ಡ್ರಿಂಕ್ ಆ್ಯಂಡ್ ಡ್ರೈವ್‌ ಮಾಡೋರಿಗೆ ಶಾಕ್‌ | 182 DL ಸಸ್ಪೆಂಡ್‌

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 9, 2024

ಬೆಂಗಳೂರು | ಮದ್ಯಪಾನ ಮಾಡಿ ವಾಹನ ಚಲಾಯಿಸುವ ಚಾಲಕರು ಮತ್ತು ಸವಾರರ ವಿರುದ್ಧ ಬೆಂಗಳೂರು ಸಂಚಾರ ಪೂರ್ವ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ. ಮದ್ಯಪಾನ ಮಾಡಿದ ವಾಹನ ಚಲಾಯಿಸಿದ 182 ಜನರ dl ಅನ್ನು ಅಮಾನತುಗೊಳಿಸಿದ್ದಾರೆ.

ಡಿಸೆಂಬರ್‌ 5 ರಿಂದ 8 ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನ ಸಂಚಾರ ಪೂರ್ವ ವಿಭಾಗದಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದ್ದರು. ಈ ಮೂರು ದಿನಗಳಲ್ಲಿ ಪೊಲೀಸರು ಒಟ್ಟು16,384 ಜನರನ್ನು ತಪಾಸಣೆಗೆ ಒಳಪಡಿಸಿದ್ದರು. ಈ ಪೈಕಿ 182 ಜನ ಮಧ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವುದು ತಿಳಿದುಬಂದಿದೆ. ತಕ್ಷಣ ಪೊಲೀಸರು ಮದ್ಯಪಾನ ಮಾಡಿದ ವಾಹನ ಸವಾರರ ಡಿ. ಎಲ್‌ ಗಳನ್ನು ಅರ್‌ ಟಿ ಓ ಕಚೇರಿಗೆ ಕಳುಹಿಸಿ ಅಮಾನತು ಗೊಳಿಸುವಂತೆ ತಿಳಿಸಿದ್ದಾರೆ. ಈ ಮಾಹಿತಿಯನ್ನು ಪೊಲೀಸರು ಪ್ರಕಟಣೆ ಮೂಲಕ ಹಂಚಿಕೊಂಡಿದ್ದಾರೆ.

SUMMARY | The police have suspended the DL of 182 people for driving under the influence of alcohol.


KEYWORDS | police, DL, alcohol, driving, drink and drive case,

Share This Article