with a lorry at Sami in Sriperumbudur on the Chennai-Bengaluru National Highway.

 

KEYWORDS |  Chennai Bengaluru, National Highway, bus lorry accident,

Share This Article